ಕಾಲೇಜಿನ ಮೂಲಭೂತ ಸೌಲಭ್ಯಕ್ಕೆ ಪ್ರಾಮಾಣಿಕ ಪ್ರಯತ್ನ : ನಾರಾಯಣಾಚಾರ್ಯ

ಶಹಾಪುರ: ನಗರದ ಬಾಲಕಿಯರ ಪಿಯುಸಿ ಕಾಲೇಜಿನಲ್ಲಿ ಕಲಾವಿಭಾಗ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ 1600 ವಿದ್ಯಾರ್ಥಿನಿಯರಿದ್ದು,ಈಗಿರುವ ಇರುವ ಸೌಕರ್ಯ ಸಾಕಾಗುತ್ತಿಲ್ಲ,ಈ ಕುರಿತಂತೆ ಶಾಸಕರಿಗೆ ಅಗತ್ಯಸೌಲಭ್ಯ ಕುರಿತು ಮನವಿ ಮಾಡಲಾಗಿದೆ ಎಂದು ಕಾಲೇಜು ಶಿಕ್ಷಣ ಸಮಿತಿಯ ಸದಸ್ಯರಾದ ನಾರಾಯಣಾಚಾರ್ಯ ಸಗರ ತಿಳಿಸಿದರು.

ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿಪ್ರಾಯ ಹಂಚಿಕೊಂಡ ಅವರು,ಬಾಲಕಿಯರ ಪ್ರೌಢಶಾಲೆ ಹಾಗೂ ಕಾಲೇಜು ಒಂದೆಡೆಯಿರುವುದರಿಂದ ಕುಡಿಯುವ ನೀರು ಶೌಚಾಲಯದ ವಿದ್ಯಾರ್ಥಿನಿಯರ ಸಂಖ್ಯೆಗನುಗುಣವಾಗಿ ಇನ್ನು ಅವಕಾಶಬೇಕು.

ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಸಮಗ್ರ ಅವಶ್ಯಕತೆ ಕುರಿತು ಸಮಿತಿಯ ಪರವಾಗಿ ಮನವಿ ಮಾಡಲಾಗಿದ್ದು, ಆದ್ಯತೆಗನುಗುಣವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.ವಿದ್ಯಾರ್ಥಿನಿಯರು ಸರ್ಕಾರದ ಶೈಕ್ಷಣಿಕ ಯೋಜನೆಗಳನ್ನು ಸಾರ್ಥಕವಾಗಿ ಬಳಸಿಕೊಂಡು, ಉನ್ನತ ಸ್ಥಾನ ಪಡೆದು ಶಹಾಪುರಕ್ಕೆ ಕೀರ್ತಿ ತರಬೇಕು ಎಂದರು. ಈ ಸಂದರ್ಭದಲ್ಲಿ ಪ್ರಾಚಾರ್ಯರು ಗಣ್ಯರು ಇದ್ದರು.

Leave a Reply

Your email address will not be published. Required fields are marked *