ಗ್ರಾಮ ಪಂಚಾಯಿತಿ ನಿರ್ಲಕ್ಷ ? : ಬೆನಕನಳ್ಳಿ ಕಲುಷಿತ ನೀರು ಕುಡಿದು 16 ಜನ ಅಸ್ವಸ್ಥ

ಶಹಾಪುರ : ತಾಲುಕಿನ ಬೆನಕನಳ್ಳಿ ಜೆ ಗ್ರಾಮದಲ್ಲಿ  ಕಳದೆ ಮೂರು ದಿನಗಳಿಂದ ಕಲುಷಿತ ನೀರು ಕುಡಿದು 16 ಜನರಿಗೆ ವಾಂತಿ ಬೇದಿಯಾದ ಘಟನೆ ನಡೆದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಪೈಪಲೈನ ಹೊಡೆದು ರಸ್ತೆಯ ಚರಂಡಿ ನೀರು ಸೇರಿರಬಹುದು ಎಂದು ಅಂದಾಜಿಸಲಾಗಿದೆ.
   ಗ್ರಾ,ಪಂ, ಆಡಳಿತ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸ್ಥಳಿಯರ ವಾದವಾಗಿದೆ. ಇಲ್ಲಿನ ಕುಡಿಯುವ ನೀರಿನ ಪೈಪ್ಗಳು ಹೊಡೆದಿರಬಹುದು. ಆರೇಳು ತಿಂಗಳು ಗತಿಸಿದರೂ ರಿಪೇರಿ ಮಾಡದೆ ಗ್ರಾಪಂ ಅಭಿವೃದ್ದಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎನ್ನುವ ಆರೋಪ ವ್ಯಕ್ತವಾಗುತ್ತಿದೆ ! ನೀರಿನ ಟ್ಯಾಂಕ್ ಸ್ವಚ್ಚಗೊಳಿಸದೆ ಇರುವದು ವಾಂತಿ ಬೇದಿಗೆ ಕಾರಣವೆಂದು ತಿಳಿದು ಬಂದಿದೆ. ಕುಡಿಯುವ ನೀರಿನ ಗ್ರಾ,ಪಂ, ಪಂಪ್ ಆಪರೇಟರ ಮಧ್ಯಾನದ ಸಮಯದಲ್ಲೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ ಎನ್ನಲಾಗಿದ್ದು, ಬೆಳಗಿನ ಜಾವದಲ್ಲಿ ನೀರು ಹರಿದು ಬರುತ್ತಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ.
   ವಾಂತಿ ಬೇದಿ ಉಂಟಾಗಿ ತಿವೃ ಅಸ್ವಸ್ಥಗೊಂಡ ೧೬ ಜನ ರೋಗಿಗಳಿಗೆ ಶಹಾಪುರ ಮತ್ತು ಸ್ತಳಿಯ ಬೆನಕನಳ್ಳಿ ಗ್ರಾಮದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ, ರಮೇಶ ಗುತ್ತೆದಾರ ಪತ್ರಿಕೆಗೆ ತಿಳಿಸಿದ್ದಾರೆ. ಈಗಾಗಲೆ ಹಲವಾರು ಜನ ಗುಣಮುಖರಾಗುತ್ತಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಕುಡಿಯುವ ನೀರು ಕುರಿತು ಜಾಗ್ರತಿ ವಹಿಸಿಕೊಂಡು ಗ್ರಾ,ಪಂ ಆಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕು.

ಕೆಲವು ದಿನಗಳಿಂದ ಬೇವಿನಹಳ್ಳಿಯಲ್ಲಿ ಕಾಲುಷಿತ ನೀರಿನಿಂದ ವಾಂತಿಭೇದಿಯಾಗುತ್ತಿದ್ದು, ಪ್ರಸ್ತುತದಲ್ಲಿ ಯಾವುದೇ ಘಟನೆಗಳು ನಡೆದಿಲ್ಲ. ಪ್ರಾರಂಭದ ದಿನಗಳನ್ನು ಹೊರತುಪಡಿಸಿದರೆ ಎಲ್ಲವೂ ಸರಿಯಾಗಿದೆ. ಹೊರಗಡೆಯ ಪೈಪ್ ಗಳನ್ನು ರಿಪೇರಿ ಮಾಡಲಾಗಿದೆ. ಗ್ರಾಮದಲ್ಲಿನ ಟ್ಯಾಂಕರನ್ನು ಶುದ್ಧೀಕರಿಸಲಾಗಿದೆ. ಪ್ರಸ್ತುತ ಟ್ಯಾಂಕರ್ ಮುಖಾಂತರ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಆರ್ ಡಬ್ಲ್ಯೂ ಎಸ್ ರವರ ಸುಪರ್ದಿಯಲ್ಲಿದ್ದು ಈಗಾಗಲೇ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ನಮ್ಮ ನಡೆ ನಮ್ಮ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮನವಿ ಮಾಡಲಾಗಿದೆ. ಇಲ್ಲಿಯವರಿಗೆ ಆ ಡಬ್ಲ್ಯೂ ಎಸ್ ಏಜೆನ್ಸಿ ಯವರು ಶುದ್ಧ ಕೂಡಿಯುವ ನೀರಿನ ಘಟಕವನ್ನು ರಿಪೇರಿ ಮಾಡಿಲ್ಲ.

ದೇವರಾಜ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕನ್ಯಾಕೊಳೂರು

About The Author