ನಗನೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ : ಕ್ಷೇತ್ರದ ಅಭಿವೃದ್ಧಿಯೆ ನನ್ನ ಧ್ಯೈಯ : ದರ್ಶನಾಪುರ

ಶಹಾಪುರ : ಶಹಾಪೂರ ಕ್ಷೇತ್ರದ ನಗನೂರ ಗ್ರಾಮದಲ್ಲಿ  ಶಹಾಪೂರ ಮತಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಸುಮಾರು 9.34ಲಕ್ಷ ರೂಪಾಯಿ ವೆಚ್ಚದಲ್ಲಿ 110 ಕೆ.ಇ.ವಿ ವಿದ್ಯುತ್ ಕೆ ಇ ಬಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು,ಗ್ರಾಮದಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ನಗನೂರ, ಕೆಂಭಾವಿ ಪಟ್ಟಣ ಸೇರಿದಂತೆ ಕ್ಷೇತ್ರದಾದ್ಯಂತ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಚಿತ್ರದ ಅಭಿವೃದ್ಧಿಯೇ ನನ್ನ ಧ್ಯೇಯವಾಗಿದೆ ಎಂದು ಹೇಳಿದರು.ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ಅದಕ್ಕೆ ಬೇಕಾಗುವ ಸುಮಾರು 9.50 ಕೋಟಿ ವೆಚ್ಚದಲ್ಲಿ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರವನ್ನು ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮಾತು ಕೊಟ್ಟಂತೆ ನಡೆದುಕೊಳ್ಳುತ್ತದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಅಧಿಕಾರ ಬಂದರೆ ಸರ್ಕಾರದ ಪ್ರಣಾಳಿಕೆಯಲ್ಲಿರುವ ಎಲ್ಲಾ ಭರವಸೆಗಳನ್ನು ನಾವು ಈಡೇರಿಸುತ್ತೇವೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಬಡವರಿಗೆ ಮಹಿಳೆಯರಿಗೆ ಯುವಕರಿಗೆ ಆದ್ಯತೆ ನೀಡಿ ಜನಪರ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.

ಪ್ರಸ್ತುತ ಬಿಜೆಪಿ ಸರಕಾರವು ಹಲವು ಹಗರಣಗಳಾದ ಪಿಎಸ್ಐ ಹಗರಣ, ಕೃಷಿ ಭಾಗ್ಯ ಯೋಜನೆಯಲ್ಲಿ 800 ಕೋಟಿ ಹಗರಣ 9600 ಕೋಟಿ ಮೌಲ್ಯದ ಜಮೀನು ಕಡಿಮೆ ದುಡ್ಡಿಗೆ ಪರಭಾರೆ ಮಾಡಿದ ಹಗರಣ ಇನ್ನೂ ಸಾಕಷ್ಟು ಹಗರಣಗಳನ್ನು ಮಾಡಿದ್ದು, ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುವರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಶರಣಪ್ಪ ಶರಣರು ದಾಸೋಹ ಮಠ ನಗನೂರ,ಶ್ರೀ ಖಂಡೆಪ್ಪ ತಾತನವರು, ಶರಣಪ್ಪ ಸಲ್ಲಾದಪುರ, ಸಿದ್ದನಗೌಡ ಪಾಟೀಲ ಕೆಂಭಾವಿ, ಶಂಕ್ರಣ ವಣಿಕ್ಯಾಳ, ಬಸಣ್ಣ ಬುದೂರ,ವಾಮನರಾವು ದೇಶಪಾಂಡೆ ಕೆಂಭಾವಿ, ಖಾಜಾಪಟೀಲ್ ಕಾಚೂರ್, ಶಿವಮಾಂತ ಚಂದಾಪುರ,ವಿನೋದ ಪಾಟೀಲ ದೋರನಹಳ್ಳಿ,ಬಸವರಾಜ ಪಾಟೀಲ ಚಿಂಚೋಳಿ,ಬಸನಗೌಡ ಪಾಟೀಲ ಹೊಸಮನಿ ಯಾಳಗಿ, ಶರಣಬಸ್ಸು ದಿಗ್ಗಾವಿ, ಶಶಿಧರ ಯಾಳಗಿ, ಸಾಹೇಬಲಾಲ ಆಂದೇಲಿ, ದೇವಪ್ಪ ಮ್ಯಾಗೇರಿ, ಲಾಲಪ್ಪ ಹೊಸಮನಿ ಆಲ್ಹಾಳ, ಶಿವರಾಜ ಬುದೂರ, ವಿನಾಯಕ ಗೂಗಲ್, ಅಮೀನರೆಡ್ಡಿ ಬಿರಾದಾರ ಕಿರದ್ದಳ್ಳಿ, ಸಂಗನಗೌಡ ಮರಡ್ಡಿ ಹದನೂರ, ಕೃಷ್ಣಯ್ಯ ಗುತ್ತೇದಾರ, ಶಾಂತಗೌಡ ಪೋ ಪಾಟೀಲ ಮಾಲಹಳ್ಳಿ, ರಾಮಸ್ವಾಮಿ ಭೋವಿ, ಅಯ್ಯಪ್ಪಗೌಡ ವಂದಗನೂರ, ರುದ್ರಗೌಡ ನಿಂಗನಗೌಡ ನಗನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author