ಕೊಲೂರು ಮಲ್ಲಪ್ಪಾಜಿಯವರ ಸ್ಮಾರಕ ಜನವರಿಯಲ್ಲಿ ಲೋಕಾರ್ಪಣೆ :ಕಾಂಗ್ರೆಸ್ ಪಕ್ಷದಿಂದ ಯುವಕರಿಗೆ ಆದ್ಯತೆ ನೀಡಿದರೆ ನಾನು ಪ್ರಬಲ ಆಕಾಂಕ್ಷಿ : ನಿಖಿಲ್ ಶಂಕರ್

ವಡಗೇರ : ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಈ ಸಾರಿ ಯುವಕರಿಗೆ ಆದ್ಯತೆ ನೀಡುವ ಸಂಭವವಿದ್ದು, ಯಾದಗಿರಿ ಕ್ಷೇತ್ರದಲ್ಲಿ ಯುವಕರಿಗೆ ಆದ್ಯತೆ ನೀಡಿದರೆ ಕ್ಷೇತ್ರದಿಂದ ನಾನು ಕೂಡ ಪ್ರಬಲ ಆಕಾಂಕ್ಷೆ ಎಂದು ರಾಜ್ಯ ಕಾರ್ಯದರ್ಶಿಗಳು ಮತ್ತು ಯಾದಗಿರಿ ಉಸ್ತುವಾರಿಗಳಾದ ನಿಖಿಲ್ ಶಂಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾದಗಿರಿ ಜಿಲ್ಲೆಯಲ್ಲಿ ಕೊಲೂರು ಮಲ್ಲಪ್ಪಾಜಿ ಅವರು ಕಾಂಗ್ರೆಸ್ ಪಕ್ಷದಲ್ಲಿ ದುಡಿದಿದ್ದು, ಮುಖ್ಯಮಂತ್ರಿ ಅವಕಾಶ ಬಂದರೂ ಬಿಟ್ಟುಕೊಟ್ಟ ಮಹಾನ್ ತ್ಯಾಗಿಗಳಾಗಿಗಳು. ಅಂತಹ ಮಹಾನ್ ವ್ಯಕ್ತಿಗಳ ಸ್ಮಾರಕ ಜಿಲ್ಲೆಯಲ್ಲಿ ಇರದೇ ಇರುವುದು ದುರದೃಷ್ಟಕರ. ಆದ್ದರಿಂದ ಮಲ್ಲಪ್ಪಾಜಿಯವರ ಸ್ಮಾರಕ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳು ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
     ಸುರಪುರ ತಾಲೂಕಿನ ಕೆಂಭಾವಿ ಹೋಬಳಿಯಲ್ಲಿ  ಬರುವ ಬಾಬಾ ಮಠದಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡುತ್ತಿದ್ದೇವೆ ಎಂದರು.ನಮ್ಮ ತಂದೆಯವರು ಮಲ್ಲಪ್ಪಜಿ ಅವರ ಜೊತೆ ಒಳ್ಳೆಯ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಹೇಳಿದರು.ಯಾದಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅತಿ ಹೆಚ್ಚು ಆಕಾಂಕ್ಷಿಗಳಿದ್ದು ಯುವಕರಿಗೆ ಆದ್ಯತೆ ನೀಡುವ ಸಂಭವವಿದೆ ಎಂದು ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಕ್ಷೇತ್ರದ ಎಲ್ಲಾ ಜನತೆಯ ಜೊತೆಗೆ ಹೊಂದಾಣಿಕೆಯಾಲಿದ್ದು, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ವಿಶ್ವಾಸದಲ್ಲಿದ್ದೇನೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.

About The Author