ವಿಶ್ವನಾಥ ರೆಡ್ಡಿ ದರ್ಶನಾಪುರ ಮೇಲೆ ಕೊಲೆ ಪ್ರಯತ್ನ ಅದೃಷ್ಟವಶಾತ್ ಪಾರು !

ಶಹಾಪೂರ : ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದನು. ತಿನ್ನುವ ಕೇಕ್ ನಲ್ಲಿ ವಿಷ ತಿನ್ನಿಸಲು ಪ್ರಯತ್ನಿಸಿದನು. ದೇವರ ದಯೆಯಿಂದ ನಾನು ಪ್ರಾಣಪಾಯದಿಂದ ಬದುಕಿಕೊಂಡೆ ಎಂದು ನಿರ್ಮಲ ದೇವಿ ಮಹಿಳಾ ಮಂಡಳ NGO ದ ಮುಖ್ಯಸ್ಥರಾದ ವಿಶ್ವನಾಥ ರೆಡ್ಡಿ ದರ್ಶನಾಪುರ ಹೇಳಿದರು. ಇಂದು ಬಾಪುಗೌಡ  ನಗರದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು, ಬಸವರಾಜ ಅರುಣಿ ತಂದೆ ಕರಿಬಸಪ್ಪ ಎನ್ನುವಾತ  ಸಾಮಾಜಿಕ ಕಾರ್ಯಕರ್ತನು ಸೋಮವಾರ ಸಾಯಂಕಾಲ 5:00 ಗಂ. ಸುಮಾರಿಗೆ ನನ್ನ ಕಚೇರಿಗೆ ಬಂದು ನನಗೆ ಕೇಕ್ ನಲ್ಲಿ ವಿಷ ಹಾಕಿ ಕೊಲೆ ಮಾಡಲು ಪ್ರಯತ್ನಿಸಿದನು. ಅದೃಷ್ಟ ಸಾವಿನಿಂದ ಬಚವಾಗಿದ್ದೇನೆ ಎಂದರು.

ಸುಮಾರು ಮೂರು ತಿಂಗಳಿನಿಂದ ನನ್ನ ಮೇಲೆ ಪದೇಪದೇ ದ್ವೇಷ ಸಾಧಿಸುತ್ತಿದ್ದ ಬಸವರಾಜ ಅರುಣಿ, ನಾನು ನಡೆಸುತ್ತಿರುವ ನಿರ್ಮಲಾದೇವಿ ಮಹಿಳಾ ಮಂಡಳ NGO ಮುಖಾಂತರ ತಾಲೂಕಿನ  13 ಶಾಲೆಗಳಿಗೆ ಸುಮಾರು 5000 ಮಕ್ಕಳಿಗೆ ಬಿಸಿಯೂಟ ವಿತರಣೆ ಮಾಡುತ್ತಿರುವೆ. ಬಿಸಿಯುಟದಲ್ಲಿ ವಿಷ ಸೇವಿಸಲು ಪ್ರಯತ್ನಿಸಿ ವಿಫಲನಾಗಿದ್ದಾನೆ.RTI ಅರ್ಜಿ ಹಾಕಿ ಪದೇ ಪದೇ ನನಗೆ ಕಿರುಕೂಳ ನೀಡುತ್ತಿದ್ದ.ಅರ್ಜಿ ಹಿಂಪಡೆಯಲು 5 ಲಕ್ಷ ಬೇಡಿಕೆ ಇಟ್ಟಿದ್ದು,  ಜಿಲ್ಲಾ ಸಹಕಾರ ಇಲಾಖೆ ಯೂನಿಯನ್ ರಚಿಸಿದ್ದು ಅದರಲ್ಲಿ ನನಗೆ ಜಿಲ್ಲಾ ಪ್ರವರ್ತಕ ಹುದ್ದೆ ನೀಡಬೇಕು ಆ ಸ್ಥಾನವನ್ನು ನನಗೆ ಬಿಟ್ಟುಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದರು ಎಂದು ಹೇಳಿದರು.

ಸೋಮವಾರ ಸಾಯಂಕಾಲ 5:00ಗಂ. ಸುಮಾರಿಗೆ ವಿಜಯಕುಮಾರ ಗುಡುಗುರ್ತಿ ಮತ್ತು ಬಸವರಾಜ ಅರುಣಿ ನನ್ನಲ್ಲಿಗೆ ಬಂದು ಆರ್‌ಟಿಐ ಅರ್ಜಿ ಹಿಂಪಡೆಯಲು ಸಂಧಾನಕ್ಕಾಗಿ ಬಂದು ಸಂಧಾನ ಇತ್ಯರ್ಥವಾದ ಮೇಲೆ ಸಿಹಿ ತಿನ್ನೋಣ ಎಂದು ನನ್ನ ಕಛೇರಿಯ ಶಿವಲಿಂಗ ತಂದೆ ತಿಪ್ಪಣ್ಣ ಬೈಚನಾಳ ಮೂಲಕ ವಿಜಯಕುಮಾರ ಗುಂಡಗುರ್ತಿಯವರ ಸ್ಕೂಟಿ ದ್ವೀ ಚಕ್ರ ವಾಹನದಲ್ಲಿರುವ ಕೇಕ್ ತಂದು ತಿನ್ನಿಸಲು ಪ್ರಯತ್ನಿಸಿದ ಎಂದು ಹೇಳಿದರು. ಆದ್ದರಿಂದ ಇಂದು ನಾನು ನಗರದ ಪೊಲೀಸ್ ಠಾಣೆಗೆ ಬಸವರಾಜ ಅರುಣಿ ವಿರುದ್ಧ ಕೊಲೆ ಪ್ರಯತ್ನ ದೂರು ದಾಖಲಿಸುತ್ತೇನೆ ಎಂದರು.

 

   ಸೋಮವಾರದಂದು ಸಾಯಂಕಾಲ 5:00 ಗಂ. ಸುಮಾರಿಗೆ ವಿಶ್ವನಾಥ ರೆಡ್ಡಿ ದರ್ಶನಪುರವರಿಗೆ ವಿಷ ಸೇವಿಸಿ ಕೊಲೆ ಮಾಡಲು ಪ್ರಯತ್ನಿಸಿದ ಬಸವರಾಜ ಅರುಣಿಯ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂರು ತಿಂಗಳಿನಿಂದ ಪದೇ ಪದೇ ಆರ್‌ಟಿಐ ಮೂಲಕ ಕಿರುಕುಳ ಕೊಡುತ್ತಿದ್ದ ಎನ್ನುತ್ತಿರುವ ವಿಶ್ವನಾಥ ರೆಡ್ಡಿ ಆಗಲೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಿತ್ತು.ಈತನ ಹಿಂದಿರುವವರು ಯಾರಾರು ಇದ್ದಾರೆ ಎಂದು ತಿಳಿದುಕೊಳ್ಳಲು ದೂರು ದಾಖಲಿಸಿಲ್ಲ ಎನ್ನುತ್ತಾರೆ ವಿಶ್ವನಾಥ ರೆಡ್ಡಿ. ಬಸವರಾಜ ಅರುಣಿ ಕೇಕ್ ಮೂಲಕ ವಿಷ ತಿನ್ನಿಸಲು ಪ್ರಯತ್ನಿಸಿದನು ಎನ್ನುವ ಕಾರಣಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎನ್ನುವ ದೂರುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿವೆ ?. ಇನ್ನು ನಗರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಬೇಕಿದೆ. ನಂತರ ಪೊಲೀಸರ ತನಿಖೆಯಿಂದ  ಸತ್ಯಾಂಶ ಹೋರಬರಬೇಕಿದೆ.

“ವಿಶ್ವನಾಥ ರೆಡ್ಡಿ ದರ್ಶನಾಪುರ’

ತಾಲೂಕು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಯಾದದ ಶರಣಪ್ಪ ಬಳಬಟ್ಟಿ ಸರಕಾರಿ ಅಧಿಕಾರಿಯಾಗಿದ್ದು, ಈ ಸಂದಾನ ಸೂತ್ರದಲ್ಲಿ ಪಾಲ್ಗೊಂಡಿದ್ದರೇ? ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ ?.RTI ನಲ್ಲಿ ಕೇಳಲಾದ ಮಾಹಿತಿ ಕೊಡಬೇಕಾಗಿತ್ತು. ಅದು ಬಿಟ್ಟು ಸಂಧಾನ ಸೂತ್ರಕ್ಕೆ ಮಧ್ಯಸ್ಥಿಕೆಗಾರನಾಗಿದ್ದರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ?. ಪೋಲಿಸ್ ತನಿಕೆಯಿಂದಲೇ ಸತ್ಯ ಹೊರ ಬರಬೇಕಿದೆ.

 

About The Author