ಎಲ್ ವೈ ರಾಜೇಶ್ ಗೆ ಕೇಂದ್ರ ಗೃಹ ಇಲಾಖೆಯಿಂದ ಅತ್ಯುತ್ತಮ ತನಿಕಾಧಿಕಾರಿ ಪದಕ, ಅಭಿನಂದನೆ ಸಲ್ಲಿಸಿದ ಮಂಜುಳಾ ನಾರಾಯಣ

ವಡಗೇರಾ :ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಿಮಿತ್ತ ಕೇಂದ್ರ ಗೃಹ ಇಲಾಖೆ ಸಚಿವಾಲಯದಿಂದ ನೀಡುವ ಅತ್ಯುತ್ತಮ ತನಿಕಾಧಿಕಾರಿ ಪ್ರತಿಷ್ಠಿತ ಪದಕ ಪಡೆದ ಬೆಂಗಳೂರು ನಗರ ಬಂಡೆಪಾಳ್ಯ ಸಬ್ ಇನ್ಸ್ಪೆಕ್ಟರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ ವೈ ರಾಜೇಶ್ ರವರಿಗೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀಮತಿ ಮಂಜುಳಾ ನಾರಾಯಣ ರವರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರಾಜೇಶ್ ರವರು ಇನ್ನು ಉನ್ನತ ಮಟ್ಟಕ್ಕೆರಲಿ. ಒಳ್ಳೆಯ ಅಧಿಕಾರಿಯಾಗಿ ಹೆಸರು ಗಳಿಸಲಿ. ರಾಜ್ಯದ ಜನತೆಗೆ ಪೊಲೀಸ್ ಇಲಾಖೆಯಿಂದ ಉತ್ತಮ ಸೇವೆ ಕೊಡಲಿ. ಒಳ್ಳೆಯ ಹೆಸರು ಗಳಿಸಿ ಸರಕಾರಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯ ಹೆಸರು ತಂದು ಕೊಡಲಿ ಎಂದು ಹಾರೈಸಿದರು.

ರಾಜ್ಯದಲ್ಲಿ ಹಲವಾರು ಹಾಲುಮತ ಅಧಿಕಾರಿಗಳು ಇತರ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಕೂಡ ಒಳ್ಳೆಯ ಸೇವೆ ಸಲ್ಲಿಸಿ ಹೆಸರು ಮಾಡಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಶಾಂತ ಶ್ರೀನಿವಾಸ,ಲತಾ ಇದ್ದರು.