ಮಹಾಶೈವ ವಾರ್ತೆ : ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಶಿಖರ ಮತ್ತು ಗೋಪುರನಿರ್ಮಾಣ ಕಾರ್ಯಕ್ಕೆ ಚಾಲನೆ

ಮಕರಸಂಕ್ರಾಂತಿಯ ಪುಣ್ಯದಿನದಂದು ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಮತ್ತು ಕ್ಷೇತ್ರೇಶ್ವರಿ ವಿಶ್ವೇಶ್ವರಿ ದುರ್ಗಾದೇವಿಯರ ದೇವಸ್ಥಾನಗಳ ಶಿಖರ ಮತ್ತು ಗೋಪುರಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಸಾನ್ನಿಧ್ಯದಲ್ಲಿ ನಡೆದ ಶಿವಕಾರ್ಯದಲ್ಲಿ ಸುಲ್ತಾನಪುರದ ಗಂಗಾಧರ ಶಾಂತಾಶ್ರಮದ ಅಧ್ಯಕ್ಷರಾದ ಶ್ರೀ ಶರಣಪ್ಪ ಶರಣರು ಶಿವ ದುರ್ಗಾ ದೇವಿಯರ ಸನ್ನಿಧಿಯಲ್ಲಿ ಇಟ್ಟಿಗೆಗಳನ್ನು ಪೂಜಿಸುವ ಮೂಲಕ ದೇವಸ್ಥಾನಗಳ ಶಿಖರ ಮತ್ತು ಗೋಪುರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಶಿವ ದುರ್ಗಾ ದೇವಸ್ಥಾನಗಳ ಶಿಖರ ಮತ್ತು ಗೋಪುರಗಳ ನಿರ್ಮಾಣಕಾರ್ಯದ ಪ್ರಾರಂಭೋತ್ಸವದ ಸುದ್ದಿ ತಿಳಿದು ದೇವದುರ್ಗ ವಿಧಾನಸಭಾ ಕ್ಷೇತ್ರದ ಜೆ ಡಿ ಎಸ್ ಅಭ್ಯರ್ಥಿ ಶ್ರೀಮತಿ ಕರಿಯಮ್ಮ ನಾಯಕ್ ಅವರು ಶ್ರೀಕ್ಷೇತ್ರ ಕೈಲಾಸಕ್ಕೆಆಗಮಿಸಿ,ಶಿವಕಾರ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಸನ್ಮಾನಿಸಿ,ಆಶೀರ್ವಾದ ಪಡೆದರು.

ಸುಲ್ತಾನಪುರ ಗಂಗಾಧರ ಶಾಂತಾಶ್ರಮದ ಅಧ್ಯಕ್ಷರಾದ ಶ್ರೀ ಶರಣಪ್ಪ ಶರಣರು,ಚೆನ್ನಪ್ಪ ಗೌಡ ಮಾಲಿಪಟೀಲ್, ಮೋನೇಶ ಪತ್ತಾರ, ಬಾಬುಗೌಡ ಯಾದವ ಸುಲ್ತಾನಪುರ,ವೀರೇಶ ಯಾದವ್,ಮೃತ್ಯುಂಜಯ ಯಾದವ್,ಮಧು ಯಾದವ್ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತಸಮೂಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ.

Leave a Reply

Your email address will not be published. Required fields are marked *