ದೋರನಹಳ್ಳಿಯ ವೀರಮಹಾಂತ ಶಿವಾಚಾರ್ಯ ಸ್ವಾಮಿ ಲಿಂಗೈಕ್ಯ

ಶಹಾಪುರ ‌: ತಾಲೂಕಿನ ದೋರನಹಳ್ಳಿಯ ಮಹಾಂತೇಶ್ವರ ಮಠದ ವೀರಮಹಾಂತ ಶಿವಾಚಾರ್ಯ(48) ಸ್ವಾಮಿ ಲಿಂಗೈಕ್ಯರಾಗಿದ್ದಾರೆ.

ಪೂಜ್ಯ ಶ್ರೀ ವೀರಮಹಾಂತ ಶಿವಾಚಾರ್ಯರು ಬೆಂಗಳೂರಿನಿಂದ ವಾಪಸ್ಸಾಗುವ ಸಂದರ್ಭ ರೈಲ್ವೆ ನಿಲ್ದಾಣದಲ್ಲಿ ಹೃದಯಾಘಾತದಾಗ ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಿದರು. ಅಷ್ಟೋತ್ತಿಗಾಗಲೆ ಶ್ರೀಗಳು ಇಹಲೋಕ ತ್ಯಜಿಸಿದ್ದರು.ರಾಯಪ್ಪಗೌಡ ದರ್ಶನಾಪುರ ಷಣ್ಮುಖಪ್ಪ ಕಕ್ಕೇರಿ  ಜೊತೆಗಿದ್ದರು.

25ನೇ ವರ್ಷದ ಪಟ್ಟಾಧಿಕಾರ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಮಂತ್ರಣ ಪತ್ರ ಕೊಡಲು ಹೋಗಿದ್ದ ಸ್ವಾಮೀಜಿಯವರು ವಾಪಸ್ಸಾಗುವ ಸಂದರ್ಭದಲ್ಲಿ ಹೃದಯಘಾತ ಸಂಭವಿಸಿದೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ತಂದೆ ಗಂಗಯ್ಯ ಹಾಗೂ ತಾಯಿ ಬಸಮ್ಮ.1998 ರಲ್ಲಿ ದೋರನಹಳ್ಳಿ ಹಿರೇಮಠದ 11 ನೇ ಪೀಠಾಧಿಪತಿಯಾಗಿದ್ದರು.

ಶ್ರೀಗಳು ಅಗಲಿಕೆಯ ಸುದ್ದಿ ಕೇಳಿ ಹಿರೇಮಠದಲ್ಲಿ ಸೇರಿದ ಭಕ್ತರು.

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *