ಕುಕ್ಕರ್ ಸ್ಪೋಟದಿಂದ ಗಾಯಗೊಂಡ ಗಾಯಾಳುವಿಗೆ ಪರಿಹಾರ ನೀಡುವಂತೆ ಆಗ್ರಹ

ಶಹಾಪುರ : ತಾಲೂಕಿನ ಹೋತಪೆಟ್ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಪೋಟದಿಂದ ಬಿಸಿಯೂಟ ನೌಕರರೊಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುವಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದಿಂದ ಸಿಐಟಿಯು ಸಂಯೋಜಿತದಲ್ಲಿ ತಾಲೂಕು ಪಂಚಾಯ್ತಿ ಇಒ ಅವರಿಗೆ ಮನವಿ ಸಲ್ಲಿಸಲಾಯಿತು.
   ಶಹಾಪುರ ತಾಲೂಕಿನ ಹೋತಪೇಠ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಸಿಯೂಟ ನೌಕರರಾದ ಜ್ಯೋತಿ ಅವರು ಕಳೆದ ಹತ್ತು ವರ್ಷದಿಂದ ಈ ಶಾಲೆಯಲ್ಲಿ ಅಡುಗೆ ತಯಾರಿಸುತ್ತಿದ್ದರು. ಅವರು ಶಾಲೆಯಲ್ಲಿ ಜ.3 ರಂದು ಮಧ್ಯಾಹ್ನ ಬಿಸಿಯೂಟ ಅಡುಗೆ ತಯಾರಿಸುವಾಗ ಕುಕ್ಕರ್ ಸ್ಪೋಟದಿಂದ ಬಿಸಿಯೂಟ ಜ್ಯೋತಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುವಿಗೆ ಸೂಕ್ತ ಪರಿಹಾರ ನೀಡಬೇಕು.
   ಗಾಯಾಳು ಸಂಪೂರ್ಣ ಗುಣಮುಖರಾಗುವವರೆಗೆ ವೇತನ ಸಹಿತ ರಜೆ ನೀಡಬೇಕು, ಅಲ್ಲದೇ ವೈದ್ಯಕೀಯ ಚಿಕಿತ್ಸೆಯನ್ನು ಇಲಾಖೆಯೇ ಭರಿಸಬೇಕು. ಮುಂದೆ ಯಾವುದೇ ಶಾಲೆಯ ಇಂತಹ ಅಹಿತಕರ ಘಟನೆಗಳಾಗದಂತೆ ಮುಂಜ್ರಾಗತ ಕ್ರಮಗಳನ್ನು ತೆಗೆದುಕೊಳ್ಳಬೇಕು, ಮತ್ತು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕೆಂದು ತಾಲೂಕ ಅಕ್ಷರ ದಾಸೋಹ ನೌಕರರ ಸಂಘದ ಗೌರವ್ಯಾಧ್ಯಕ್ಷ ಸುನಂದಾ ಹಿರೇಮಠ ಅವರು ಒತ್ತಾಯಿಸಲಾಯಿತು.
   ಇದೆ ವೇಳೆ ಮಾತನಾಡಿದ ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೊಲಂಪಲ್ಲಿ ಅವರು ಶಾಲೆಗಳಲ್ಲಿ ಮಧ್ಯ ಹಣದ ಬಿಸಿ ಊಟ ತಯಾರಿಸುವ ಅಡಿಗೆ ಅವರ ಆರೋಗ್ಯದ ಬಗ್ಗೆ ಸರ್ಕಾರ ಕಾಳಜಿ ವಹಿಸುತ್ತಿಲ್ಲ. ಅಡಿಗೆ ತಯಾರಿಸುವಾಗ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹೊಣೆ ಯಾರು?. ಜನವರಿ ಮೂರರಂದು ಮಧ್ಯಾಹ್ನ ಅಡಿಗೆ ತಯಾರಿಸುವಾಗ ಕುಕ್ಕರ ಸ್ಫೋಟದಿಂದ ಗಂಭೀರ ಸ್ವರೂಪದ ಗಾಯಗಳಾಗಿರುವ ಅಡಿಗೆಯವರನ್ನು ತಕ್ಷಣ ಆಸ್ಪತ್ರೆಗೆ ಕರೆಯೋದು ಇದು ಚಿಕಿತ್ಸೆ ನೀಡದೆ ನಿರ್ಲಕ್ಷ ತೋರಿದವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಕಾರ್ಯದರ್ಶಿ ಈರಮ್ಮ ಹಯ್ಯಾಳಕರ್, ಖಜಾಂಚಿ ಮಂಜುಳಾ ಹೊಸ್ಮನಿ,  ಇತರರಿದ್ದರು.