ಮಹಾಶೈವ ಧರ್ಮಪೀಠದ ಮಹಾಕಾಳಿ ಮಂದಿರಕ್ಕೆ ಎಸ್ ಕೆ ಕಾಲೀಶಾವಲಿಯವರಿಂದ ಸೌಂಡ್ ಸಿಸ್ಟಮ್ ಕೊಡುಗೆ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮಹಾಶೈವ ಧರ್ಮಪೀಠದ ಶ್ರೀ ಕ್ಷೇತ್ರ ಕೈಲಾಸದಲ್ಲಿ ಇತ್ತೀಚೆಗೆ ಮಹಾಕಾಳಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.ಮಹಾಕಾಳಿ ಮಂದಿರದಲ್ಲಿ ಪ್ರತಿ ಶುಕ್ರವಾರ ಮಹಿಳೆಯರು ಮತ್ತು ಪುರುಷರಿಂದ ಭಜನೆ ನಡೆಯುತ್ತಿದ್ದು ಭಜನೆ ಕಾರ್ಯಕ್ರಮಕ್ಕಾಗಿ ಮಹಾಶೈವ ಧರ್ಮಪೀಠದ ಭಕ್ತರಾದ ಎಸ್ ಕೆ ಕಾಲೀಶಾವಲಿ ಅವರು ಇಂದು ಸೌಂಡ್ ಸಿಸ್ಟಮ್ ಅನ್ನು ಕೊಡುಗೆಯಾಗಿ ನೀಡಿದರು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ಕಾಲೀಶಾವಲಿಯವರನ್ನು ಮಹಾಕಾಳಿ ಅನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

ಮಹಾಶೈವ ಧರ್ಮಪೀಠವು ನಿಜವಾದ ಅರ್ಥದ ಜಾತ್ಯಾತೀತ ಮಠವಾಗಿದ್ದು ಪ್ರತಿ ರವಿವಾರದ ಶಿವೋಪಶಮನ ಕಾರ್ಯಕ್ಕೆ ಹಿಂದೂ,ಮುಸ್ಲಿಮರೆನ್ನದೆ ಎಲ್ಲ ಧರ್ಮಗಳ,ಸರ್ವಜಾತಿಯ ಭಕ್ತರುಗಳು ಆಗಮಿಸಿ, ಶಿವ ವಿಶ್ವೇಶ್ವರ,ಶಿವೆ ವಿಶ್ವೇಶ್ವರಿ ದುರ್ಗಾದೇವಿಯರ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ.

ಈ ಸಂದರ್ಭದಲ್ಲಿ ಪೀಠಾಧಿಕಾರಿ ತ್ರಯಂಬಕೇಶ, ಶಿವಯ್ಯಸ್ವಾಮಿ ಮಠಪತಿ,ಶಿವಪುತ್ರ ಕರಿಗಾರ,ಗೋಪಾಲ ಮಸೀದಪುರ,ಮಲ್ಲಯ್ಯ ಕರಿಗಾರ, ವಾರ್ತಾಧಿಕಾರಿ ಬಸವರಾಜ ಕರೆಗಾರ,ಯಲ್ಲಪ್ಪ ಕರಿಗಾರ,ರಮೇಶ,ಬಸವರಾಜ,ಅಂಬರೇಶ,ಮಹಾಂತೇಶ ಮೊದಲಾದ ಭಕ್ತರುಗಳು ಮಹಾಕಾಳಿಯ ಸನ್ನಿಧಿಯಲ್ಲಿದ್ದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

About The Author