ಶಹಾಪುರ: ಶೈಕ್ಷಣಿಕವಾಗಿ ಪ್ರಬಲವಾದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ರಾಜ್ಯ ನಿರ್ದೇಶಕರಾದ ಶಾಂತಗೌಡ ನಾಗನಟಿಗಿ ಯವರು ಹೇಳಿದರು. ತಾಲೂಕಿನ ನಾಗನಟಿಗಿ ಗ್ರಾಮ ಪಂಚಾಯಿತಿಯಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಂ ರವರ ಜನ್ಮದಿನೋತ್ಸವ ಅಂಗವಾಗಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ಗ್ರಾಮ ಪಂಚಾಯಿತಿ ಸದಸ್ಯರಾಗಬೇಕಾದರೆ ತುಂಬಾ ಕಷ್ಟಕರ ಸಂದರ್ಭ ಇಂದಿನ ದಿನಗಳಲ್ಲಿದೆ. ಉಪ ಪ್ರಧಾನಿಯಾಗಿ ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್ ರಾಂ ರವರು ಉಪ ಪ್ರಧಾನಿ ಪಟ್ಟಕ್ಕೆರುವುದು ಸಣ್ಣ ವಿಷಯವಲ್ಲ. ಮಹಾನ್ ವ್ಯಕ್ತಿಗಳ ಜನ್ಮ ದಿನಾಚರಣೆಯನ್ನು ಆಚರಿಸುವುದರ ಜೊತೆಗೆ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಂದಾಗ ಮಾತ್ರ ಅವರ ಜಯಂತಿಗೆ ಅರ್ಥ ಬರುತ್ತದೆ ಎಂದು ಹೇಳಿದರು. ಪ್ರತಿಯೊಂದು ಸಮುದಾಯದವರು ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಪ್ರಬಲರಾಗಿದಾಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದು ತಿಳಿಸಿದರು.
Video Player
00:00
00:00
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಮಲಮ್ಮ ಯಲ್ಲಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ ನಿಂಗನಗೌಡ ನಿಂಗಣ್ಣ ರಾಯಚೂರು ಮಹಾದೇವಪ್ಪಗೌಡ ದೊಂದಿ ಮುನಿಯಪ್ಪ ಗೌಡ, ಅಂಬರೀಶ ಮಕಾಶಿ,ಸೋಪಣ್ಣ ಸುರಪುರ ಸೇರಿದಂತೆ ಇತರರು ಇದ್ದರು.