ಮಹಾಶೈವ ಧರ್ಮಪೀಠದಲ್ಲಿ 27 ನೆಯ ‘ ಶಿವೋಪಶಮನ ಕಾರ್ಯ’

ಬಸವರಾಜ ಕರೆಗಾರ
ವಾರ್ತಾಧಿಕಾರಿ,ಮಹಾಶೈವ ಧರ್ಮಪೀಠ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದಲ್ಲಿ 11.12.2022 ರ ರವಿವಾರದಂದು ಇಪ್ಪತ್ತೇಳನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರದ ಆಸರೆಯನ್ನರಸಿ ಬಂದಿದ್ದ ಭಕ್ತರುಗಳಲ್ಲಿ ಒಂದುನೂರಾ ಎಂಟು ಜನರಿಗೆ ‘ ಶಿವಾಭಯ’ ವನ್ನು ಪ್ರಸಾದಿಸಿದರು.

ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಮುಕ್ಕಣ್ಣ ಕರಿಗಾರ ಅವರು ಶ್ರೀಕ್ಷೇತ್ರ ಕೈಲಾಸದ ಶಿವ ವಿಶ್ವೇಶ್ವರನ ಸನ್ನಿಧಿಗೆ ಬರುವ ಭಕ್ತರ ಕಷ್ಟ,ಸಂಕಷ್ಟಗಳನ್ನು ಶಿವಾನುಗ್ರಹದಿಂದ ಪರಿಹರಿಸುವುದೇ ‘ ಶಿವೋಪಶಮನ ಕಾರ್ಯ’. ಶ್ರೀಕ್ಷೇತ್ರಕ್ಕೆ ಎಲ್ಲ ಬಗೆಯ ಸಮಸ್ಯೆಗಳನ್ನು ಹೊತ್ತು ಬರುವ ಭಕ್ತರ ಸಮಸ್ಯೆಗಳಿಗೆಲ್ಲ ಪರಿಹಾರ ನೀಡುತ್ತಾರೆ ಶ್ರೀ ಮುಕ್ಕಣ್ಣ ಕರಿಗಾರ ಅವರು.ಸಂತಾನಾರ್ಥಿಗಳು,ರೋಗಪೀಡಿತರು,ಸಾಂಸಾರಿಕ ತೊಂದರೆಗೊಳಗಾದವರು,ಗಂಡಬಿಟ್ಟವರು,ಹೆಂಡತಿ ಸೇರದವರು,ಮಾನಸಿಕ ಅಸ್ತವ್ಯಸ್ಥರು,ಪಾರ್ಶ್ವವಾಯುವಿನಂತ ಭಯಂಕರ ಕಾಯಿಲೆ ಪೀಡಿತರುಗಳು ಪ್ರತಿರವಿವಾರ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಪೀಠಾಧ್ಯಕ್ಷರ ಬಳಿ ಸಮಸ್ಯೆ ನಿವೇದಿಸಿಕೊಳ್ಳುತ್ತಾರೆ.ಪೀಠಾಧ್ಯಕ್ಷರು ಭಕ್ತರ ಸಮಸ್ಯೆಗಳನ್ನು ಶಿವನಲ್ಲಿ ಅರಿಕೆಮಾಡಿಕೊಂಡು ವಿಶ್ವೇಶ್ವರನ ಅಭಯ ಕರುಣಿಸುತ್ತಾರೆ.ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರನು ‘ ಮಾತನಾಡುವ ಮಹಾದೇವ’ ಎಂದು ಹೆಸರಾಗಿದ್ದರೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ ಭವರೋಗ ವೈದ್ಯ’ ರಾಗಿ ಆಧ್ಯಾತ್ಮಿಕ ಉಪದೇಶ ನೀಡುವುದರ ಜೊತೆಗೆ ಭಕ್ತರ ರೋಗ ಸಂಕಷ್ಟಗಳನ್ನು ಕಳೆಯುತ್ತ ,ಅಸಾಧ್ಯ ಕೆಲಸ ಕಾರ್ಯಗಳನ್ನು ಸುಲಭವಾಗಿ ಆಗುಮಾಡುತ್ತ ಆಧುನಿಕ ಕಾಲದ ‘ ಮಂತ್ರರ್ಷಿ’ ಗಳಾಗಿ,ಮಹರ್ಷಿಗಳಾಗಿ ಲೋಕಸಮಸ್ತರನ್ನು ಉದ್ಧರಿಸುವ ಮಹಾಸಿದ್ಧರಾಗಿ ಪ್ರಸಿದ್ಧರಾಗಿದ್ದಾರೆ.

About The Author