ನಕಲಿ ವೈದ್ಯರ ಹಾವಳಿ,ಕ್ರಮ ಕೈಗೊಳ್ಳದ ತಾಲೂಕು ವೈದ್ಯಾಧಿಕಾರಿಯನ್ನು ವರ್ಗಾಯಿಸುವಂತೆ ಆಗ್ರಹ

ವಡಗೇರಾ : ವಡಗೇರಾ ಮತ್ತು ಶಹಾಪುರ ತಾಲೂಕಿನಾದ್ಯಂತ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕಲ್ಯಾಣ ಕರ್ನಾಟಕ ಕಾರ್ಮಿಕ ಹಿತರಕ್ಷಣಾ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮೌನೇಶ ಹಳಿಸಗರ ಆಗ್ರಹಿಸಿದ್ದಾರೆ.

ಇಂದು ಮನವಿ ಪತ್ರ ಸಲ್ಲಿಸಿ ಮಾತನಾಡಿದವರು, ವಡಗೇರಾ, ಬೊಮ್ಮನಹಳ್ಳಿ, ಕೊಂಗಂಡಿ ನಾಗನಟಗಿ, ಕೊಂಕಲ, ಇಂಗಳಗಿ, ಸೊಲ್ಲಾಪುರ,ಹಯ್ಯಳ ಬಿ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ನೇಪಾಳ, ಬಂಗಾಳ ಹಾಗೂ ಹಲವು ಜಿಲ್ಲೆಗಳಿಂದ ಬಂದವರು ಯಾವುದೇ ಮಾನ್ಯತೆ ಪಡೆಯದೆ,ಯಾವುದೇ ವ್ಯಾಸಂಗ ಮಾಡದೆ ನಾವೇ ವೈದ್ಯರೆಂದು ಹೇಳಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ನಂಬಿಸಿ ಮೋಸ ಮಾಡುತ್ತಿದ್ದಾರೆ.

ಇದರಿಂದ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.ನಾಗನಟಗಿ ಗ್ರಾಮದಲ್ಲಿ ಬಾಬು ಎನ್ನುವ ವ್ಯಕ್ತಿ ವೈದ್ಯರ ಹೆಸರೇಳಿಕೊಂಡು ಮೈಸೂರು ಮೆಡಿಕಲ್ ಎಂಬ ಔಷಧಿ ಅಂಗಡಿಯನ್ನಾಕಿ ಮೂಲವ್ಯಾಧಿ ಸೇರಿದಂತೆ ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತಿದ್ದಾನೆ. ಪ್ರಶ್ನಿಸಿದರೆ ಕೆಲ ರಾಜಕಾರಣಿಗಳ ಹೆಸರು ಹೇಳುತ್ತಿದ್ದಾನೆ ಎಂದು ಬಲವಾಗಿ ಆರೋಪಿಸಿದರು.

ಅಧಿಕಾರಿಗಳ ಪ್ರೋತ್ಸಾಹ :

ನಕಲಿ ವೈದ್ಯರ ಬಗ್ಗೆ ಮಾಹಿತಿ ಇದ್ದರೂ ಸರಕಾರಿ ತಾಲೂಕು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳು ಕಂಡು ಕಾಣದಂತೆ ಸುಮ್ಮನಿದ್ದಾರೆ.ರೋಗಿಗಳಿಗೆ ಏನಾದರೂ ಆದರೆ ನೇರ ಅವರೇ ಹೊಣೆಗಾರರು ಎಂದು ಹೇಳಿದರು.

ರಮೇಶ್ ಗುತ್ತೇದಾರರನ್ನು ವರ್ಗಾಯಿಸಿ :

ಕಳೆದ ಏಳು ವರ್ಷಗಳಿಂದ ರಮೇಶ ಗುತ್ತಿಗೆದಾರ ಎನ್ನುವ ವೈಧ್ಯರು ಶಹಪುರಲ್ಲಿಯೇ ರಾಜಕೀಯ ಪ್ರಭಾವ ಬಳಸಿ ತಾಲೂಕಿನಲ್ಲಿಯೇ ಇದ್ದು, ತಕ್ಷಣವೇ ವರ್ಗಾವಣೆ ಮಾಡಬೇಕು.ಇಂತಹ ಅಧಿಕಾರಿಗಳು ನಕಲಿ ವೈದ್ಯರಿಗೆ ಬೆಂಬಲವಾಗಿ ನಿಂತಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.ಕೂಡಲೇ ವರ್ಗಾಯಿಸಿ ಇಲ್ಲದೆ ಅಮಾನತ್ತು ಮಾಡಿ ಎಂದು ಮೌನೇಶ ಹಳಿಸಗರ ಆಗ್ರಹಿಸಿದರು.

About The Author