ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿ ಹೇಳಿಕೆ ಬಸಲಿಂಗಯ್ಯ ಬಂಧನಕ್ಕೆ ಆಗ್ರಹ

ಶಹಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಬಸಲಿಂಗಯ್ಯ ಶಿವಯ್ಯ ಮಠಪತಿಯವರನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಕುರುಬ ಸಮಾಜದ ಮುಖಂಡರು ಆಗ್ರಹಿಸಿದರು. ಸಿದ್ದರಾಮಯ್ಯನವರನ್ನು ನಿಂದಿಸಿ ಇಡೀ ಕುರುಬ ಸಮುದಾಯಕ್ಕೆ ಜಾತಿ ನಿಂದನೆ ಮಾಡಿದ್ದಾರೆ. ಇಂತಹ ಸಮಾಜಘಾತುಕ ವ್ಯಕ್ತಿಗಳನ್ನು ಬಂಧಿಸಿ ಗಡಿಪಾರು ಮಾಡಿ.ಇಂತವರಿಂದ ಸಮಾಜದಲ್ಲಿ ಅಶಾಂತಿ ಏರ್ಪಟ್ಟು ಜಾತಿ-ಜಾತಿಗಳ ನಡುವೆ ಸಂಘರ್ಷ ಏರ್ಪಡುತ್ತದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಶರಣಪ್ಪ ಯಾಳಗಿ,ಮಾಳಪ್ಪ ಸುಂಕದ ಕೆಂಭಾವಿ, ಅಣ್ಣಾರಾಯ ಕರ್ನಾಟಕ, ಪರಶುರಾಮ ಪೂಜಾರಿ, ಶರಣಪ್ಪ ಪೂಜಾರಿ, ಮಹೇಶ ತುಂಬಗಿ, ರಮೇಶ್ ದೇವಿಕೇರಿ, ಯಲ್ಲಾಲಿಂಗ ಪೂಜಾರಿ,ಭೀಮಣ್ಣ ಮಾಳಹಳ್ಳಿ, ನಿಂಗಣ್ಣ ತುಂಬಗಿ, ಚಂದಪ್ಪ ಮುದ್ನೂರು  ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *