ಜಿಲ್ಲಾ ಪಂಚಾಯಿತಿಗಳ ಮರುವಿಂಗಡಣೆ : ಹಯ್ಯಳ ಬಿ ಜಿಲ್ಲಾ ಪಂಚಾಯಿತಿ ಕೇಂದ್ರವನ್ನಾಗಿ ಪುನಃ ಘೋಷಣೆ 

ವಡಗೇರಾ : ಯಾದಗಿರಿ ಜಿಲ್ಲೆಯಲ್ಲಿ 28 ಜಿಲ್ಲಾ ಪಂಚಾಯಿತಿಗಳನ್ನಾಗಿ ಮರು ವಿಂಗಡನೆ ಮಾಡಿ ಕರ್ನಾಟಕ ರಾಜ್ಯ ಪತ್ರದಲ್ಲಿ ಘೋಷಣೆ ಮಾಡಲಾಗಿದ್ದು, ಅದರಲ್ಲಿ ಹಯ್ಯಳ ಬಿ ಕೇಂದ್ರವನ್ನು ಪುನಃ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿಗಳು ಹಯ್ಯಳ ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮೌನೇಶ ಪೂಜಾರಿ ಸಂತಸ ವ್ಯಕ್ತಪಡಿಸಿದ್ದಾರೆ.
   ಈ ಮುಂಚೆ ಜಿಲ್ಲಾ ಪಂಚಾಯಿತಿಗಳನ್ನು ಎರಡು ಬಾರಿ ಪುನರ್ ವಿಂಗಡನೆ ಮಾಡಲಾಗಿದ್ದು, ಹಯ್ಯಳ ಬಿ ಜಿಲ್ಲಾ ಪಂಚಾಯಿತಿಯನ್ನು ಕೈ ಬಿಟ್ಟು ತಡಿಬಿಡಿ ಮತ್ತು ಕುರುಕುಂದಿಗಳನ್ನು ರಾಜಕೀಯ ಪ್ರಭಾವ ಬಳಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನಾಗಿ ಮಾಡಲಾಗಿತ್ತು.
   ಇದರಿಂದ ಹಲವಾರು ಹಲವು ಸಂಘಟನಾ ಕಾರರು ಕಾಂಗ್ರೆಸ್ ಮುಖಂಡರು ಇತರ ಸಮುದಾಯದವರು ಸೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಹಯ್ಯಳ ಬಿ ಕೇಂದ್ರ ಬಹುದಿನಗಳಿಂದ ಹೋಬಳಿ ಕೇಂದ್ರವಾಗಿದ್ದು, ಸರಕಾರಿ ಆಸ್ಪತ್ರೆ, ಉಪ ತಹಸೀಲ್ದಾರರ ಕಚೇರಿ, ರೈತ ಸಂಪರ್ಕ ಕಛೇರಿ, ಪ್ರೌಢಶಾಲೆ ಮತ್ತು ವಸತಿ ನಿಲಯಗಳನ್ನು ಒಳಗೊಂಡಿದ್ದು ದೊಡ್ಡ ಹೋಬಳಿ ಕೇಂದ್ರವಾಗಿದೆ.
   ಪುನಃ ಹಯ್ಯಳ ಬಿ ಯನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಘೋಷಿಸಬೇಕೆಂದು ಮನವಿ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಸರಕಾರವು ಕೂಡ ನಮ್ಮ ಮನವಿಗೆ ಸ್ಪಂದಿಸಿ ಪುನಃ ಹಯ್ಯಳ ಬಿ ಕೇಂದ್ರವನ್ನು ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಘೋಷಣೆ ಮಾಡಿರುವುದು ನಮ್ಮ ಹೋರಾಟದ ಫಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ಮುಕೇಶ, ಕಾಮಣ್ಣ ಹಾಗೂ ಗ್ರಾಮಸ್ಥರಾದ ಮಹಿಬೂಬ ಅತ್ತಾರ, ಸುರೇಶ ಬೂದೂರು, ಭೀಮಶಂಕರ ಸೂಗೂರು, ಸುರೇಶ ಪೂಜಾರಿ ಸೇರಿದಂತೆ ಇತರರು ಇದ್ದರು.

About The Author