ಮಹಾಶೈವ ಧರ್ಮಪೀಠದಲ್ಲಿಂದು ‘ ದಾಸೋಹದ ದೇಣಿಗೆ ರಸೀದಿ’ ಪುಸ್ತಕಗಳ ಬಿಡುಗಡೆ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ಇಂದು ಶ್ರೀಕ್ಷೇತ್ರದ ಮಹಾಕಾಳಿ ಸನ್ನಿಧಿಯಲ್ಲಿ ದಾಸೋಹದ ದೇಣಿಗೆ ರಸೀದಿಪುಸ್ತಕಗಳನ್ನು ಬಿಡುಗಡೆ ಮಾಡಿದರು.ಮಹಾಶೈವ ಧರ್ಮಪೀಠದಲ್ಲಿ ಪ್ರತಿ ರವಿವಾರ ನಡೆಯುತ್ತಿರುವ ‘ ಶಿವೋಪಶಮನ ಕಾರ್ಯ’ ದಲ್ಲಿ ಉಪಶಮನಾಕಾಂಕ್ಷಿಗಳಾಗಿ ಬರುತ್ತಿರುವ ಭಕ್ತರಿಗಾಗಿ ಶ್ರೀಕ್ಷೇತ್ರದಲ್ಲಿ ದಾಸೋಹದ ವ್ಯವಸ್ಥೆ ಮಾಡಲಾಗಿದೆ.ಶ್ರೀಕ್ಷೇತ್ರಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಾಸೋಹ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿ ನಿರ್ವಹಿಸಲು ಪೀಠಾಧ್ಯಕ್ಷರು ಭಕ್ತರಿಂದ ದೇಣಿಗೆ ಸಂಗ್ರಹಿಸಿ,ನಿರ್ವಹಿಸಲು ಸೂಚಿಸಿದ್ದರು.’ದಾಸೋಹವು ಪವಿತ್ರ ಕಾರ್ಯವಾಗಿದ್ದು ಜಗತ್ತಿನ ಅನ್ನದಾತನಾದ ಶಿವನ ಸನ್ನಿಧಿಯಲ್ಲಿ ನಡೆಯುವ ಅನ್ನದಾಸೋಹಕ್ಕೆ ಎಲ್ಲ ಭಕ್ತರ ಕೊಡುಗೆಯೂ ಇರಲಿ’ ಎಂದು ಪೀಠಾಧ್ಯಕ್ಷರು ಸೂಚಿಸಿದ್ದರಿಂದ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರ ಅನುಕೂಲಕ್ಕೆ ತಕ್ಕಂತೆ ದೇಣಿಗೆ ನೀಡಲು ಅವಕಾಶ ಕಲ್ಪಿಸಿದೆ.

ದೇಣಿಗೆ ರಸೀದಿ ಬಿಡುಗಡೆಯ ಸಂದರ್ಭದಲ್ಲಿ ಚನ್ನಪ್ಪಗೌಡ ಮಾಲಿಪಾಟೀಲ್,ಅವರ ಚಿರಂಜೀವಿ ಬೂದೆಪ್ಪಗೌಡ,ಮಹಾಶೈವ ಧರ್ಮಪೀಠದ ಪೀಠಾಧಿಕಾರಿ ತ್ರಯಂಬಕೇಶ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗೋಪಾಲ ಮಸೀದಪುರ ಮತ್ತು ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ
ಶ್ರೀಕ್ಷೇತ್ರ ಕೈಲಾಸ,ಗಬ್ಬೂರು

About The Author