ಹಠ ಬಿಡದ ಶಾಸಕರು | ಬೈಪಾಸ್ ರಸ್ತೆ ಮಂಜೂರು

ಶಹಪುರ : ಕಳೆದ ಕೆಲವು ತಿಂಗಳುಗಳ ಹಿಂದೆ ಯಾದಗಿರಿ ಬೈಪಾಸ್ ರಸ್ತೆ ಕೇಂದ್ರ ಸರ್ಕಾರ ಮಂಜೂರು ಮಾಡಿ ಶಹಪುರದ ಬೈಪಾಸ್ ರಸ್ತೆಯನ್ನು ಕೈ ಬಿಡಲಾಗಿತ್ತು. ಆದರೆ ಶಹಾಪುರ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಸಂಸದ ಅಂಬರೀಶ ನಾಯಕರ ಮನವೊಲಿಸಿ ಶಹಪುರ ಬೈಪಾಸ್ ರಸ್ತೆಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿದ್ದು ಶಹಪುರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಗ್ರಾಮೀಣ ಪ್ರದೇಶ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿ ಕೊಟ್ಟಿದ್ದಾರೆ.
ಕೇಂದ್ರ ಸರಕಾರದ ನೂತನ ಚತುಷ್ಪಥ ರಸ್ತೆ
ಯೋಜನೆಯಡಿಯಲ್ಲಿ ಶಹಾಪುರ ತಾಲೂಕಿಗೆ 24 ಕಿ.ಮೀ. ಬೈಪಾಸ್ ರಸ್ತೆಗೆ ಕೇಂದ್ರ ಅನುಮೋದನೆ ನೀಡಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಅಂಬರೀಶ ನಾಯಕ ರವರಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿದರು.
ರಾಷ್ಟ್ರೀಯ ಹೆದ್ದಾರಿ ೧೫೦ ಎ ಜೇವರ್ಗಿಯಿಂದ ತಿಂಥಣಿ ಬ್ರಿಡ್ಜ್ ವರೆಗೆ 800 ಕೋಟಿ ವೆಚ್ಚದಲ್ಲಿ 90 ಕಿ.
ಮೀ. ಚತುಷ್ಪತ ರಸ್ತೆ ನಿರ್ಮಾಣಗೊಳ್ಳಲಿದ್ದು, ಜೇವರ್ಗಿಯ ಭೀಮಾ ಬ್ರಿಡ್ಜ್ ನಿಂದ ಆರಂಭಿಸಿ ಅವರಾದ, ಕೆಲ್ಲೂರು ಗ್ರಾಮಗಳ ಮುಖಾಂತರ ಮಡಬೋಳ ಮದ್ದರಕಿ ಗ್ರಾಮಗಳಿಂದ ಹಾಯ್ದು ಹುಲ್ಕಲ್ ಗ್ರಾಮದ ಬೈಪಾಸ್ ಮೂಲಕ ಗೋಗಿ ಸೈದಾಪುರ ಸಗರ ಶಾರದಹಳ್ಳಿ ಮುಖಾಂತರ 24 ಕಿ.ಮೀ. ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದರು. ಇನ್ನೆರಡು ತಿಂಗಳಲ್ಲಿ ಡಿಪಿಆರ್ ಹಾಗೂ ಭೂ ಸ್ವಾಧೀನ ಕ್ರಿಯೆ ಮುಗಿಯಲಿದ್ದು, ಏಳೆಂಟು ತಿಂಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ ಎಂದರು

About The Author