ವಡಗೇರಾ : ವಡಗೇರಿ ತಾಲೂಕಿನ ಬಸವಂತಪುರ ಗ್ರಾಮದಲ್ಲಿ ಕಳೆದ 10 ದಿನಗಳ ಕೆಳಗೆ ಸಾಲ ಭಾದೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ಸಿದ್ಲಿಂಗಪ್ಪ /ನಾಗಪ್ಪ ಎಂಬ ರೈತನ ಮನೆಗೆ ಕಾಂಗ್ರೆಸ್ ಮುಖಂಡರಾದ ಭೀಮಣ್ಣ ಮೇಟಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಟುಂಬದವರಿಗೆ ಸಹಾಯಧನ ನೀಡಿ ಮಾತನಾಡಿದ ಅವರು ಮೃತ ರೈತನ ಮಕ್ಕಳಾದ ಚೇತನ್ ಮತ್ತು ಮಲ್ಲಿಕಾರ್ಜುನ ಮಕ್ಕಳಿಗೆ ನಮ್ಮ ಡಿಡಿಯು ಸಂಸ್ಥೆಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಲಾಗುವುದು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಕ್ಕಂತಾಗುತ್ತದೆ. ಕುಟುಂಬದವರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ಮುರಾರ್ಜಿ ಶಾಲೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ.ಹೆಣ್ಣು ಮಕ್ಕಳಿಗೆ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿ ಎಂದರು.
ಗ್ರಾಮ ದೇವತೆ ಮರೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತೆಯ ಆಶೀರ್ವಾದ ಪಡೆದರು.
ಮೃತ ರೈತ ಸಿದ್ದಲಿಂಗಪ್ಪನಿಗೆ ಎರಡು ಎಕರೆ ಜಮೀನು ಇದೆ.ನಾಲ್ಕು ಜನ ಮಕ್ಕಳಿದ್ದು, ಗ್ರಾಮ ಪಂಚಾಯಿತಿಯಿಂದ ಬಂದಿರುವ ಮನೆ ಕಟ್ಟಡ ನಿರ್ಮಾಣ ಹಂತದಲ್ಲಿದೆ.
ಈ ಸಂದರ್ಭದಲ್ಲಿ ಹನುಮಂತ ದೊರೆ ಟೋಕಪೂರ ಮಲ್ಲಯ್ಯ ಪೂಜಾರಿ ಟೋಕಪೂರ ದೇವೇಂದ್ರಪ್ಪ ಗ್ರಾಮ.ಪಂ.ಸದಸ್ಯರು,ಶಂಕರಗೌಡ,ಮರೆಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಪಂ ಮಾಜಿ ಅಧ್ಯಕ್ಷರು, ಮಲ್ಲಣ್ಣ ಚೇರ್ಮನ್, ಹೊನ್ನಯ್ಯ ಬಸಂತಪುರ, ಮೌನೇಶ್ ಚಂದಾಪುರ, ಮಾನಪ್ಪ ಸೇರಿದಂತೆ ಇತರರು ಇದ್ದರು.