ಮಹಾಶೈವ ಧರ್ಮಪೀಠದ ದಾಸೋಹದ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ

ಮಹಾಶೈವ  ಧರ್ಮಪೀಠದ ದಾಸೋಹದ ದೇಣಿಗೆ ಸಂಗ್ರಹ ಕಾರ್ಯಕ್ಕೆ ಚಾಲನೆ
ಗಬ್ಬೂರು : ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಪಶಮನ ಕಾರ್ಯ’ದ ನಿಮಿತ್ತವಾಗಿ ನಡೆಯುತ್ತಿರುವ ದಾಸೋಹಕ್ಕಾಗಿ ಸಂಗ್ರಹಿಸಲು ಉದ್ದೇಶಿಸಿದ ದೇಣಿಗೆ  ಸಂಗ್ರಹ ಕಾರ್ಯಕ್ಕೆ ಇಂದು ಸಂಜೆ ಶ್ರೀಕ್ಷೇತ್ರ ಕೈಲಾಸದ ಅಧಿದೇವಿ ಮಹಾಕಾಳಿ ಸನ್ನಿಧಿಯಲ್ಲಿ ವಿದ್ಯಕ್ತವಾಗಿ ಚಾಲನೆ ನೀಡಲಾಯಿತು.
     ಕಾಳಿದಾಸ ಮಸೀದಪುರ,ವೀರೇಶ ಯಾದವ ಗಬ್ಬೂರು,ಶಿವಯ್ಯ ಸ್ವಾಮಿ ಮಠಪತಿ,ಪಂಚಯ್ಯ ಕರಿಗಾರ,ಪ್ರಭು ಕರಿಗಾರ ಮತ್ತು ಭೀಮಣ್ಣ ಮರಾಠ ಮಸೀದಪುರ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರಿಗೆ ದಾಸೋಹದ ದೇಣಿಗೆ ನೀಡಿ,ರಸೀದಿ ಪಡೆಯುತ್ತಿರುವುದನ್ನು ಕಾಣಬಹುದು.ಮಹಾಶೈವ ಧರ್ಮಪೀಠದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
          ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ.

Leave a Reply

Your email address will not be published. Required fields are marked *