‘ಶಿವೋಪಶನಮನ ಕಾರ್ಯ’ಕ್ಕೆ ತಟ್ಟೆಗಳ ಕೊಡುಗೆ ನೀಡಿದ ಬೂದೆಪ್ಪ ಗೌಡರಿಗೆ ಪೀಠಾಧ್ಯಕ್ಷರಿಂದ ಆಶೀರ್ವಾದಪೂರ್ವಕ ಸನ್ಮಾನ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ ಪ್ರತಿರವಿವಾರ ನಡೆಯುತ್ತಿರುವ’ ಶಿವೋಪಶಮನ ಕಾರ್ಯ’ ದ ಅಂಗವಾಗಿ ನಡೆಯುತ್ತಿರುವ ದಾಸೋಹಕಾರ್ಯಕ್ರಮಕ್ಕೆ ಒಂದು ನೂರಾ ಐವತ್ತು ತಟ್ಟೆಗಳ ಕೊಡುಗೆ ನೀಡಿದ ಬೂದೆಪ್ಪಗೌಡ ಮಾಲಿಪಾಟೀಲ್ ಅವರನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ಮಹಾಕಾಳಿದೇವಿಯ ಸನ್ನಿಧಿಯಲ್ಲಿಂದು ಆಶೀರ್ವಾದಪೂರ್ವಕವಾಗಿ ಸನ್ಮಾನಿಸಿದರು.

ಪೀಠಾಧಿಕಾರಿ ತ್ರಯಂಬಕೇಶ,ಶಿವಯ್ಯಸ್ವಾಮಿ ಮಠಪತಿ,ವಾರ್ತಾಧಿಕಾರಿ ಬಸವರಾಜ ಕರೆಗಾರ,ಚನ್ನಪ್ಪಗೌಡ ಮಾಲಿಪಾಟೀಲ್,ಗೋಪಾಲ ಮಸೀದಪುರ,ಯಲ್ಲಪ್ಪ ಕರಿಗಾರ,ಮಹಾಂತೇಶ,ರಮೇಶ,ರಾಮಕೃಷ್ಣ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

Leave a Reply

Your email address will not be published. Required fields are marked *