ಜ.12,13,14 ರಂದು ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ 

ಶಹಪುರ : ಕಲ್ಯಾಣ ಕರ್ನಾಟಕದಲ್ಲಿಯೇ ಅತ್ಯಂತ ಜನಪ್ರಿಯ ವೈಭವದ ಹಾಲುಮತ ಸಮಾಜದ ಹಬ್ಬವಾದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮವು ಜನವರಿ 12, 13, 14 ರಂದು ತಿಂಥಣಿ ಬ್ರಿಡ್ಜ್ ನಲ್ಲಿ ನಡೆಯಲಿದ್ದು, ಸಮಾಜದ ಬಂಧುಗಳು ಹಿರಿಯರು ಸೇರಿದಂತೆ ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಯಾದಗಿರಿ ಜಿಲ್ಲಾ ನಿರ್ದೇಶಕರಾದ ಮಾಳಪ್ಪ ಸುಂಕದ ಪ್ರಕಟಣೆಯಲ್ಲಿ ತಿಳಿಸಿದರು.
***
    ಕಾರ್ಯಕ್ರಮದಲ್ಲಿ ಕಾಗಿನೆಲೆ ಸಂಸ್ಥಾನ ಮಠದ ಹಾಲುಮತ ಸಮಾಜದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಪೂಜ್ಯರಾದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು ತಿಂಥಣಿ ಬ್ರಿಡ್ಜ್ ರವರು ಸೇರಿದಂತೆ ಎಲ್ಲಾ ಶಾಖಾ ಮಠಗಳ ಪೂಜ್ಯರು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ,ಹೆಚ್.ಎಮ್.ರೇವಣ್ಣ,ಸಚಿವರಾದ ಬಸವರಾಜ ಬೈರತಿ,ಎಮ್ಟಿಬಿ ನಾಗರಾಜ ಸೇರಿದಂತೆ  ಸಮಾಜದ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಾಟಕ, ಉಡಿತುಂಬುವ ಕಾರ್ಯಕ್ರಮ, ಟಗರಿನ ಕಾಳಗ, ಸಿದ್ಧಕುಲ ಮಾತೆ ಇಟಗಿ ಭೀಮಾಂಬಿಕೆ ನಾಟಕ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರಧಾನ, ಎತ್ತುಗಳ ಭಾರ ಎಳೆಯುವ ಸ್ಪರ್ಧೆ, ಲಕ್ಷದೀಪೋತ್ಸವ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *