ಸಲಾದಪುರ ಅಭಿಮಾನಿ ಬಳಗದಿಂದ ಕಬ್ಬಡಿ ಕ್ರೀಡಾಕೂಟ 

ವಡಗೇರಾ : ಮನುಷ್ಯನು ಸಂಪೂರ್ಣವಾಗಿ ಆರೋಗ್ಯವಂತನಾಗಿರಲು ಕ್ರೀಡೆ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪ ಸಲಾದಪುರ ಹೇಳಿದರು. ವಡಗೇರಾ ತಾಲೂಕಿನ ಗುಂಡ್ಲೂರು ಗ್ರಾಮದಲ್ಲಿ ಶರಣಪ್ಪ ಸಲಾದಪುರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಬಡ್ಡಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಕರು ದೇಶದ ನಿರ್ಮಾತೃಗಳು. ಆದರೆ ಇತ್ತೀಚಿನ ದಿನಗಳಲ್ಲಿ  ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ನಿರ್ಲಕ್ಷ ವಹಿಸುತ್ತಿರುವುದು ದುರದೃಷ್ಟಕರ. ದುಷ್ಟ ಚಟಗಳಿಂದ ದೂರವಿದ್ದು ಗ್ರಾಮೀಣ ಕ್ರೀಡೆಗಳಲ್ಲಿ  ಭಾಗವಹಿಸುವುದರ ಮುಖಾಂತರ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ  ಯುವಕರಿಗೆ  ಸಲಹೆ ನೀಡಿದರು. ಕಬಡ್ಡಿಯಲ್ಲಿ ವಿಜೆತ ತಂಡಗಳಿಗೆ ಪ್ರಥಮ, ದ್ವಿತೀಯ ಬಹುಮಾನವನ್ನು ತುಮಕೂರ ಯುವಕರು ಪಡೆದುಕೊಂಡರು.  ಬಹುಮಾನ ಪಾರಿತೋಷಕಗಳನ್ನು ನೀಡಲಾಯಿತು.
   ಗೋನಾಲ ದುರ್ಗಾದೇವಿಯ ಅರ್ಚಕರಾದ ಮರಿಸ್ವಾಮಿ ಪೂಜಾರಿ,ಮಾಳಿಂಗರಾಯ ದೇವಸ್ಥಾನದ ಪೀಠಾಧಿಪತಿಗಳಾದ ಮಲ್ಲಣ್ಣ ಪೂಜಾರಿ ಅಗ್ನಿಹಾಳ,ಮಾಜಿ ತಾಲೂಕು ಪಂಚಾಯತ ಸದಸ್ಯರಾದ ಚಂದ್ರಶೇಖರ ಗೌಡ ಗೋನಾಲ, ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರವಿ ಶಿವಪುರ,ಗ್ರಾಮ ಪಂಚಾಯತ ಸದಸ್ಯರಾದ ಅಯ್ಯಪ್ಪ ಗುಂಡ್ಲೂರು, ಚಂದ್ರು ಗೌಡ ಜೋಳದಡಗಿ,ಬಸವರಾಜ ಕೊಂಗಂಡಿ, ಬಂದೆಶಗೌಡ, ನರಸಪ್ಪ ಅಗ್ನಿಹಾಳ, ನರಸಪ್ಪ ಶಿವಪುರ,ಖಾಜಾ ಹುಸೇನಿ ಗೋನಾಲ, ಅಲಿಸಾಬ ಗುಂಡ್ಲೂರು,ಬಾಲಪ್ಪ ಶಿವಪುರ, ಗಡ್ಡೆಲಿಂಗ ಬೆಂಡೆಬೆಂಬಳಿ, ರಾಚನಗೌಡ ಶಿವಪುರ, ಶ್ರೀನಿವಾಸ ಗುತ್ತೇದಾರ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಅಗ್ನಿಹಾಳ ಸೇರಿದಂತೆ ಸುತ್ತಲಿನ ಗ್ರಾಮದ ಕ್ರೀಡಾಪಟುಗಳು ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *