ಆರ್‌ಟಿಐ ಕಾರ್ಯಕರ್ತ ಬಸವರಾಜ ಅರುಣಿ ಮೇಲೆ ಹಲ್ಯೆ :  ಬಿಜೆಪಿ ಮುಖಂಡ ಅಮೀನರೆಡ್ಡಿ ಖಂಡನೆ

ಶಹಾಪೂರ :ತಾಲೂಕಿನ ಸಾಮಾಜಿಕ ಕಾರ್ಯಕರ್ತನಾದ ಬಸವರಾಜ ಅರಣಿಯ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿರುವುದು ಖಂಡನೀಯ ಎಂದು ಬಿಜೆಪಿ ಹಿರಿಯ ಮುಖಂಡರಾದ ಅಮೀನ ರೆಡ್ಡಿ ಯಾಳಗಿ ಖಂಡಿಸಿದರು. ಇಂದು ನಗರದ ಎನ್ ಜಿ ಒ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಒಬ್ಬ ಸಾಮಾನ್ಯ ಸಾಮಾಜಿಕ ಕಾರ್ಯಕರ್ತನಾದ ಬಸವರಾಜ ಅರುಣಿಯವರಿಗೆ ವಿಶ್ವನಾಥ ರೆಡ್ಡಿ ದರ್ಶನಾಪುರ ಅವರನ್ನು  ಕೊಲೆ ಮಾಡಲು ತಿನ್ನುವ ಸಿಹಿಯಲ್ಲಿ ವಿಷ ಹಾಕಿದ್ದ ಎನ್ನುವ ಆರೂಪದಡಿ ಕಾನೂನಾತ್ಮಕವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಾಗಿತ್ತು. ಆದರೆ ಅನಾವಶ್ಯಕವಾಗಿ ಬಟ್ಟೆ ಬಿಚ್ಚಿ ಅರೆ ಬೆತ್ತಲೆಯಾಗಿ ಆತನನ್ನು ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ಹಲ್ಲೆ ಮಾಡಿದವರ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಲ್ಲೆಗೊಳಗಾದ ಸಾಮಾಜಿಕ ಕಾರ್ಯಕರ್ತ ಬಸವರಾಜ ಅರುಣಿ ಮಾತನಾಡುತ್ತಾ,ನಾನು ತಿನ್ನುವ ಸಿಹಿಯಲ್ಲಿ  ಯಾವುದೇ ವಿಷ ಹಾಕಿಲ್ಲ.ಆರ್ಟಿಐ ಅರ್ಜಿಗೆ ಸಂಬಂಧಿಸಿದಂತೆ ಐದು ಲಕ್ಷ ಹಣದ ಬೇಡಿಕೆ ಇಟ್ಟಿದ್ದೇನೆ ಎನ್ನುವುದು ಶುದ್ಧ ಸುಳ್ಳು. ಆರ್‌ಟಿಐ ಕಾರ್ಯಕರ್ತನಾದ ನನ್ನಲ್ಲಿ ಹಲವು ದಾಖಲೆಗಳಿವೆ.ನನ್ನನ್ನು ಬಲವಂತವಾಗಿ ವಿಶ್ವನಾಥ ರೆಡ್ಡಿ ಮನೆಗೆ ಕರೆಯಿಸಿ ಹಲ್ಲೆ ಮಾಡಿದ್ದಾನೆ.ಇದರಲ್ಲಿ ತಾಲೂಕು ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ಶರಣಪ್ಪ ಬಳಭಟ್ಟಿ ಶಾಮೀಲಾಗಿದ್ದು,ಕೂಡಲೇ ಅವರನ್ನು ಅಮಾನತು ಮಾಡಬೇಕು.ನನ್ನ ಮೇಲೆ ಹಲ್ಲೆ ಮಾಡಿದವರೆಲ್ಲರ ಮೇಲೂ ದೂರು ದಾಖಲಿಸುವೆ.ನನಗೆ ಪ್ರಾಣ ಬೆದರಿಕೆ ಇರುವ ಕಾರಣ   ರಕ್ಷಣೆ ಬೇಕಿದೆ.

About The Author