ಯಾದಗಿರಿ ವಿಧಾನಸಭಾ ಕ್ಷೇತ್ರ : ಕುರುಬ ಜನಾಂಗದವರಿಗೆ ಟಿಕೆಟ್ ನೀಡಲು ಆಗ್ರಹ

ವಡಗೇರಾ : 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು ಅದರಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರ ರಣರೋಚಕವಾಗಿ ಮಾರ್ಪಡುತ್ತಿದೆ. ಜಿಲ್ಲೆಯಾದ್ಯಂತ ಕುರುಬರ ಮತದಾರರು ಹೆಚ್ಚಿದ್ದು, ಯಾದಗಿರಿ ಕ್ಷೇತ್ರಕ್ಕೆ ಕುರುಬ ಸಮಾಜದವರಿಗೆ ಟಿಕೆಟ್ ನೀಡುವಂತೆ ಕ್ಷೇತ್ರದಾದ್ಯಂತ ಕುರುವ ಸಮಾಜದವರು ಆಗ್ರಹಿಸುತ್ತಿದ್ದಾರೆ.
ಕಲ್ಯಾಣ ಕರ್ನಾಟಕದಲ್ಲಿ 41 ವಿಧಾನಸಭಾ ಕ್ಷೇತ್ರಗಳಿದ್ದು, ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕುರುಬ ಸಮಾಜದವರಿಗೆ ಟಿಕೆಟ್ ನೀಡಿದೆ. ಉಳಿದಂತೆ 41  ಕ್ಷೇತ್ರಗಳಲ್ಲಿ ಯಾವ ಕುರುಬ ಸಮಾಜದ ಕಾಂಗ್ರೆಸ್ ವಿಧಾನಸಭಾ ಅಭ್ಯರ್ಥಿಗಳಿಲ್ಲ.
ಸಿದ್ದರಾಮಯ್ಯನವರೊಬ್ಬರೇ ಮುಖ್ಯಮಂತ್ರಿಗಳಾದರೆ ಸಾಲದು.ಎರಡನೇ ಹಂತದ ನಾಯಕರು ಬೆಳೆಯಬೇಕಿದೆ.ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಹಲವಾರು ಜನರು ಅರ್ಜಿ ಸಲ್ಲಿಸಿದ್ದು.ಕೆಲವರು ಸುಮಾರು ವರ್ಷಗಳಿಂದ ತಳಮಟ್ಟದಿಂದ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದವರನ್ನು ಪಕ್ಷ ಗುರುತಿಸಿ ಟಿಕೆಟ್ ನೀಡಬೇಕಿದೆ.
ಡಾ.ಭೀಮಣ್ಣ ಮೇಟಿಗೆ ಟಿಕೆಟ್ ನೀಡಲು ಆಗ್ರಹ
ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಶೈಕ್ಷಣಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಡಾ. ಭೀಮಣ್ಣ ಮೇಟಿ ಯವರು ಸಮರ್ಥರಾಗಿದ್ದು, ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದು, ಭೀಮಣ್ಣ ಮೇಟಿ
ಯವರಿಗೆ ಕಾಂಗ್ರೆಸ್ ಪಕ್ಷ 2023ರ ಚುನಾವಣೆಗೆ ಟಿಕೆಟ್ ನೀಡಬೇಕೆಂದು ಸಿದ್ದರಾಮಯ್ಯ ಬ್ರಿಗೇಡ್ ಜಿಲ್ಲಾಧ್ಯಕ್ಷರಾದ ಬಸವರಾಜ ಅತ್ನೂರು ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆಯಾದ್ಯಂತ ಕುರುಬರು ಬಹು ಸಂಖ್ಯಾತರಾಗಿದ್ದು,ಸುರಪುರದಲ್ಲಿ 65,000, ಶಹಪುರದಲ್ಲಿ 58000,ಯಾದಗಿರಿಯಲ್ಲಿ 43000, ಗುರುಮಿಠಕಲ್ ದಲ್ಲಿ 35000 ಕುರುಬ ಮತದಾರರಿದ್ದು, ಕಾಂಗ್ರೆಸ್ ಬಿಜೆಪಿ  ಪಕ್ಷಗಳು ಟಿಕೆಟ್ ನೀಡದೆ ವಂಚಿಸಿವೆ. ಇಲ್ಲಿಯವರೆಗೆ ಕುರುಬರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ.ಯಾದಗಿರಿ ಜಿಲ್ಲೆಯಲ್ಲಿ ಕುರುಬರಿಗೆ ವಿಧಾನಸಭಾ ಟಿಕೆಟ್ ನೀಡಬೇಕೆಂದು ಕುರುಬರ ಬಲವಾದ ಒತ್ತಾಯವಿದ್ದು.ಕೋಳೂರು ಮಲ್ಲಪ್ಪನವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೂ ಕುರುಬ ಸಮಾಜದ ಯಾವ ನಾಯಕರಿಗೆ ಟಿಕೆಟ್ ನೀಡಲಾಗಿಲ್ಲ.2023ರ ಚುನಾವಣೆಯಲ್ಲಿ ಡಾ. ಭೀಮಣ್ಣ ಮೇಟಿ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ.
ಕೋಳೂರು ಮಲ್ಲಪ್ಪನವರನ್ನು ಹೊರತುಪಡಿಸಿ ಇದುವರೆಗೂ ಯಾವೊಬ್ಬ ನಾಯಕರನ್ನು ಕಾಂಗ್ರೆಸ್ ಪಕ್ಷ ಗುರುತಿಸಿಲ್ಲ.ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಡಾ.ಭೀಮಣ್ಣ ಮೇಟಿ ಯವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಬೇಕು.ಕ್ಷೇತ್ರದಲ್ಲಿ 38,000 ಕುರುಬ ಮತದಾರರಿದ್ದು,ಹಿಂದುಳಿದ ವರ್ಗದವರೆಂದು ಪರಿಗಣಿಸಿ ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಪ್ರಬಲವಾಗಿರುವ ಡಾ. ಭೀಮಣ್ಣ ಮೇಟಿ ಯವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೊಟ್ಟರೆ ಗೆಲ್ಲುವ ಸಂಭವ ಹೆಚ್ಚಳವಿದೆ. 
ಬಸವರಾಜ ಅತ್ನೂರು
ಜಿಲ್ಲಾಧ್ಯಕ್ಷರು
ಸಿದ್ದರಾಮಯ್ಯ ಬ್ರಿಗೇಡ್ ಯಾದಗಿರಿ

About The Author