ಮಹಾಶೈವ ವಾರ್ತೆ : ಮಕರಸಂಕ್ರಾಂತಿಯಂದು ಮಹಾಶೈವಧರ್ಮಪೀಠದಲ್ಲಿ ದೇವರುಗಳ ‘ಅಷ್ಟೋತ್ತರಶತನಾಮಾವಳಿ ಪುಸ್ತಕಗಳ’ ಲೋಕಾರ್ಪಣೆ.

ಮಹಾಶೈವ ಧರ್ಮಪೀಠದಲ್ಲಿ ಮಕರಸಂಕ್ರಾಂತಿಯನ್ನು ಜನೆವರಿ ೧೫,೨೦೨೩ ರ ರವಿವಾರದಂದು ಆಚರಿಸಲಾಗುತ್ತದೆ.ಸಂಕ್ರಾಂತಿಯ ಅಂಗವಾಗಿ ಮಹಾಶೈವ ಧರ್ಮಪೀಠವು ಭಕ್ತರ ಸಹಯೋಗದೊಂದಿಗೆ ಹೊರತರುತ್ತಿರುವ ‘ ಮಹಾಶೈವಧರ್ಮಪೀಠ ಅಷ್ಟೋತ್ತರ ಶತನಾಮಾವಳಿ ಮಾಲಿಕೆ’ ಯಡಿ ಆರು ಅಷ್ಟೋತ್ತರ ಶತನಾಮಾವಳಿಗಳ ಕಿಸೆಯಳತೆಯ ಕಿರುಪುಸ್ತಕಗಳನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

ಶ್ರೀ ಗಣೇಶಾಷ್ಟೋತ್ತರ ಶತನಾಮಾವಳಿ,ಶ್ರೀ ಶಿವಾಷ್ಟೋತ್ತರ ಶತನಾಮಾವಳಿ,ಶ್ರೀ ದುರ್ಗಾಷ್ಟೋತ್ತರ ಶತನಾಮಾವಳಿ,ಶ್ರೀ ಆಂಜನೇಯ ಅಷ್ಟೋತ್ತರಶತನಾಮಾವಳಿ,ಶ್ರೀ ಕಾಳಿ ಅಷ್ಟೋತ್ತರ ಶತನಾಮಾವಳಿ ಮತ್ತು ಶ್ರೀ ಸುಬ್ರಹ್ಮಣ್ಯ ಅಷ್ಟೋತ್ತರ ಶತನಾಮಾವಳಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗುವುದು.ಪುಸ್ತಕಗಳ ಪ್ರಕಟಣೆಸೇವೆ ಸಲ್ಲಿಸಿದ ಸದ್ಭಕ್ತರುಗಳನ್ನು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಲಿದ್ದಾರೆ.

ಮಹಾಶೈವ ಧರ್ಮಪೀಠವು ಜನತೆಯಲ್ಲಿ ಭಕ್ತಿಭಾವವನ್ನು ಪ್ರಚೋದಿಸುವ ಉದ್ದೇಶದಿಂದ ವಿವಿಧ ದೇವದೇವಿಯರ ನೂರೆಂಟುನಾಮಗಳುಳ್ಳ ‘ ಅಷ್ಟೋತ್ತರಶತನಾಮಾವಳಿ’ ಗಳನ್ನು ಪ್ರಕಟಿಸುವ ಸಂಕಲ್ಪಹೊಂದಿದ್ದು ‘ ಮಹಾಶೈವ ಧರ್ಮಪೀಠ ಅಷ್ಟೋತ್ತರ ಶತನಾಮಾವಳಿ ಮಾಲಿಕೆ’ ಶೀರ್ಷಿಕೆಯಡಿ ಕಿರುಪುಸ್ತಕಗಳನ್ನು ಪ್ರಕಟಿಸಲಾಗುವುದು.ಭಕ್ತರುಗಳು ಪುಸ್ತಕಗಳ ಮುದ್ರಣವೆಚ್ಚವನ್ನು ಭರಿಸುವ ಮೂಲಕ ತಮ್ಮ ಇಷ್ಟ ದೈವದ ಅಷ್ಟೋತ್ತರಶತನಾಮಾವಳಿಗಳನ್ನು ಪ್ರಕಟಿಸುವ ವಿನೂತನ ಅವಕಾಶವನ್ನು ಮಹಾಶೈವ ಧರ್ಮಪೀಠವು ಒದಗಿಸಿದೆ‌.ಆಸಕ್ತ ಭಕ್ತರುಗಳು ಮಹಾಶೈವ ಧರ್ಮಪೀಠದ ಸದಾಶಯದ ಈ ಯೋಜನೆಯ ಪ್ರಾಯೋಜಕತ್ವ ಪಡೆದು ಭಕ್ತಿ ಬೀಜಗಳನ್ನು ಚೆಲ್ಲುವ ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author