ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆ ಗಮನ ಹರಿಸಲಿ: ಡಾ. ಸಿ.ಎಂ. ಪಾಟೀಲ್

ಯಾದಗಿರಿ: ನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಆರೋಗ್ಯದ ಕಡೆಗೆ ಹೆಚ್ಚಿನ ಗಮನ‌ ಹರಿಸುವುದು ತುಂಬ ಅಗತ್ಯವಿದೆ ಎಂದು ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎಂ. ಪಾಟೀಲ್ ಹೇಳಿದರು.

ವೈದ್ಯರ ದಿನಾಚರಣೆ ಅಂಗವಾಗಿ ಆಶೀರ್ವಾದ ಆಸ್ಪತ್ರೆ ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರಿಗಾಗಿ ರವಿವಾರ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವೈದ್ಯರೊಂದಿಗೆ ಸಮಾಲೋಚನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪತ್ರಕರ್ತರು ಸಮಾಜದ ಕನ್ನಡಿ ಆಗಿದ್ದಾರೆ. ವ್ಯವಸ್ಥೆಯ ಲೋಪದೋಷಗಳನ್ನು ನಿವಾರಿಸಲು ಪ್ರಾಮಾಣಿಕವಾಗಿ ಸೇವೆ ಮಾಡುತ್ತಿದ್ದಾರೆ. ಹೀಗಾಗಿ ಆರೋಗ್ಯ ಕಾಪಾಡಿಕೊಂಡು ಜೀವನ ನಡೆಸುವುದು ಅಗತ್ಯವಿದೆ ಎಂದರು.

ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ನಿತ್ಯ ವ್ಯಾಯಾಮ ಮಾಡಬೇಕು. ಯೋಗ‌ ಮತ್ತು ಧ್ಯಾನ ಮಾಡಲು ಮೊದಲ ಆಧ್ಯತೆ ನೀಡಬೇಕು.‌ ಇದರಿಂದಾಗಿ ಆರೋಗ್ಯವಂತರಾಗಿ ಜೀವನ ನಡೆಸಬಹುದು ಎಂದರು.

ದೃಷ್ಠಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಎಚ್. ಭೀಮರಡ್ಡಿ ಮಾತನಾಡಿ, ಮನುಷ್ಯನಿಗೆ ಎಲ್ಲ‌ ಅಂಗಾಂಗಳ ಪೈಕಿ ನೇತ್ರಗಳು ಅತೀ ಮುಖ್ಯವಾಗಿವೆ.ನೇತ್ರಗಳ ಸುರಕ್ಷಿತೆಗೆ ಆಧ್ಯತೆ ನೀಡಬೇಕಿದೆ. ಯಾವುದೇ ಕಾರಣಕ್ಕೂ ಕೂಡ ನಿರ್ಲಕ್ಷ್ಯ ಮಾಡಬಾರದು.‌ಇದರಿಂದಾಗಿ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರು ಜೀವನ ಕಳೆದುಕೊಂಡಿರುವುದು ಕಾಣಬಹುದು. ಹೀಗಾಗಿ ನಾವು ಮೊದಲು ಆರೋಗ್ಯದ ಕಡೆಗೆಗಮನ‌ ಹರಿಸಬೇಕು ಎಂದರು.

ಪತ್ರಕರ್ತರು ನಿಮ್ಮನ್ನು ಇಡೀ ಕುಟುಂಬ ಅವಲಂಬಿಸಿ ಇರುತ್ತದೆ.‌ ನಿಮ್ಮನ್ನು‌ ನಂಬಿದವರ ಕಡೆಗೆ‌ ಗಮನ ಹರಿಸಿ ಸುದ್ದಿ‌‌ಲೋಕದಲ್ಲಿ ಕೆಲಸ ಮಾಡಬೇಕು ಎಂದರು.

ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಶೀರ್ವಾದ ಆಸ್ಪತ್ರೆ ಮುಖ್ಯಸ್ಥ ಡಾ.ಸಿ.ಎಂ. ಪಾಟೀಲ್ ಮತ್ತು ದೃಷ್ಢಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ. ಎಚ್.‌ಭೀಮರಡ್ಡಿ ಅವರಿಗೆ ಸನ್ಮಾನಿಸಲಾಯಿತು.

ಹಲವು ವೈದ್ಯಕೀಯ ತಪಾಸಣೆ 

ಮಧುಮೇಹ ಪರೀಕ್ಷೆ,ಇಸಿಜಿ, ಬಿಪಿ, ನೇತ್ರ ಪರೀಕ್ಷೆ, ರಕ್ತ ಪರೀಕ್ಷೆ, ಎಕ್ಸ್ ರೇ ಸೇರಿದಂತೆ ಇನ್ನಿತರ ಪರೀಕ್ಷೆಗಳನ್ನು ವೈದ್ಯರು ಮಾಡುವ ಮೂಲಕ ಅಗತ್ಯವಾದ ಸಲಹೆಗಳನ್ನು ಪತ್ರಕರ್ತರಿಗೆ ನೀಡಿದರು.


ಶಿಬಿರದಲ್ಲಿ 60ಕ್ಕೂ ಅಧಿಕ ಪತ್ರಕರ್ತರು ಭಾಗಿ

ಶಿಬಿರದಲ್ಲಿ 60ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸುವ ಮೂಲಕ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿದರು. ಜಿಲ್ಲೆಯ ಎಲ್ಲ ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶದ ಪತ್ರಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *