ಶ್ರೀಶೈಲ ಆಡಳಿತ ಅಧಿಕಾರಿ ಲವನಕುಮಾರಗೆ  ಸನ್ಮಾನ : ಶ್ರೀಶೈಲದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಶರಣು ಗದ್ದುಗೆ ಮನವಿ

 ಶ್ರೀಶೈಲದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಕರವೇ ಉತ್ತರ ಕರ್ನಾಟಕ ಅಧ್ಯಕ್ಷರಾದ ಶರಣು ಬಿ ಗದ್ದುಗೆ ಅವರು  ಶ್ರೀ ಶೈಲ ಮಲ್ಲಿಕಾರ್ಜುನ ದೇವಾಲಯ ಆಡಳಿತ ಅಧಿಕಾರಿ ಲವನಕೂಮಾರ ರವರಿಗೆ ಮನವಿ ಮಾಡಿದರು.ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ  ಭಜನಾ ಸೇವಾ ಸಮಿತಿಯ ನೇತೃತ್ವದಲ್ಲಿ 21 ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ  ಶ್ರೀ ಶೈಲ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಕರ್ನಾಟಕದ ಹಲವಾರು ಜಿಲ್ಲೆಗಳಿಂದ ಮಹಾ ಶಿವರಾತ್ರಿ,ಯುಗಾದಿಯ ಸಂದರ್ಭದಲ್ಲಿ ಅಪಾರ ಪ್ರಮಾಣದಲ್ಲಿ ಬರುವ    ಪಾದಯಾತ್ರಿಕರು ಬರುತ್ತಾರೆ ಹಾಗೂ ಕ್ಷೇತ್ರದಲ್ಲಿ ವಾಸಿಸುವ ಮತ್ತು ಯಾತ್ರಿಕರಿಗೆ ವಸತಿ ಮಾಡಲು ಸೌಲಭ್ಯಗಳನ್ನು ನೀಡಬೇಕು ಎಂದು  ಮನವಿ ಸಲ್ಲಿಸಿ ಗೌರವಿಸಿದರು ನಂತರ ಲವನಕುಮಾರವರಿಗೆ  ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಅಪಾರ ಭಕ್ತಸ್ತೋಮ ಪಾಲ್ಗೊಂಡಿದ್ದರು.

One attachment • Scanned by Gmail

Leave a Reply

Your email address will not be published. Required fields are marked *