ಸಂಗೋಳ್ಳಿ ರಾಯಣ್ಣ ವೃತ್ತ ತೆರವು ಖಂಡನೀಯ, ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಬಿಎಮ್ ಪಾಟೀಲ್

ವಡಗೇರಾ : ಹಾಸನ ಜಿಲ್ಲೆಯ ‌ಹೊಳೆನರಸಿಪುರ ತಾಲೂಕಿನ ಶ್ರವಣೂರಿನಲ್ಲಿರುವ ಕ್ರಾಂತಿವೀರ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ವೃತ್ತವನ್ನು ತೆರವುಗೊಳಿಸಿದ ಕ್ರಮ ಖಂಡನಿಯ.ಪುನಃ ವೃತ್ತವನ್ನು ಪ್ರತಿಷ್ಠಾಪಿಸದಿದ್ದರೆ  ಉಗ್ರ ಹೋರಾಟ ಮಾಡುವುದಾಗಿ ರಾಜ್ಯ ಯುವ ಕುರುಬರ  ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ಎಚ್ಚರಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಸಂಗೊಳ್ಳಿ ರಾಯಣ್ಣನ ವಿಚಾರದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರಾಯಣ್ಣನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಎಲ್ಲಾ ಸಮುದಾಯದವರು ನಾವೆಲ್ಲರು ಜಾತ್ಯತೀತವಾಗಿ ಬದುಕುತ್ತಿದ್ದೇವೆ. ಮಾಡಿ.ಇನ್ನು ಮೂರರಿಂದ ನಾಲ್ಕು ತಿಂಗಳ ಒಳಗೆ ಚುನಾವಣೆ ಬರುತ್ತಿದ್ದು,ಈ ಕ್ಷೇತ್ರದಲ್ಲಿ ಸಮುದಾಯದ ಬಗ್ಗೆ ಕಾಳಜಿ ಇರುವವರು, ಜಾತ್ಯತೀತ ವಾದಿಗಳಾಗಿ ಇರುವವರನ್ನು ಕ್ಷೇತ್ರದಿಂದ  ಆಯ್ಕೆ ಮಾಡಿ ಎಂದು ಸಮುದಾಯದವರಿಗೆ ಕರೆ ಕೊಟ್ಟರು.
ಮೂರ್ತಿ ಅಲ್ಲಾ ವೃತ್ತ, ಹಾಗೆ ಪೇರನ್ವಾಡಿ ಅದು
ಬೆಳಗಾವಿಯ ಪೇರನ್ವಾಡಿಯಲ್ಲಿ ಇದೇ ರೀತಿಯ ಘಟನೆ ನಡೆದಾಗ ಆ ಸ್ಥಳದಲ್ಲಿ ಮತ್ತೆ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಅದೇ ರೀತಿಯಲ್ಲಿ ಮೈಸೂರು ಪ್ರಾಂತ್ಯದ ಈ ಭಾಗದಲ್ಲಿ ಅಂತಹ ಘಟನೆ ನಡೆಯಬಾರದು ಎಂದು ಎಚ್ಚರಿಸಿದರು.
 ಹಾಸನ ಜಿಲ್ಲಾಧಿಕಾರಿಗಳು ಸಂಗೊಳ್ಳಿ ರಾಯಣ್ಣನ ವೃತ್ತದ ತೆರವು ವಿಚಾರದಲ್ಲಿ ಸಮುದಾಯದ ಮತ್ತು ಇತರ ನಾಯಕರ ಸಭೆ ಕರೆದಿದ್ದು. ನಾವು ಭಾಗವಹಿಸುತ್ತಿದ್ದೇವೆ. ರಾಯಣ್ಣನ ವಿಚಾರ ಬಂದಾಗ ಉಗ್ರವಾಗಿ ಇರಬೇಕಾಗುತ್ತದೆ ಎಂದು ಪರೋಕ್ಷವಾಗಿ ಅಧಿಕಾರಿಗಳಿಗೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯ ಯುವ ಮಹಿಳಾ ಕಾರ್ಯಧ್ಯಕ್ಷರಾದ ಮಂಜುಳಾ ನಾರಾಯಣ, ಬೆಂಗಳೂರು ನಗರ ಯುವ ಜಿಲ್ಲಾಧ್ಯಕ್ಷರಾದ ಮುತ್ತತ್ತಿ, ಹಾಸನ ಜಿಲ್ಲಾಧ್ಯಕ್ಷರಾದ ಮಹೇಶ ಕಬ್ಬಾಳ, ಹಾಸನ ಜಿಲ್ಲಾ ಕುರುಬರ ಸಂಘದ ಮುಖಂಡರಾದ ಶೇಷೆಗೌಡ, ಪ್ರಸನ್ನ ಕುಮಾರ, ಮಂಜೇಗೌಡ, ಜಯಶಂಕರ, ಅಹಿಂದ ಅಧ್ಯಕ್ಷ ಮೋಹನ, ಚಂದ್ರೇಗೌಡ, ಡಿಟಿ ಸುರೇಶ, ಪುಟ್ಟೇಗೌಡ ಸೇರಿದಂತೆ ಸಮುದಾಯದ ಕಾರ್ಯಕರ್ತರು ಇದ್ದರು.

About The Author