ನಿಜವಾಯಿತು ಮಹಾಶೈವ ಪೀಠಾಧ್ಯಕ್ಷರ ನುಡಿಮಂತ್ರ : ದೊರಕಿತು ಸರಕಾರ ಹುದ್ದೆ : ಯಲ್ಲಪ್ಪ ಹೀರೆದಿನ್ನಿ

ವಡಗೇರಾ: ಗಬ್ಬೂರಿನ ಮಹಾಶೈವ ಪೀಠಾಧ್ಯಕ್ಷರ ಆಶೀರ್ವಾದದಂತೆ ಅವರು ಹೇಳಿಕೊಟ್ಟ ಮಂತ್ರವನ್ನು ದಿನಂಪ್ರತಿ ಜಪಿಸಿದ ಫಲವಾಗಿ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪರೀಕ್ಷೆಯನ್ನು ಬರೆದಿದ್ದು ಅದರ ಅಂತಿಮ ಆಯ್ಕೆ ಪಟ್ಟಿಯ ದಿನಾಂಕ 25.11.2022 ರಂದು ಪ್ರಕಟಿಸಿದ್ದು, ಅದರಲ್ಲಿ ಕಲ್ಯಾಣ ಕರ್ನಾಟಕ(KK) ಭಾಗ SDA(ಶಿಕ್ಷಣ ಇಲಾಖೆ)ಮತ್ತು ನಾನ್ ಕಲ್ಯಾಣ ಕರ್ನಾಟಕವಲ್ಲದ ಭಾಗ(NKK) ದಲ್ಲಿ ಎರಡರಲ್ಲಿ SDA(ದ್ವಿತೀಯ ದರ್ಜೆ ಸಹಾಯಕ ಖಜಾನೆ ಇಲಾಖೆ) ಯಲ್ಲಿ ಯಲ್ಲಪ್ಪ ಎಂ. ಹೀರೆದಿನ್ನಿ ಎಂಬ ನಾನು ಆಯ್ಕೆಯಾಗಿದ್ದೇನೆ ಎನ್ನುತ್ತಾನೆ ಯಲ್ಲಪ್ಪ ಹಿರೇದಿನ್ನಿ.

ಹಿನ್ನಲೆ

ಮಹಾಶೈವ ಪೀಠಾಧ್ಯಕ್ಷರ ಬಳಿ ಬಂದು ಆಶೀರ್ವಾದ ಪಡೆದಿದ್ದು.

ದಿನಾಂಕ 23 -6 -2022ರಂದು ಯಲ್ಲಪ್ಪ (ಪೊಲೀಸ್ ಇಲಾಖೆ) ಮುತ್ತಣ್ಣ(ಆರೋಗ್ಯ ಇಲಾಖೆ) ಸೇರಿ 5 ಜನರು ಮಲ್ಲಪ್ಪ ಎಸ್.ನಿಂಗಪ್ಪ. ಯಲ್ಲಪ್ಪ .ಎಂ ಈ ಮೂರು ಜನರ ಬಗ್ಗೆ ಹಿರೇದಿನ್ನಿ ಗ್ರಾಮದಿಂದ ಗಬ್ಬೂರಿನ ಮಹಾಶೈವ ಧರ್ಮಪೀಠವನ್ನು ತಲುಪಿದೆವು.ಪೀಠಾಧ್ಯಕ್ಷರನ್ನು ಭೇಟಿ ಮಾಡಿ ಅವರೊಂದಿಗೆ ಎರಡು ಗಂಟೆಗಳ ಕಾಲ ಚರ್ಚೆ ಮಾಡಿ ನಮ್ಮ ಮನಸ್ಸಿನ ಭಾವನೆಗಳನ್ನು ತೊಂದರೆ, ನೋವು, ಯಾತನೆಗಳು ಮತ್ತು ಸಮಸ್ಯೆಗಳನ್ನು ಪೀಠಾಧ್ಯಕ್ಷರ ಮುಂದೆ ಹಂಚಿಕೊಂಡೆವು.

ಯಲ್ಲಪ್ಪ ಹಿರೇದಿನ್ನಿ KPSC ಯಲ್ಲಿ ಆಯ್ಕಯಾದ‌ ಅಭ್ಯರ್ಥಿ “

ನಾವು ಬಿಎ ಮುಗಿಸಿ 4 ವರ್ಷವಾಯಿತು. ಬಿಎಡ್, ಎಂಎ ಶಿಕ್ಷಣ ಕೂಡ ಮುಗಿಸಿದ್ದೇವೆ.ಇನ್ನೂ ನಮಗೆ ಸರ್ಕಾರಿ ಹುದ್ದೆ ಸಿಗುತ್ತಿಲ್ಲ.ಸುಮಾರು 6 ವರ್ಷದಿಂದ ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದೇವೆ. ಎಷ್ಟೆ ಪರೀಕ್ಷೆ ಬರೆದರೂ ಯಾವ ಪರೀಕ್ಷೆಯಲ್ಲಿ ಪಾಸಾಗುತ್ತಿಲ್ಲ. ಮಾನಸಿಕವಾಗಿ ನೊಂದು ಬೆಂದು ಕೊನೆಗೆ ನಿಮ್ಮಲ್ಲಿಗೆ ಬಂದಿದ್ದೇವೆ. ಇದಕ್ಕೆ ಪರಿಹಾರ ಹೇಳಿ ಎಂದು ಪೀಠಾಧ್ಯಕ್ಷರನ್ನು ಕೇಳಿದೆವು.

ಪ್ರತಿಯೊಬ್ಬರನ್ನು ವಿಚಾರಿಸಿ ಯಾವ ವಿಷಯ ಓದುತ್ತಿದ್ದೀರಿ, ಏನು ಮಾಡಬೇಕೆಂದಿದ್ದೀರಿ,ಈಗ ಎಲ್ಲಿದ್ದೀರಿ, ನಿಮ್ಮ ಮುಂದಿನ ಗುರಿ ಉದ್ದೇಶಗಳೇನು,ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದರು.ನಾವು ಕೂಡ ಎಲ್ಲಾ ವಿಷಯಗಳನ್ನು ಅವರೊಂದಿಗೆ ಮನಸ್ಸು ಬಿಚ್ಚಿ ಹಂಚಿಕೊಂಡೆವು.

ಕೊನೆಗೆ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರರವರು ಚಿಂತಿಸಬೇಡಿ ಎಂದು ಹೇಳಿ ಒಂದು ಮಂತ್ರವನ್ನು ಪ್ರತಿ ದಿನ 108 ಬಾರಿ ಜಪಿಸಿದರೆ ಎಲ್ಲವೂ ದೊರೆಯುತ್ತದೆ. ನಿಮಗೆ ನೀವು ಅಂದುಕೊಂಡದ್ದು ಆಗುತ್ತದೆ. ಯಶಸ್ಸು ಸಿಗುತ್ತದೆ ಎಂದು ಆಶೀರ್ವಚನ ನೀಡಿದರು.ವಿಶ್ವೇಶ್ವರ ದುರ್ಗೆ ಮತ್ತು ವಿಶ್ವೇಶ್ವರ ಶಿವ ಒಳ್ಳೆಯದು ಮಾಡುತ್ತಾನೆ ನಿಮಗೆ ಯಶಸ್ಸು ಸಿಗುತ್ತದೆ ಎಂದು ತಿಳಿಸಿದರು.

ಪೀಠಾಧ್ಯಕ್ಷರು ನೀಡಿದ ಪರಿಹಾರದ ನುಡಿಯಂತೆ ನಾವು ಅವರ ಆಶೀರ್ವಾದದಂತೆ ಅವರ ಹೇಳಿದ ಮಂತ್ರವನ್ನು ಪಾಲಿಸಿದ್ದಕ್ಕಾಗಿ ನಮಗೆ ಇಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪರೀಕ್ಷೆಯನ್ನು ಬರೆದಿದ್ದು ಅದರ ಅಂತಿಮ ಆಯ್ಕೆ ಪಟ್ಟಿಯ ದಿನಾಂಕ:25.11.2022 ರಂದು ಪ್ರಕಟಿಸಿದರು.ಅದರಲ್ಲಿ ಕಲ್ಯಾಣ ಕರ್ನಾಟಕ(KK) ಭಾಗSDA ,(ಶಿಕ್ಷಣ ಇಲಾಖೆ) ಮತ್ತು ನಾನ್ ಕಲ್ಯಾಣ ಕರ್ನಾಟಕ(NKK) ದಲ್ಲಿ ಎರಡರಲ್ಲಿ SDA(ದ್ವಿತೀಯ ದರ್ಜೆ ಸಹಾಯಕ ಖಜಾನೆ ಇಲಾಖೆ)ಯಲ್ಲಿ ಯಲ್ಲಪ್ಪ ಹೀರೆದಿನ್ನಿ ಎಂಬ ನಾನು ಆಯ್ಕೆಯಾಗಿದ್ದೇನೆ.ಮಲ್ಲಪ್ಪ ಎಂಬ ಮತ್ತೋರ್ವ ವ್ಯಕ್ತಿ ಮುಂದಿನ ಆಯ್ಕೆ ಪಟ್ಟಿ ಬಿಟ್ಟರೆ ಆಗುವುದರಲ್ಲಿದೆ.ವಸತಿ ಮೇಲ್ವಿಚಾರಕ 1:3ರಲ್ಲಿಯೂ ಹೆಸರಿದೆ.ನನ್ನ ಬಹುದಿನದ ಸರ್ಕಾರಿ ನೌಕರಿಯ ಆಸೆ ನನಸಾಯಿತು.

ಮಹಾಶೈವ ಧರ್ಮಪೀಠಾಧ್ಯಕ್ಷರ ನುಡಿಯು ನಮ್ಮ ಬದುಕಿಗೆ ಬೆಳಕಾಯಿತು.ಒಂದು ಶಕ್ತಿ ಸ್ಥಳ ನೊಂದವರ- ಬೆಂದವರ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವ ಆಧುನಿಕ ಯುಗದ ಪವಿತ್ರ ಸ್ಥಳವಾಗಿದೆ ಎಂದರೆ ತಪ್ಪಾಗಲಾರದು.ಪೀಠಾಧ್ಯಕ್ಷರ ಆಶೀರ್ವಾದ ಶಿವ ದುರ್ಗೆಯರ ಕೃಪೆಯಿಂದ ನಮಗೆ ಇಂದು ಆಶೀರ್ವಚನ ರೂಪದಲ್ಲಿ ಉದ್ಯೋಗಗಳು ಹುಡುಕಿಕೊಂಡು ಬಂದಿವೆ.

About The Author