ಅತಿವೃಷ್ಟಿಯಿಂದ ಬೆಳೆ ಹಾನಿ : ಖರೀದಿ ಕೇಂದ್ರ ಆರಂಭಿಸಿ ಬೆಂಬಲ ಬೆಲೆ ನಿಗದಿಪಡಿಸಲು ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯಿಂದ ಆಗ್ರಹ 

ಶಹಾಪುರ : ಯಾದಗಿರಿ ಜಿಲ್ಲೆಯಾದ್ಯಂತ ಅತಿ ದೃಷ್ಟಿಯಿಂದ ರೈತರ ಬೆಳೆಗಳು ನಷ್ಟವಾಗಿದ್ದು, ಸರಕಾರ ರೈತರಿಗೆ ಪರಿಹಾರ ಧನ ನೀಡಬೇಕೆಂದು
ಸಂಯುಕ್ತ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ತಾಲೂಕು ಕೃಷಿ ಮಾರುಕಟ್ಟೆಯ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಚನ್ನಪ್ಪ ಆನೆಗುಂದಿ ಸರಕಾರಕ್ಕೆ ಒತ್ತಾಯಿಸಿದರು.  ರೈತರು ಅತಿವೃಷ್ಟಿ ನಕಲಿ ಬೀಜ ನಕಲಿ ಗೊಬ್ಬರದಿಂದ ರೈತರ ಬೆಳೆಗಳು ನಷ್ಟವಾಗಿದ್ದು ಕೂಡಲೇ ಸರ್ಕಾರ ರೈತರಿಗೆ ನಷ್ಟ ಪರಿಹಾರ ನೀಡಬೇಕು. ಹತ್ತಿ ಖರೀದಿ ಕೇಂದ್ರಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸಿ ಹತ್ತಿ ಬೆಳೆಗೆ 12000 ತೊಗರಿ ಬೆಳೆಗೆ 10,000 ಭತ್ತಕ್ಕೆ 3200 ರೂ. ಬೆಂಬಲ ಬೆಲೆ ನಿಗದಿಗೊಳಿಸ ಬೇಕು ಎಂದು ಆಗ್ರಹಿಸಿದರು.ತುಳಸಿ ಕಂಪನಿಯ 34 ಕೋಟಿ ನಕಲಿ ಬೀಜಗಳು ತಾಲೂಕಿನಲ್ಲಿ ಮಾರಾಟವಾಗಿದ್ದು, ಇದರ ಸಂಪೂರ್ಣ ವಿಚಾರಣೆ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಆರೋಪಿಸಿದರು.
   ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಜಮೀನುಗಳನ್ನು ಸರ್ವೆ ಮಾಡುವಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಹಣ ವಸೂಲಿ ಮಾಡುವುದು ಕಂಡು ಬಂದಿದ್ದು ಹಣ ಪಡೆದವರಿಗೆ ಹೆಚ್ಚಿನ ಹಣವನ್ನು ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದು, ಇತರ ರೈತರನ್ನು ಕಡೆಗಣಿಸಲಾಗುತ್ತಿದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶರಣು ಮಂದರವಾಡ ನಂಜುಂಡಿ ಸ್ವಾಮಿ ಬಣದ ಜಿಲ್ಲಾಧ್ಯಕ್ಷರು ಮಾತನಾಡುತ್ತಾ, ಪ್ರಸ್ತುತ ಶಹಪುರದಲ್ಲಿ ಬರುವ ಬೈಪಾಸ್ ರಸ್ತೆಯು ಹುಲಕಲ್ ದಿಂದ ಗೋಗಿ ಮಾರ್ಗವಾಗಿ ಹೋಗಿರುವುದು ಅವೈಜ್ಞಾನಿಕದಿಂದ ಕೂಡಿದೆ. ಗೋಗಿ ಮಾರ್ಗವನ್ನು ಹೊರತುಪಡಿಸಿ ಹುಲಕಲ್ ದಿಂದ ಸೈದಾಪುರ ಉಮಾರದೊಡ್ಡಿ ಸಗರ ಶಾರದಹಳ್ಳಿ ಮೂಲಕ ಕೃಷ್ಣಕ್ಕೆ  ಸೇರಿಸಬೇಕು. ಇದರಿಂದ ರೈತರ ಭೂಮಿ ವಂಚಿತರನ್ನಾಗಿ ಮಾಡುವುದನ್ನು ತಪ್ಪಿಸಬಹುದು ಎಂದು ಹೇಳಿದರು.
  ಡಿಎಸ್ಎಸ್ ರಾಜ್ಯ ಸಂಚಾಲಕರಾದ ನಾಗಣ್ಣ ಬಡಿಗೇರ ಮಾತನಾಡಿ, ಸಾಮಾಜಿಕ ಕಾರ್ಯಕರ್ತರಾದ ಬಸವರಾಜ ಅರುಣಿ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಸರಕಾರದ ಅಧಿಕಾರಿಗಳು ಇದರಲ್ಲಿ  ಶಾಮಿಲಾಗಿದ್ದು, ಕೂಡಲೇ  ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

About The Author