ಕಾಡಂಗೇರಾ ಬಿ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಅಮೃತ ಅಭಿಯಾನದ ತರಬೇತಿಯ ಶಿಬಿರ

ಯಾದಗಿರಿ : ಜಿಲ್ಲೆಯ ವಡಗೇರಾ ತಾಲೂಕಿನ ಕಾಡಮಗೇರಾ ಬಿ ಗ್ರಾಮ ಪಂಚಾಯಿತಿಯಲ್ಲಿ ಇಂದು ಅನೀಮಿಯಾ ಮುಕ್ತ ಮತ್ತು ಮುಟ್ಟಿನ ನೈರ್ಮಲ್ಯತೆ ಆರೋಗ್ಯ ಅಮೃತ ಅಭಿಯಾನದ ಒಂದು ದಿನದ ತರಬೇತಿಯ ಶಿಬಿರ ನಡೆಯಿತು.ಸದರಿ ಅಭಿಯಾನದ ಒಂದು ದಿನದ ತರಬೇತಿಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಸಿದ್ದಲಿಂಗಮ್ಮ ಚಾಮನಾಳ ಅಧ್ಯಕ್ಷತೆಯಲ್ಲಿ ನಡೆಯಿತು.

‌ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶಶಿಕಾಂತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಹಿರಿಯ ಮೇಲ್ವಿಚಾರಕಿಯಾದ ಕವಿತಾ ಕುಲಕರ್ಣಿ ತರಬೇತಿ ನೀಡಿದರು. ರಕ್ತ ಹೀನತೆ, ಬಾಲ್ಯ ವಿವಾಹ ನಿಷೇಧ,ಅಪೌಷ್ಟಿಕತೆ,ಮಕ್ಕಳ ಹಕ್ಕುಗಳ ಸ್ಥಿತಿಗತಿಯ ಬಗ್ಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು‌ ಕೆಲಸ ಮಾಡುವ ಕುರಿತು, ಜನರ ಅಭಿಪ್ರಾಯ ತಿಳಿಸಿದರು.

ಗ್ರಾಮ ಪಂಚಾಯತಿಯ ಸದಸ್ಯರು, ಪಿಎಚ್ ಸಿಒ ಜಾಮೀಳಾ ಬೆಗಂ, ಗಣಕಯಂತ್ರ ನಿರ್ವಾಹಕರಾದ ಸಿದ್ದಣ್ಣ ಸಜ್ಜನ, ಕರವಸೂಲಿಗಾರರಾದ, ಮಲ್ಲಣ್ಣ ಹಾನೂರ, ಆಶಾಕಾರ್ಯಕರ್ತರಾದ ಮಹಾದೇವಿ, ಮಹಾಂತಮ್ಮ, ಕಾಳಮ್ಮ, ಕೆಎಚ್ ಪಿಟಿ ಸ್ವಯಂ ಸೇವಕರಾದ ಭೀರಲಿಂಗಪ್ಪ‌ ಪೂಜಾರಿ ಕುರಕುಂದಾ ಹಾಗೂ ಇನ್ನಿತರರು ಹಾಜರಿದ್ದರು.