ಆಶ್ರಯ ಲೇಔಟ್ ಸ.ನ.120 ರಲ್ಲಿ ಶಾಸಕರಿಂದ 429 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭ

ಶಹಪುರ : ನಗರದ ಸರ್ವೆ ನಂಬರ್ 120 ರ ಆಶ್ರಯ ಲೇಔಟ್ ನಲ್ಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ರವರಿಂದ 429 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ ವಿದ್ಯುತ್ ಸೌಲಭ್ಯ ಸೇರಿದಂತೆ ಇತರ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ 10 ವರ್ಷಕ್ಕಿಂತಲೂ ಹೆಚ್ಚು ದಿನ ವಾಸವಿರುವ ನಿವೇಶನ ರಹಿತರಿಗೆ ನಿವೇಶನಗಳನ್ನು ಕೊಡಲಾಗುವುದು.
   15 ದಿನದೊಳಗೆ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. 12 ಎಕರೆ ಜಮೀನಿನಲ್ಲಿ ನಿವೇಶನಗಳನ್ನು ಗುರುತಿಸಲಾಗಿದ್ದು, ಕೆಕೆಆರ್ಡಿಬಿಯಿಂದ ಐದು ಕೋಟಿ ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಹೇಳಿದರು.
ಸುಮಾರು ಎರಡು ಸಾವಿರಕ್ಕೂ ಹೆಚ್ಚು ನಿವೇಶನ ರಹಿತ ಅರ್ಜಿಗಳು ಬಂದಿದ್ದು, ನಗರಸಭೆ ವತಿಯಿಂದ ಸರ್ವೆ ಮಾಡಲಾಗಿ 900 ನಿವೇಶನ ರಹಿತರನ್ನು ಗುರುತಿಸಲಾಗಿದ್ದು, ಪ್ರಸ್ತುತ 596 ಜನರಿಗೆ ನಿವೇಶನ ಕೊಡಲಾಗುವುದು ಎಂದರು. ಇನ್ನು 86 ಲಕ್ಷ ನಗರೋತ್ಥಾನದಲ್ಲಿ ಅನುದಾನ ಒದಗಿಸಿ ಎಂಟು ಎಕರೆ ಜಮೀನನ್ನು ಖರೀದಿಸಿ ಇನ್ನುಳಿದವರಿಗೆ
 ನಿವೇಶನ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
  ಈ ಸಂದರ್ಭದಲ್ಲಿ ಮರಿಗೌಡ ಹುಲ್ಕಲ್ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಸಲಾದಪುರ, ಗುರುನಾಥ ರೆಡ್ಡಿ ಹಳಿಸಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಆರ್ಬೋಳ, ಸಿದ್ದಲಿಂಗಪ್ಪ ಆನೆಗುಂದಿ, ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ ಸುರುಪುರಕರ್, ನೀಲಕಂಠ ಬಡಿಗೇರ, ಹನುಮಂತ್ರಾಯ ಗೌಡ, ಶಾಂತು ಪಾಟೀಲ, ಮಹಾದೇವಪ್ಪ ಸಾಲಿಮನಿ, ಶೇಖಣ್ಣ ಸಾಹು ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.
  132 ಜನರಿಗೆ ಈಗಾಗಲೇ ಹಕ್ಕುಪತ್ರ ನೀಡಲಾಗಿತ್ತು. ಅವರಿಗೆ ಫಿಲ್ಟರ್ ಬೆಡ್ನಲ್ಲಿ ನಿವೇಶನ ಕೊಡಲಾಗುವುದು. ಈ ಮೊದಲು ಕೆಲವರು ಲಾಟರಿ ಮೂಲಕ ಆಯ್ಕೆ ಮಾಡಿದ ನಿವೇಶನಗಳನ್ನು ತಡೆದಿದ್ದರು. ಜಿಲ್ಲಾಧಿಕಾರಿಗಳಿಗೆ ನಿವೇಶನಗಳ ವರದಿ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ರೋಸ್ಟರ್ ಪ್ರಕಾರ ಎಲ್ಲಾ ಸಮುದಾಯದವರಿಗೆ ಲಾಟರಿ ಮೂಲಕವೇ ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ.
ಶರಣಬಸಪ್ಪಗೌಡ ದರ್ಶನಾಪುರ ಶಾಸಕರು ಶಹಾಪುರ

About The Author