ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರ : ಆನೆಕಾಲು ರೋಗ ಬಾರದಂತೆ ತಪ್ಪದೆ ತ್ರಿವಳಿ ಮಾತ್ರೆ ಸೇವಿಸಿ : ಬಸವರಾಜ ಸಜ್ಜನ

ವಡಗೇರ : ಆನೆಕಾಲು ರೋಗ ಬಂದು ಹಲವು ವರ್ಷಗಳ ಕಾಲ ನರಳುವ ಬದಲು ಮುನ್ನೆಚ್ಚರಿಕೆ ಕ್ರಮವಾಗಿ ಆನೆಕಾಲು ರೋಗ ನಿವಾರಕ ಮಾತ್ರೆಗಳನ್ನು ಸೇವಿಸಬೇಕು.ಆನೆಕಾಲು  ರೋಗವನ್ನು ಬೇರು ಸಹಿತ ಕಿತ್ತು ಹಾಕಲು ಕಾರ್ಮಿಕರೆಲ್ಲರೂ ಸೇವಿಸಬೇಕು.ಡಿಇಸಿ, ಅಲ್ಬೆಂಡಜೋಲ್ ಹಾಗೂ ಐವರ್‌ಮೆಕ್ಟಿನ್‌ ಗಳನ್ನು ಸೇವಿಸುವುದರಿಂದ ಮುಂದಿನ ದಿನಗಳಲ್ಲಿ ಆನೇಕಲ್ ರೋಗ ಬರುವುದಿಲ್ಲ ಎಂದು ಸಹಾಯಕ (ನರೇಗಾ) ನಿರ್ದೇಶಕರಾದ ಬಸವರಾಜ ಸಜ್ಜನ ತಿಳಿಸಿದರು.ಸೈದಾಪುರದಲ್ಲಿ ನಡೆದ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಇವರ ಸಹಯೋಗದಲ್ಲಿ  ಸಾಮೂಹಿಕ ಕೃಷಿ ಹೊಂಡ   ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣ ಶಿಬಿರಕ್ಕೆಚಾಲನೆ ನೀಡಿ ಮಾತನಾಡಿದರು.

ನರೇಗಾದಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿರುವುದರಿಂದ ಸ್ಥಳದಲ್ಲಿಯೇ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.ಪ್ರತಿ ಗ್ರಾಮ ಪಂಚಾಯಿತಿಯು ಸೇರಿದಂತೆ ಕೂಲಿಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಆರೋಗ್ಯ ಶಿಬಿರವನ್ನು ಕೈಗೊಳ್ಳಲಾಗಿದ್ದು,ಇತರ  ಕಾಯಿಲೆಗಳಾದ ಬಿಪಿ, ಸಕ್ಕರೆ ಕಾಯಿಲೆಗಳನ್ನು ತಪಾಸಣೆ ಮಾಡಲಾಗುವುದು. ಗಂಭೀರ ಕಾಯಿಲೆಗಳು ಕಂಡುಬಂದರೆ ಜಿಲ್ಲಾ ಅಥವಾ ತಾಲೂಕ ಆಸ್ಪತ್ರೆ ಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.ಆರೋಗ್ಯ ಶಿಬಿರದಲ್ಲಿ ನರೇಗಾ ಕೂಲಿ ಕಾರ್ಮಿಕರ  ಬಿಪಿ ಮತ್ತು ಶುಗರ್ ತಪಾಸಣೆ ಮಾಡಲಾಯಿತು. ಭೀಮರೆಡ್ಡಿ,ಮಮಲಪ್ಪ ಶಾಬಾದಿ, ಆರೋಗ್ಯ ಸಹಾಯಕರು ಸೇರಿದಂತೆ ಕೂಲಿಕಾರ್ಮಿಕರು ಇದ್ದರು.

ಕೂಲಿಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲಾಗುತ್ತಿದ್ದು, ಶಿಬಿರದಲ್ಲಿ ಸರಕಾರಿ ವೈದ್ಯರು ಪಾಲ್ಗೊಳ್ಳುವರು. ಆನೆಕಾಲು ರೋಗ ಸಹಿತ ಕೂಲಿಕಾರ್ಮಿಕರಿಗೆ ಇತರ ಗಂಭೀರ ಕಾಯಿಲೆಗಳಿದ್ದರೆ  ಅಂಥವರನ್ನು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿ ಕೊಡಲಾಗುವುದು.

 

ಬಸವರಾಜ ಸಜ್ಜನ

ಸಹಾಯಕ (ನರೇಗಾ) ನಿರ್ದೇಶಕರು

 

 

 

 

About The Author