ಕಲ್ಯಾಣ ಕಾವ್ಯ : ಬೋಧೆ ಎಂಬ ಭ್ರಮೆ ! : ಮುಕ್ಕಣ್ಣ ಕರಿಗಾರ

   ಕರೆಕರೆದು ಬೋಧಿಸಿ
   ಗುರುಗಳಾದೆವೆಂಬಿರಿ
   ನೂರು ಸಾವಿರ ಶಿಷ್ಯರೆನಗೆಂದು
  ಜಂಬ ಕೊಚ್ಚುವಿರಿ
  ಗುರುಬೋಧೆ ಎಂಬುದು ಸಂತೆಯ ಸರಕೆ
 ಕೊಂಡು ಖರೀದಿಸಲು ?
 ಉಪದೇಶವೆಂಬುದು ಲೇವಾದೇವಿ ವ್ಯವಹಾರವೆ
ದೇಣಿಗೆ ಕಾಣಿಕೆಗಳ ಕೊಟ್ಟು ಧನ್ಯರಾಗಿರಿ ಎನ್ನಲು ?
 ಹಣದಾಸೆಗೆ ಶಿಷ್ಯರ ಮಾಡಿಕೊಂಡವನೆತ್ತಣ ಗುರು ?
ಗುರುವೆಂತಿಹನೆಂದು ವಿಚಾರಿಸದೆ
ಶರಣೆಂದು ಶಿಷ್ಯನಾದ ಮಂದಮತಿ ಎತ್ತಣ ಶಿಷ್ಯ ?
ಪರತತ್ತ್ವವನ್ನರಿಯದವನು ಗುರುವಲ್ಲ
ಗುರುತತ್ತ್ವ ತಿಳಿಯದವನು ಶಿಷ್ಯನಲ್ಲ
ಗುರುಪಾದದಿ ಶರಣೆಂದ ಶಿಷ್ಯನ
ಭವದಬೀಜವ ಸುಟ್ಟುರುಹಬಲ್ಲವನೆ
ನಿಜಗುರುವೆಂದಿತ್ತು
ಕೈಲಾಸನಾಥ ವಿಶ್ವೇಶ್ವರನ ಸತ್ಯವಚನ.

About The Author