ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿಗೆ ಶರಣಬಸಪ್ಪಗೌಡ ದರ್ಶನಾಪುರ ನೇಮಕ

ವಡಗೇರಾ : ರಾಜ್ಯದಲ್ಲಿ 2023 ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಪಕ್ಷದಿಂದ ಚುನಾವಣಾ ತಯಾರಿ ಆರಂಭಿಸಿದ ಕರ್ನಾಟಕ ಪ್ರದೇಶ ಚುನಾವಣಾ ಸಮಿತಿಗೆ ಕಾಂಗ್ರೆಸ್ ಪಕ್ಷದ 11 ಹೊಸ ನಾಯಕರನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಶಹಾಪುರ ಕ್ಷೇತ್ರದ ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ್ ಆಯ್ಕೆಯಾಗಿದ್ದು ಕಲ್ಯಾಣ ಕರ್ನಾಟಕದಲ್ಲಿ ಬಲ ಬಂದಂತಾಗಿದೆ.ಎಐಸಿಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಆಯ್ಕೆ ನಂತರ ಹಿಮಾಚಲ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ದಾಖಲಿಸಿದೆ.

ಮುಂದಿನ 2023ರಲ್ಲಿ ಸ್ಥಳೀಯ ಕರ್ನಾಟಕ ರಾಜ್ಯದಲ್ಲಿ ಜಯಿಸುವುದು ಅನಿವಾರ್ಯ. ಚುನಾವಣಾ ಸಮಿತಿಯಲ್ಲಿ   ಗುಲ್ಬರ್ಗ ಬೀದರ್ ಯಾದಗಿರಿ ಜಿಲ್ಲೆಯ ಮೂರು ಜನರನ್ನು ಚುನಾವಣಾ ಸಮಿತಿಗೆ ಆಯ್ಕೆ ಮಾಡಲಾಗಿದೆ.ಶಹಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಒಬ್ಬರೇ ಟಿಕೆಟ್ಗಾಗಿ ಅರ್ಜಿ ಹಾಕಿದ್ದು, ಬಹುತೇಕ ಅವರಿಗೆ ಸಿಗುವ ಸಂಭವ ಹೆಚ್ಚಿದೆ. ಇನ್ನೂ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು  ಯಾರಿಗೆ ಟಿಕೆಟ್ ಸಿಗುತ್ತದೆಯೋ ತಿಳಿಯುತ್ತಿಲ್ಲ. ಶಹಪುರದಲ್ಲಿ ಕಾಂಗ್ರೆಸ್ ಬಹುತೇಕವಾಗಿ ಗೆಲುವು ಸಾಧಿಸಬಹುದು.ಇದನ್ನರಿತ ರಾಷ್ಟ್ರ ರಾಜ್ಯ ಹೈಕಮಾಂಡ್ ಯಾದಗಿರಿ ಕ್ಷೇತ್ರವನ್ನು ಹೆಚ್ಚುವರಿಯಾಗಿ ಶಹಾಪುರ ಕ್ಷೇತ್ರವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿಯನ್ನು ದರ್ಶನಾಪುರ ರವರಿಗೆ ನೀಡುವಸಂಭವವಿದೆ. ಅದಕ್ಕೆಂದೇ ಹಯ್ಯಳ ಬಿ ಹೋಬಳಿಯಲ್ಲಿ ಮೊದಲ ಬಾರಿಗೆ ಕೈ ಕಾರ್ಯಕರ್ತರ ಸಭೆಯನ್ನು ನಡೆಸಿದ್ದರು.

 

ಕಾಂಗ್ರೆಸ್ ಚುನಾವಣಾ ಸಮಿತಿಯಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಸದಸ್ಯರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಅವರು ಪಕ್ಷದ ಹಿರಿಯ ಮುಖಂಡರು. ಸಚಿವರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ನಿರಂತರ ಜನ ಸಂಪರ್ಕದಲ್ಲಿದ್ದಾರೆ. ಶಹಪುರ ಕ್ಷೇತ್ರದಲ್ಲಿ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಕ್ಷೇತ್ರದ ಜನರು ಶರಣಬಸಪ್ಪಗೌಡ ದರ್ಶನಾಪುರವರನ್ನು ಉತ್ತಮ ನಾಯಕರೆಂದು ಒಪ್ಪಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ಜನರ ಆಶೀರ್ವಾದ ಅವರ ಮೇಲೆ ಇದೆ. ಅವರು ಗೆದ್ದೇ ಗೆಲ್ಲುತ್ತಾರೆ ಎನ್ನುವ ಅಭಿಪ್ರಾಯ ನನಗಿದೆ.ದರ್ಶನಾಪುರ  ಚುನಾವಣೆ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಬಲಬಂದಂತಾಗಿದೆ.

ನಿಖೀಲ್ ವಿ. ಶಂಕರ್
ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ
ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ

****

ಕರ್ನಾಟಕ ಕಾಂಗ್ರೆಸ್ ಚುನಾವಣಾ ಸಮಿತಿಗೆ ನಮ್ಮ ಶಾಸಕರನ್ನು ನೇಮಕ ಮಾಡಿರುವುದು ಕಲ್ಯಾಣ ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಬಲ ಬಂದಂತಾಗಿದೆ.ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಬಲವರ್ಧನೆ ಗೊಳಿಸಲು ನಾವೆಲ್ಲರೂ ಶಾಸಕರ ಜೊತೆ ಭೂತ್ ಮಟ್ಟದಲ್ಲಿ ಪಕ್ಷವನ್ನು ಬಲಗೊಳಿಸಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇವೆ.

 

ಶಾಂತು ಪಾಟೀಲ್ ಕಾಡಂಗೇರಾ
ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಯುವ ಕಾಂಗ್ರೆಸ್ ಘಟಕ ಯಾದಗಿರಿ

About The Author