ಮಹಾಶೈವ ವಾರ್ತೆ : ಮಹಾಶೈವ ಧರ್ಮಪೀಠದಲ್ಲಿಂದು ‘ ಅಷ್ಟೋತ್ತರಶತನಾಮಾವಳಿ ಮಾಲಿಕೆಗಳ’ ಕೃತಿಗಳ ಲೋಕಾರ್ಪಣೆ

ಮಕರಸಂಕ್ರಾಂತಿಯ ದಿನವಾದ ಇಂದು ಗಬ್ಬೂರಿನ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ವಿವಿಧ ದೇವರುಗಳ ಅಷ್ಟೋತ್ತರಶತನಾಮಾವಳಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ ಶ್ರೀ ಗಣೇಶಾಷ್ಟೋತ್ತರ ಶತನಾಮಾವಳಿ’ ‘ಶ್ರೀ ಶಿವಾಷ್ಟೋತ್ತ ಶತನಾಮಾವಳಿ’, ‘ಶ್ರೀ ದುರ್ಗಾ ಅಷ್ಟೋತ್ತರ ಶತನಾಮಾವಳಿ’ , ‘ ಶ್ರೀ ಆಂಜನೇಯ ಅಷ್ಟೋತ್ತರ ಶತನಾಮಾವಳಿ’ ‘ ಶ್ರೀ ಕಾಳಿ ಅಷ್ಟೋತ್ತರ ಶತನಾಮಾವಳಿ’ಮತ್ತು ‘ ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಶತನಾಮಾವಳಿ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು.

ಸುಲ್ತಾನಪುರದ ಗಂಗಾಧರ ಶಾಂತಾಶ್ರಮದ ಶ್ರಿ ಶರಣಪ್ಪ ಶರಣರು,ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠ ಸಾಂಸ್ಕೃತಿಕ ಸಮಿತಿಯ ಸದಸ್ಯರಾದ ಬಸವರಾಜ ಸಿನ್ನೂರು, ಬಸವರಾಜ ಕರೆಗಾರ,ದಾಸೋಹ ಸಮಿತಿಯ ಸಂಚಾಲಕರಾದ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಪಂಚಯ್ಯ ಕರಿಗಾರ,ಗೋಪಾಲ ಮಸೀದಪುರ,ಈರಪ್ಪ ಮಸೀದಪುರ,ಶರಣಪ್ಪ ಪೇಂಟರ್,ಮೃತ್ಯುಂಜಯ,ಯಲ್ಲಪ್ಪ ಕರಿಗಾರ,ಬಾಬು ಯಾದವ್ ಸುಲ್ತಾನಪುರ ಮೊದಲಾದವರು ಉಪಸ್ಥಿತರಿದ್ದರು.

ಮಹಾಶೈವ ಧರ್ಮಪೀಠವು ಭಕ್ತಿಯ ಬೀಜಗಳನ್ನು ಬಿತ್ತಲು ಪ್ರಾರಂಭಿಸಿದ ಅಷ್ಟೋತ್ತರಶತನಾಮಾವಳಿ ಮಾಲಿಕೆಯ ಪುಸ್ತಕಗಳ ಪ್ರಕಟಣೆಗೆ ಸೇವೆ ಸಲ್ಲಿಸಿದ ಮತ್ತು ಶ್ರೀಕ್ಷೇತ್ರ ಕೈಲಾಸದಲ್ಲಿ ಇಂದಿನಿಂದ ಪುನರಾರಂಭಗೊಂಡ ವಿಶ್ವೇಶ್ವರ ಶಿವ ಮತ್ರು ವಿಶ್ವೇಶ್ವರಿ ದುರ್ಗಾದೇವಿಯರ ಶಿಖರ ಮತ್ತು ಗೋಪುರ ನಿರ್ಮಾಣಕ್ಕೆ ದೇಣಿಗೆ,ಕೊಡುಗೆಗಳನ್ನು ನೀಡಿದ ಸದ್ಭಕ್ತರುಗಳನ್ನು ಈ ಸಂದರ್ಭದಲ್ಲಿ ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಲಾಯಿತು. ಶಹಾಪುರದ ಕಲಾನಿಕೇತನ ಟ್ರಸ್ಟ್ ನ ಅಧ್ಯಕ್ಷರಾದ ಬಸವರಾಜ ಸಿನ್ನೂರು,ಕರುನಾಡವಾಣಿ ವೆಬ್ ಪೋರ್ಟಲ್ ನ ಸಂಪಾದಕ ಬಸವರಾಜ ಕರೆಗಾರ,ಮಲದಕಲ್ಲಿನ ಶ್ರೀಮತಿ ಗಿರಿಜಾ ಮೋನೇಶ ಬಡಿಗೇರ ದಂಪತಿಗಳು,ಚೆನ್ನಪ್ಪಗೌಡ ಮಾಲೀಪಾಟೀಲ,ನಾಗರೆಡ್ಡಿ ಯಾದವ,ಉದಯಕುಮಾರ ಮಡಿವಾಳ ಸುಲ್ತಾನಪುರ,ದಿಡ್ಡಿ ಬಸವರಾಜ ಅತ್ತನೂರು,ರಂಗಪ್ಪ ಗಾಲಿ ದಂಪತಿಗಳನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ.

About The Author