ಅರ್ಥವಿಲ್ಲದ ಅನಗತ್ಯ ಆಚರಣೆಗಳೆಂಬ ಯಾರೋ ಹಾಕಿರುವ ಜೋಕಾಲಿಯಲ್ಲಿ ನಾವು ತೆಲಾಡುತ್ತಿದ್ದೇವೆ ! – ಶಿವಕುಮಾರ

ಇತ್ತಿಚಿಗೆ ನಾವು ಜೀವನ ಶೈಲಿಯಲ್ಲಿ ಕೆಲವೊಂದು ಅನಗತ್ಯ ಆಚರಣೆಗಳನ್ನು ನಮ್ಮ ಶಕ್ತಿಮಿರಿ ಆಚರಣೆ ಮಾಡಿ ನಮ್ಮ‌ ಸಂಪ್ರದಾಯಗಳನ್ನಾಗಿ ಮಾರ್ಪಡಿಸಿಕೊಂಡಿದ್ದೆವೆ. ಕೆಲವೊಂದು ಆಚರಣೆಗಳಿಂದ ನಮ್ಮ‌ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಪ್ರೆರೇಪಣೆ ಆಗಬೇಕು. ಜೀವನದಲ್ಲಿ ಇಂತಹ ಆಚರಣೆಗಳಿಂದ ನೈತಿಕ‌ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂದರ್ಭವಾದಾಗ ಮಾತ್ರ ವ್ಯಕ್ತಿ – ಸಮಾಜಕ್ಕೆ ಇಂತಹ ಆಚರಣೆಗಳಿಂದ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಹುಟ್ಟಿದ ದಿನ, ವಿವಾಹ ವಾರ್ಷಿಕೊತ್ಸವ, ಹೊಸ ವರ್ಷಾಚರಣೆ ಇತ್ಯಾದಿಗಳಿಂದ ಅನಾವಶ್ಯಕ ಆಚರಣೆಗಳನ್ನು ಅರ್ಥವಿಲ್ಲದೇ ನಮ್ಮ‌ ಆರ್ಥಿಕ ಶಕ್ತಿ- ಸಾಮರ್ಥ್ಯ ಮೀರಿ ಆಚರಣೆ ಮಾಡುತ್ತಿರುವುದು ಈ ಯುಗದ ಟ್ರೆಂಡಾಗಿ ಮಾಡಿದ್ದೇವೆ.ಆದರೆ ಹುಟ್ಟು ಹಬ್ಬ ಮಾಡಿಕೊಳ್ಳುತ್ತೇವೆ ಆ ಸಂದರ್ಭದಲ್ಲಿ ನಮ್ಮಲ್ಲಿರುವ ದುಶ್ಚಟಗಳನ್ನು – ದುರಾಲೋಚನೆಗಳನ್ನು ನಮ್ಮಿಂದ ಕಿತ್ತಾಕಿ – ಉತ್ತಮ ಆಲೋಚನೆಗಳನ್ನು ಎಷ್ಟು ಜನ ಯುವ ಸಮೂಹ ಅಳವಡಿಸಿಕೊಂಡಿವೆ ?, ಅಳವಡಿಸಿಕೊಳ್ಳಲು ನಾವು ಸಲಹೆ ನೀಡಿದ್ದೇವಾ ?ಎಂದು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.ಪ್ರತಿ ವರ್ಷಕ್ಕೆ ಬರುವ ಕ್ಯಾಲೆಂಡರ ದಿನದಂದು ನಿನ್ನ ಹುಟ್ಟು ಹಬ್ಬವಲ್ಲಾ, ಪ್ರತಿದಿನವು ನಿನ್ನ ಜೀವನಕ್ಕೆ ಹುಟ್ಟಿದ ದಿನವೇ ಎಂದು ನಾವು ಕೆಲಸ ಕಾರ್ಯಗಳನ್ನು ಉತ್ಸಾಹದಿಂದ ಮಾಡಬೇಕು ಎಂಬುದನ್ನು ನಾವು ಅರ್ಥಮಾಡಿಕೊಂಡಿಲ್ಲಾ, ಖಂಡಿತ ಅರ್ಥಾ ಮಾಡಕೊಳಬೇಕು.

ವಿವಾಹ ವಾರ್ಷಿಕೊತ್ಸವ ಮಾಡುತ್ತಿದ್ದೇವೆ.
ದಾಂಪತ್ಯ ಜೀವನದಲ್ಲಿ ಕುಟುಂಬವು ಪ್ರತಿ ದಿನ ಹಲವು ಸಮಸ್ಯೆ- ಸವಾಲುಗಳು ತಂದೆ- ತಾಯಿ ಪಾಲನೆ, ಮಕ್ಕಳ ಪೋಷಣೆ, ವಿದ್ಯಾಭ್ಯಾಸ, ಜವಾಬ್ದಾರಿಗಳು,ಕುಟುಂಬದ ಏರುಪೇರುಗಳ ಜಂಜಾಟದಲ್ಲಿ ಎಷ್ಟು ಕುಟುಂಬಗಳಲ್ಲಿ ಒಬ್ಬರನೊಬ್ಬರು ಕುಟುಂಬದ ಸದಸ್ಯರು ಅರ್ಥಮಾಡಿಕೊಂಡು ಜೀವನ ಸಾಗಿಸುತ್ತಿದ್ದವೆ! ಎಂಬುದನ್ನು ನಾವು ಮೆಲುಕಾಕಬೇಕು. ನಮಗೆ ಇರುವ ಆರ್ಥಿಕ ಶಕ್ತಿಗೆ ಅನುಗುಣವಾಗಿ ಕುಟುಂಬ ನಿರ್ವಣೆಯಲ್ಲೂ ದಾಂಪತ್ಯ ಜೀವನವನ್ನು ಆದರ್ಶವಾಗಿ ಸಾಗಿಸಿದಾಗ ಇಂತಹ ಆಚರಣೆಗೆ ಅರ್ಥಬರಬಹುದಾಗಿದೆ.ಇದರಿಂದ ಮಕ್ಕಳಿಗೆ ಮುಂದಿನ ಪೀಳಿಗೆಗೆ ಉತ್ತಮವಾದ ಸಂದೇಶ ನೀಡಬಹುದು. ಇದನ್ನು ಬಿಟ್ಟು ಮನೆಯ ಪಕ್ಕದವರು ಮಾಡಿದರೆಂದು ನಾವು ಮಾಡೊಣವೆಂದರೆ ಅದಕ್ಕೆ ಅರ್ಥ ಇರುವುದಿಲ್ಲ.

ಇತ್ತೀಚಿನ ದಿನಗಳಲ್ಲಿ ಕುಟುಂಬಗಳು ವಿಘಟನೆಯಾಗುತ್ತಿರುವುದು, ಅನಾಥಶ್ರಮಗಳಲ್ಲಿ ಆಶ್ರಯ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು, ದಾಂಪತ್ಯ ಜೀವನದಿಂದ ವಿಚ್ಚೇದನ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನೋಡಿದರೆ ಇಂತಹ ಆಚರಣೆಗಳಿಂದ ನಾವು *ಯಾರೋ ಹಾಕಿರುವ ಅರ್ಥವಿಲ್ಲದ ಆಚರಣೆ ಎಂಬ ಜೋಕಾಲಿಯಲ್ಲಿ ತೆಲಾಡುತ್ತಿದ್ದೇವೆ* ಎನಿಸುತ್ತದೆ. ಈ ಜೋಕಾಲಿಯನ್ನು ತೂಗುವವರೆ ಹೆಚ್ಚಿನ ಜನರಿದ್ದಾರೆ. ಆದರೆ ಈ ಜೋಕಾಲಿಯನ್ನು ನಿಲ್ಲಿಸಿ ನಮ್ಮನ್ನು ಇಳಿಸುವವರು ಯಾರು ಇಲ್ಲ.

ಇಂದಿನ ಯುವ ಪೀಳಿಗೆಯಿಂದ ಪ್ರತಿ ವರ್ಷ ಬರುವ ಹೊಸ ವರ್ಷವನ್ನು ಆಚರಣೆಗೆ ಆಯ್ಕೆ ಮಾಡಿಕೊಳ್ಳುವ ಗಲ್ಲಿಯಲ್ಲಿನ ಸ್ಥಳದಿಂದ ದಿಲ್ಲಿಯ ಕೇಂದ್ರಗಳಲ್ಲಿ ಆಚರಣೆಯ ( ಹಳ್ಳಿಯ ರಸ್ತೆಯಿಂದ ಪಟ್ಟಣದ ಹೊಟೆಲ್, ಮಾಲ್ ಬಾರ್ ರೆಸಾರ್ಟ, ಆಚರಣೆಯ ಕೇಂದ್ರಗಳಿಂದ ) ಸದ್ದು ಮುಗಿಲು ಮುಟ್ಟುತ್ತಿದೆ. ಈ ದಿನದಲ್ಲಿ ಆ ರಾತ್ರಿ ಕಳೆಯಲು ಮಾರನೇಯ ದಿನವನ್ನು ಸ್ವಾಗತಿಸಲು ಮಾಡುವ ಚಟುವಟಿಕೆಗಳಿಂದ ಮಾಡುವ ಅನಾವಶ್ಯಕ ಮತ್ತು ಶಕ್ತಿ ಮಿರಿದ ದುಂದು ವೆಚ್ಚವವನ್ನು ನಾವು ನೋಡಿದರೆ ನಾವು ಏನನ್ನು ಸಾಧಿಸಲು, ಯಾರನ್ನು ಬದಲಾಯಿಸಲು ಹೊರಟ್ಟಿದೇವೆ ಎಂದು ತಿರುಗಿ ನೋಡಿದಾಗ, ಹೆಚ್ಚಾಗಿ ಕಂಡಿದ್ದು, ನಾವು ಮಾಡಿದ್ದು, ಕ್ಯಾಲೆಂಡರಿನ ಹೊಸ ಮುದ್ರಣ, ಪುಟ ತಿರಗಿಸಿದ್ದು ಮಾತ್ರ.ಇದರ ಹೊರತು ನಾವು ಬದಲಾಗಲಿಲ್ಲ. ಡಿಸೆಂಬರ್ ೩೧ ರ ಮಧ್ಯರಾತ್ರಿ ವರೆಗೆ ಮದ್ಯ ಪ್ರಸಾದ ಸೇವನೆಯ ಜಪದಲ್ಲಿ ಜಾಗರಣೆ ಮಾಡುತ್ತೇವೆ. ಈ ಅರ್ಥವಿಲ್ಲದ ಉತ್ತಮ ಉದ್ದೇಶ- ಸಂಕಲ್ಪವಿಲ್ಲದ ಜಪತಪದಲ್ಲಿ ಗದ್ದಲ ಗಲಾಟೆಗಳೆ ಹೆಚ್ಚಾಗಿ ಕಾಣುತ್ತೇವೆ. ಜನೆವರಿ ೦೧ ನೇ ತಾರೀಖನಂದು ಎಲ್ಲರಿಗೂ ಹೊಸ ವರ್ಷದ ಶುಭಾಷಯಗಳನ್ನು ತಿಳಿಸುತ್ತಾ ಹೊಗುತ್ತೇವೆ. ಆದರೆ ಮನುಷ್ಯನಿಗೆ ಪ್ರತಿದಿನ ಬೆಳಗಿನ‌ ಜಾವವು ಹೊಸ ದಿನವಾಗಿರುತ್ತದೆ. ನಾವು ಇದನ್ನು ಅರ್ಥಮಾಡಿಕೊಂಡು, ಪ್ರತಿ ದಿನವನ್ನು ಉತ್ತಮ ಮತ್ತು ಹೊಸ ಆಲೋಚನೆಗಳನ್ನ ಮಾಡಿಕೊಳ್ಳೊಣ / ಮಾಡಕೊಂಡಿದ್ದೆವೆ ಹಾಗಾಗಿ ಶುಭಾಶಗಳೊಂದಿಗೆ ಪ್ರಾರಂಭಿಸೋಣ ಅಂತ ಅನ್ಕೊಂಡಿವೇ ? ದುಶ್ಚಟಗಳನ್ನ – ದುರಾಲೋಚನೆಗಳನ್ನು ಬಿಡುವ ಸಂಕಲ್ಪವನ್ನು ಎಷ್ಟು ಜನರು ಮಾಡುತ್ತಿದ್ದೇವೆ ಎನ್ನುವುದು ಪ್ರಶ್ನೆಯಾಗಿದೆ. ದುರಾಲೋಚನೆಗಳನ್ನು ದುಶ್ಚಟಗಳನ್ನು ತ್ಯಜಿಸಲು ಕ್ಯಾಲೆಂಡರನ ಹೊಸ ಮುದ್ರಣದ ಜನವೆರಿ ತಿಂಗಳಿನ ವರ್ಷಕ್ಕಾಗಿ ಕಾಯಬಾರದು ಎಂಬುವ ವಾಸ್ತವತೆಯನ್ನು ನಾವು ಅರ್ಥಾಮಾಡಿಕೊಳ್ಳಬೇಕಾಗಿದೆ ಎಂಬುವುದು ಈ ಲೇಖನದ ಉದ್ದೇಶವಾಗಿದೆ.ಹಾಗಾಗಿ ಇಂತಹ ಅರ್ಥವಿಲ್ಲದೆ ಇರುವ ಅನಗತ್ಯ ಆಚರಣೆ, ಅನಾಚಾರಗಳಿಗೆ ನಾವು ಇತಿಶ್ರೀ ಹಾಡಬೇಕು.

About The Author