ಸಂಗೀತ ಮತ್ತು ಶಿಕ್ಷಣ ಉಸಿರು:ಕಾಳಹಸ್ತೇಂದ್ರ ಮಹಾಸ್ವಾಮಿಗಳು

ಶಹಾಪುರ;ನಾಡಿನ ಸಂಗೀತ ಸಾಹಿತ್ಯ ಲಲಿತ ಕಲೆಗಳನ್ನು ತನುಮನ ಧನವನ್ನು ವಿನಿಯೋಗಿಸಿ ನಮ್ಮ ಸಾಂಸ್ಕೃತಿಕ ಲೋಕವನ್ನು ಶ್ರೀಮಂತ ಗೊಳಿಸಬೇಕಾಗಿದೆ ಎಂದು ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ನುಡಿದರು.ವೆಂಕಟೇಶ್ವರ ನಗರ ಬಲಭೀಮೇಶ್ವರ ದೇವಸ್ತಾನದ ಆವರಣದಲ್ಲಿ ಶ್ರೀ ರಕ್ಷಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಸಾರಥ್ಯದಲ್ಲಿ ಸಂಸ್ಥೆಯ ೩ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಯುಗಾದಿ ಉತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ಸಂಗೀತ ಮತ್ತು ಶಿಕ್ಷಣ ಪ್ರತಿಯೊಬ್ಬರ ಉಸಿರು ಶಿಕ್ಷಣ ಸಂಸ್ಥೆಯ ಮೂಲಕ ಸಂಗೀತವನ್ನು ಜೀವಂತವಾಗಿಸುವ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನಿಯವಾದದ್ದು. ಹಿಂದಿನ ಕಾಲದ ಸಂಗೀತ ಪ್ರಸ್ತುತ ಸಂಗೀತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಯುವ ಪೀಳಿಗೆ ಸಾಹಿತ್ಯ, ಸಂಗೀತದ ಕಡೆಗೆ ಹೆಚ್ಚು ಒಲವು ಅಭಿರುಚಿ ಬೆಳೆಸಿಕೊಳ್ಳಬೇಕು. ಸಂಗೀತ ಹಾಗೂ ವಿವಿಧ ಕಲೆಗಳ ಕಡೆ ಇಂದಿನ ಯುವ ಪೀಳಿಗೆ ವಾಲುತ್ತಿದೆ ಎನ್ನುವುದು ಸಂತೋಷದ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರು ಡಿ.ಸಿ.ಸಿ ಬ್ಯಾಂಕ್ ನಿಧೇಶಕರಾದ ಗುರುನಾಥರೆಡ್ಡಿ ಪಾಟೀಲ್‌ರಿಗೆ ವಿಶೇಷ ಸನ್ಮಾನಿಸಲಾಯಿತು. ಶ್ರೀ ರಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷರಾದ ಗಣೇಶ ಪತ್ತಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ ಹಿರೇಮಠ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಶರಣು ಬಿ ಗದ್ದುಗೆ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಹನುಮೇಗೌಡ ಮರಕಲ್, ಬಿಜೆಪಿ ಹಿರಿಯ ಮುಖಂಡರಾದ ಅಡಿವೆಪ್ಪ ಜಾಕಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ದೇವಿಂದ್ರಪ್ಪ ಎನ್ ಕನ್ಯಾಕೊಳ್ಳುರು, ಶಂಕರ ಘತ್ತರಗಿ, ರಾಜು ಬೊಮ್ಮನಹಳ್ಳಿ, ಶರಣಯ್ಯ ಎನ್ ಮಠ, ಸೇರಿದಂತೆ ಇತರರು ಇದ್ದರು.

About The Author