ವಡಗೇರಾ : ತಾಲೂಕಿನ ಕ್ಯಾತ್ನಾಳ ಗ್ರಾಮದಲ್ಲಿ ಯಾದಗಿರಿ ವಿದಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಸೇವಾ ಅಭ್ಯರ್ಥಿಗಳಾದ ಶರಣಪ್ಪ ಸಲಾದಪೂರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಗ್ರಾಮಿಣ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗಳನ್ನು ಶರಣಪ್ಪ ಸಲಾದಪೂರ ಉದ್ಘಾಟಿಸಿ ಮಾತನಾಡಿದರು. ಭಾರತ ಜಗತ್ತಿನ ಜನ ಸಂಖ್ಯೆಯಲ್ಲಿ ಎರಡನೆ ಸ್ಥಾನ ಪಡೆದರೂ ಅಂತರಾಷ್ಟ್ರೀಯ ಕ್ರೀಡಾಕೂಟಗಳ ಪದಕಗಳ ಪಟ್ಟಿಯಲ್ಲಿ ಬಹಳ ಕೆಳಗಿನ ಸ್ಥಾನಗಳಲ್ಲಿದೆ. ಕಾರಣ ನಮ್ಮ ದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚು ಮಹತ್ವ ಇಲ್ಲದಿರುವದು. ಊರಿನ ಶಾಲಾ ಕಾಲೇಜುಗಳ ಕ್ರೀಡಾಂಗಣ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಮತ್ತು ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದರೆ ಭವಿಷ್ಯದಲ್ಲಿ ಮಕ್ಕಳು ಸರ್ವತೋಮುಖ ಅಭಿವೃದ್ಧಿ ಹೊಂದಿ ಅಂತರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪದಕಗಳ ಪಟ್ಟಿಯಲ್ಲಿ ದೇಶ ಉನ್ನತಿ ಸಾಧಿಸುತ್ತದೆ.ಕ್ರೀಡೆಗಳು ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿವೆ. ಕ್ರೀಡೆಗಳು ಮನುಷ್ಯನ ದಿನ ನಿತ್ಯದ ಬದುಕಿನ ಕೆಲಸ ಕಾರ್ಯಗಳು ಮಾಡಲು ನವಚೈತನ್ಯ ನೀಡುತ್ತವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಅಂಗವಿಕಲ ಹಾಗೂ ವಿಕಲಚೇತನ ಜಿಲ್ಲಾಧಿಕಾರಿಗಳಾದ ಶರಣಗೌಡ ಪಾಟೀಲ್ ಕ್ಯಾತ್ನಾಳ ಮಾತನಾಡಿ, ಕ್ರೀಡೆಗಳು ಮನುಷ್ಯನಿಗೆ ಮಾನಸಿಕ ಹಾಗೂ ದೈಹಿಕ ಸದೃಡತೆಯನ್ನು ನೀಡುತ್ತದೆ. ಸ್ನೇಹ ಸಹಕಾರ ಮನೋಭಾವ ಬೆಳೆಸುತ್ತದೆಂದು ಹೇಳಿದರು. ಕ್ರೀಡಾ ಪಟುಗಳು ಕ್ರೀಡಾ ಮನೋಭಾವದಿಂದ ಆಟವಾಡಬೇಕು. ಸೋಲು ಕೂಡು ಮುಂದೆ ಗೆಲುವಿಗೆ ರಹದಾರಿ ಮಾಡಿಕೊಳ್ಳಬೇಕೆಂದು ಹೇಳಿದರು.
ಗಾಜರಕೋಟ,ಗುಂಡಗುರ್ತಿ,ಕಾಡಮಗೇರಾ,ಕನ್ಯಾಕೋಳೂರು,ಬೋಳಾರ ಸೇರಿದಂತೆ
21 ಗ್ರಾಮಗಳ ಪಂದ್ಯಗಳು ಪಾಲ್ಗೊಂಡಿದ್ದವು.
ಕಾರ್ಯಕ್ರಮದಲ್ಲಿ ವಿಜಯ ಕುಮಾರ ಸ್ವಾಮಿ, ,ಶರಣಪ್ಪ ದೊಡ್ಮನಿ, ದೇವಿಂದ್ರಪ್ಪ, ನಾಡಗೌಡ ಬಿರಾದಾರ, ತಿಪ್ಪಣ್ಣ ಮಾಸ್ತರ,ಬಸವರಾಜ ಕಲಾವಿದರು ಹಾಗೂ ಗ್ರಾಮದ ಹಿರಿಯ ಮುಖಂಡರು ಭಾಗವಹಿಸಿದ್ದರು.
Post Views: 131