74 ಲಕ್ಷ ಅನುದಾನ ಕಾಮಗಾರಿಗೆ ಅಡಿಗಲ್ಲು : ಗ್ರಾಮೀಣಾಭಿವೃದ್ಧಿಗೆ ಆದ್ಯತೆ : ವೆಂಕಟರೆಡ್ಡಿ ಮುದ್ನಾಳ

 ವಡಗೇರಾ : ಹಿಂದಿನ ಕಾಂಗ್ರೆಸ್ ಶಾಸಕರ ಅವಧಿಯಲ್ಲಿ ಯಾದಗಿರಿ ಕ್ಷೇತ್ರದಲ್ಲಿ ಕುಂಠಿತವಾಗುತ್ತು. ನಾನು ಶಾಸಕನಾದ ಮೇಲೆ ರಾಜ್ಯದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದ್ದು, ಸರಕಾರದಿಂದ ಸಾಕಷ್ಟು ಅನುದಾನವನ್ನು  ತಂದಿದ್ದೇನೆ. ಮೂಲಭೂತ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶದಲ್ಲಿ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕರಾದ ವೆಂಕಟರೆಡ್ಡಿ ಮುದ್ನಾಳ ಹೇಳಿದರು.ಯಾದಗಿರಿ ಕ್ಷೇತ್ರದ ಇಬ್ರಾಹಿಂಪುರದಲ್ಲಿ 74 ಲಕ್ಷ ರೂಪಾಯಿ ಅನುದಾನದಡಿಯಲ್ಲಿ ತಾಂಡಕ್ಕೆ ಸೇರುವ ರಸ್ತೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿ ಮಾತನಾಡಿದರು.
  ಇಬ್ರಾಹಿಂಪುರದಲ್ಲಿರುವ ಅಬ್ದುಲ್ ಭಾಷಾ ಸುಕ್ಷೇತ್ರದ ಕೆರೆ ಅಭಿವೃದ್ಧಿಗಾಗಿ 50 ಲಕ್ಷ ರೂಪಾಯಿ ಅನುದಾನ ನೀಡಲಾಗಿದ್ದು ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ 20 ಲಕ್ಷ ರೂಪಾಯಿ ಅನುದಾನದ ಬಾಬು ಜಗಜೀವನರಾಂ ಭವನ, 15 ಲಕ್ಷ ರೂಪಾಯಿ ಗ್ರಾಪಂ.ನರೇಗಾದಲ್ಲಿ  ನಿರ್ಮಾಣವಾದ ಸ್ವಚ್ಚ  ಸಂಕೀರ್ಣ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯವನ್ನು ಶಾಸಕರು ಉದ್ಘಾಟಿಸಿದರು.
 ಮುಖಂಡರಾದ ಮಲ್ಲನಗೌಡ ಹತ್ತಿಕುಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗಪ್ಪ ಮೇಟಿ, ಜೆಇ ಸಿದ್ದಲಿಂಗಪ್ಪ ಐರೆಡ್ಡಿ, ರಾಹುಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿಭಾ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರಾದರ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಚನ್ನಬಸಪ್ಪ, ಸ್ವಚ್ ಭಾರತ್ ಅಭಿಯಾನದ ಜಿಲ್ಲಾ ಸಂಯೋಜಕರಾದ ಶಿವಕುಮಾರ, ಬಿಜೆಪಿ ಮುಖಂಡರಾದ ಶ್ರೀನಿವಾಸ ರೆಡ್ಡಿ ಚನ್ನೂರು, ವಸಂತ ರೆಡ್ಡಿ ಡಾ. ಬಸನಗೌಡ, ರಾಜು ಪಾಟೀಲ,ಸಂಗನಗೌಡ, ಮಲ್ಲಿಕಾರ್ಜುನ ಗುಂಡಗುರ್ತಿ, ದೊಡ್ಡಪ್ಪ ದೇಸಾಯಿ ದೋರನಹಳ್ಳಿ, ಗ್ರಾಮ ಪಂಚಾಯಿತಿ ಅಧಿಕಾರಿ ಗೋವಿಂದ ರಾಥೋಡ ಸೇರಿದಂತೆ ಹಲವಾರು ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About The Author