ಡಾ.ಭೀಮಣ್ಣ ಮೇಟಿ ಪೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ವಡಗೇರಾ : ತಾಲೂಕಿನಾದ್ಯಂತ ಡಾ. ಭೀಮಣ್ಣ ಮೇಟಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ ತಿಳಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಾದ ಸಂಜೀವಿನಿ ಆಸ್ಪತ್ರೆ ಮತ್ತು ಸಪ್ತಗಿರಿ ಆಸ್ಪತ್ರೆ ಹಾಗೂ ನಮ್ಮ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಬೃಹತ್ ಆರೋಗ್ಯ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
   ಜನವರಿ 8 ರಂದು ದೋರನಹಳ್ಳಿಯ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ, ಜನವರಿ 10 ರಂದು ಯಾದಗಿರಿಯ ಪಂಪ ಮಹಾಕವಿ ಮಂಟಪದಲ್ಲಿ, ಜನವರಿ 20ರಂದು ವಡಗೇರಾದ ಡಿಡಿಯು ಶಿಕ್ಷಣ ಸಂಸ್ಥೆಯಲ್ಲಿ, ಜನವರಿ 22ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಸಮುದ್ರದಲ್ಲಿ, ಒಟ್ಟಾರೆ ನಾಲ್ಕು ಕಡೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
  ಆರೋಗ್ಯ ಶಿಬಿರದಲ್ಲಿ ಹೃದಯ ರೋಗ, ಮೂತ್ರಪಿಂಡ ರೋಗ, ನರರೋಗ, ಕ್ಯಾನ್ಸರ್ ಕಾಯಿಲೆ ಹಾಗೂ ಮೂಳೆ ರೋಗಕ್ಕೆ ಸಂಬಂಧಿಸಿದ ಕಾಯಿಲೆಗಳು ಮತ್ತು ಸಾಮಾನ್ಯ ಕಾಯಿಲೆಗಳಿಗೂ ತಪಾಸಣೆ ಮಾಡಲಾಗುವುದು ಎಂದು ಹೇಳಿದರು. ಉಚಿತ ಆರೋಗ್ಯ ಶಿಬಿರದ ಸದುಪಯೋಗವನ್ನು ಸೂಚಿಸಿದ ಸ್ಥಳದ ಸುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ತಿಳಿಸಿದರು.