ಕಾರ್ಮಿಕ ಕಿಟ್ ವಿತರಣೆಯಲ್ಲಿ ಗೋಲ್ ಮಾಲ್! | ಕಾರ್ಮಿಕ ಕಾರ್ಡಗಳಲ್ಲಿ ಅಕ್ರಮ | ಕಾರ್ಮಿಕ ಅಲ್ಲದವರಿಗೂ ಕಾರ್ಡ್ ವಿತರಣೆ | ಒಂದೆ ಸಮುದಾಯದವರಿಗೆ ಹೆಚ್ಚು ಕಾರ್ಡ್ ವಿತರಣೆ ! ಆರೋಪ>

ಶಹಾಪೂರ : ತಾಲೂಕಿನಾದ್ಯಂತ ಕಾರ್ಮಿಕ ಕಿಟ್  ವಿತರಣೆಯಲ್ಲಿ ಭಾರಿ ಗೋಲ್ ಮಾಲ್ ನಡೆದಿದೆ.ತಾಲೂಕಿನಲ್ಲಿ ಒಂದೇ ಸಮುದಾಯಕ್ಕೆ ಹೆಚ್ಚು ಕಾರ್ಮಿಕ ಕಾರ್ಡ್ ಮಾಡಿಸಿಕೊಡಲಾಗಿದೆ ಎಂದು ತಾಲೂಕಿನಾದ್ಯಂತ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ?.

ಸರಕಾರ ಕಾರ್ಮಿಕರಿಗೆ ಅನುಕೂಲವಾಗಲೆಂದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು,ಹೆಚ್ಚಾಗಿ ಕಾರ್ಮಿಕ ಇಲಾಖೆಯಲ್ಲಿ ದುರ್ಬಳಕೆಯಾಗುತ್ತಿದೆಯಾ ?. ಕಿಟ್ ವಿತರಣೆಯಲ್ಲಿ ಭಾರಿ ಗೊಂದಲವಾಗಿದೆ.ಸರಕಾರದಿಂದ ಹಂಚಿಕೆಯಾದ ಕಿಟ್ ಗಳು ಕೆಲವೆ ಜನರ ಕೈಸೇರುತ್ತಿವೆ ಎಂದು ಹೇಳಲಾಗಿದೆ.

ಮೂರರಿಂದ ನಾಲ್ಕು ದಿನಗಳು ಮಾತ್ರ ಕಿಟ್ ಹಂಚಿಕೆ ಮಾಡಲಿಗಿದ್ದು, ಪದೇ ಪದೇ ತಾಂತ್ರಿಕ ತೊಂದರೆ ಎಂದು ಹೇಳಿಕೊಂಡು ಕಿಟ್ ಹಂಚಿಕೆ ಮಾಡುತ್ತಿಲ್ಲ ಎಂದು ಕಾರ್ಮಿಕ ಕಿಟ್ ತೆಗೆದುಕೊಂಡು ಬಂದಿರುವ ಕಾರ್ಮಿಕರು ಹೇಳುತ್ತಿದ್ದಾರೆ.

ನಿಜವಾದ ಕಾರ್ಮಿಕರಿಗೆ ಕಿಟ್ ನೀಡಲಾಗುತ್ತಿಲ್ಲ.
ಕಾರ್ಮಿಕರಲ್ಲದವರಿಗೂ ಕಿಟ್ ವಿತರಣೆ ಮಾಡಲಾಗಿದೆ.ತಾಲೂಕು ಕಾರ್ಮಿಕ ಕಛೇರಿಯಲ್ಲಿಯೆ ಕಿಟ್ ಹಂಚಿಕೆಯಲ್ಲಿಯೆ ಅಕ್ರಮ ನಡೆದಿದೆ ಎನ್ನಲಾಗುತ್ತಿದ್ದು ? ಈ ಬಗ್ಗೆ ಉನ್ನತ ಅಧಿಕಾರಿಗಳು ಗಮನ ಹರಿಸಬೇಕಿದೆ.ಇಲ್ಲದಿದ್ದರೆ ಕಾರ್ಮಿಕ ಕಿಟ್ ಗಳು ಉಳ್ಳವರ ಪಾಲಾಗುತ್ತಿವೆ ಎಂದು ಕಾರ್ಮಿಕರ ಅಳಲಾಗಿದೆ.

ತನಿಖೆ ನಡಿಸಿ.

ಕಾರ್ಮಿಕ ಕಾರ್ಡ್ ವಿತರಣೆಯಲ್ಲಿ ನಡೆದ ಅಕ್ರಮವನ್ನು ತನಿಖೆ ನಡೆಸಬೇಕೆಂದು ನಿಜವಾದ ಕಾರ್ಮಿಕರು ಆಗ್ರಹಿಸಿದ್ದಾರೆ.ಒಂದೆ ಸಮುದಾಯಕ್ಕೆ ಹೆಚ್ಚು ಕಾರ್ಮಿಕ ಕಾರ್ಡುಗಳನ್ನು ಶಹಾಪುರ ತಾಲೂಕಿನಲ್ಲಿ ನೀಡಲಾಗಿದೆಯಾ ?.ಎನ್ನುವ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ ?. ಆದ್ದರಿಂದ ಕಿಟ್ ವಿತರಣೆಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ಅಂದಾಜಿಸಲಾಗಿದೆ.ಕೂಡಲೆ ಕಾರ್ಮಿಕ ಕಾರ್ಡ್ಗಳ ಬಗ್ಗೆ ತನಿಖೆ ನಡಿಸಿದರೆ ಮಾತ್ರ ಸತ್ಯಾಂಶ ಹೊರ ಬರುತ್ತದೆ.

ಕಾರ್ಮಿಕ ಕಿಟ್ ತೆಗೆದುಕೊಳ್ಳಲು ನಿಂತು ಜನರು

“ಕಾರ್ಮಿಕ ಕಾರ್ಡ್ ಗಳು ಹೆಚ್ಚಾಗಿ ಒಂದೆ ಸಮುದಾಯಕ್ಕೆ ಸೇರಿವೆ.ಕಾರ್ಮಿಕರಲ್ಲದವರಿಗೂ ಕಾರ್ಮಿಕರೆಂದು ಕಾರ್ಡ್ ಮಾಡಿಸಿಕೊಂಡು ಸರಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.ಕೊವೀಡ್ ಸಮಯದಲ್ಲಿ ಆಹಾರದ ಕಿಟ್ ಗಳು ನಮಗೆ ಸಿಗದಂತಾಗಿವೆ.ಈಗ ಕಾರ್ಮಿಕ ಕಿಟ್ ಗಳು ನಮಗೆ ಸಿಗದೆ ಉಳ್ಳವರ ಪಾಲಾಗುತ್ತಿವೆ.ನಿಜವಾದ ಕಾರ್ಮಿಕರಿಗೆ ಕಿಟ್ ಒದಗಿಸಿಕೊಡಬೇಕು”.

ಹೆಸರೇಳಲಿಚ್ಚಿಸದ ಕಟ್ಟಡ ಕಾರ್ಮಿಕ ಶಹಾಪುರ