ಮಹಾಶೈವ ಧರ್ಮಪೀಠ ಅಷ್ಟೋತ್ತರ ಶತನಾಮಾವಳಿ ಮಾಲಿಕೆಯಡಿ ‘ ಗ್ರಂಥಸೇವೆ’ ಯ ಸದಾವಕಾಶ

ಮಹಾಶೈವ ಧರ್ಮಪೀಠವು ಭಕ್ತಜನರ ಉದ್ಧಾರೋದ್ದೇಶದಿಂದ ಶಿವ ದುರ್ಗಾದೇವಿಯರ ಸಹಿತ ವಿವಿಧ ದೇವತೆಗಳ ಅಷ್ಟೋತ್ತರ ಶತನಾಮಾವಳಿಗಳನ್ನು ಕಿರು ಪುಸ್ತಕಗಳ ರೂಪದಲ್ಲಿ ಪ್ರಕಟಿಸಲು ಸಂಕಲ್ಪಿಸಿದ್ದು ಶ್ರೀಗಣೇಶ,ಶ್ರೀ ಸುಬ್ರಹ್ಮಣ್ಯ,ಶ್ರೀ ಶಿವ,ಶ್ರೀ ದುರ್ಗಾ,ಶ್ರೀ ಮಹಾಕಾಳಿ,ಶ್ರೀ ಆಂಜನೇಯ ದೇವರುಗಳಾದಿ ಸರ್ವದೇವತೆಗಳ ಅಷ್ಟೋತ್ತರ ಶತನಾಮಾವಳಿ( ನೂರೆಂಟು ನಾಮಾವಳಿ) ಗಳನ್ನು ಪ್ರಕಟಿಸಲಿದ್ದು ಮಹಾಶೈವ ಧರ್ಮಪೀಠದ ಭಕ್ತರುಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮಗೆ ಇಷ್ಟವಾದ ದೇವತೆಗಳ ಅಷ್ಟೋತ್ತರ ಶತನಾಮಾವಳಿ ಪುಸ್ತಕ ಮುದ್ರಣಕ್ಕೆ ಕಾಣಿಕೆ ಸಲ್ಲಿಸಬಹುದು.

ದೇವರುಗಳ ಅಷ್ಟೋತ್ತರಶತನಾಮಾವಳಿ ಪುಸ್ತಕಗಳನ್ನು ಪ್ರತಿ ದೇವರಿಗೆ ಪ್ರತ್ಯೇಕ ಕಿರುಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಿದ್ದು ಒಂದು ಸಾವಿರ ಪುಸಕ್ತಗಳನ್ನು ಪ್ರಕಟಿಸಲಾಗುವುದು.ಸಾವಿರ ಪುಸ್ತಕಗಳ ಮುದ್ರಣಕ್ಕೆ ಹನ್ನೊಂದು ಸಾವಿರ ರೂಪಾಯಿಗಳಾಗುತ್ತಿದ್ದು ಮುದ್ರಣವೆಚ್ಚವನ್ನು ಭರಿಸಿದ ಭಕ್ತರ ಹೆಸರುಗಳನ್ನು ಪುಸ್ತಕದ ‘ ಗ್ರಂಥ ಪ್ರಕಟಣೆ ಸೇವೆ’ ಯಡಿ ಪ್ರಕಟಿಸಲಾಗುವುದು.ಆಸಕ್ತ ಭಕ್ತರುಗಳು ಪುಸ್ತಕಗಳನ್ನು ಮುದ್ರಿಸಲು ಕಾಣಿಕೆ ಸಲ್ಲಿಸಲು ಮಹಾಶೈವ ಧರ್ಮಪೀಠದ ಪರವಾಗಿ ಮಾಹಿತಿ ಪ್ರಕಟಿಸಲಾಗಿದೆ

 

About The Author