ಬಿಜೆಪಿ ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆ : ಪಕ್ಷದ ಗೆಲುವಿಗಾಗಿ ಶ್ರಮಿಸೋಣ–ಅಮರನಾಥ ಪಾಟೀಲ್

ಶಹಾಪೂರ : ಶಹಾಪುರ ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಯಾರಿಗೇ ಟಿಕೆಟ್ ಕೊಟ್ಟರು ನಾವೆಲ್ಲರೂ ಸೇರಿ ಪಕ್ಷವನ್ನು ಗೆಲ್ಲಿಸೋಣ. ಪಕ್ಷದ ತೀರ್ಮಾನವೆ ಅಂತಿಮ. ಕಾರ್ಯಕರ್ತರು, ಮತದಾರರು, ಫಲಾನುಭವಿಗಳು ಬಿಜೆಪಿ ಪಕ್ಷದ ಜೀವಾಳವೆಂದು ಯಾದಗಿರಿ ಜಿಲ್ಲಾ ಉಸ್ತುವಾರಿಗಳಾದ ಅಮರನಾಥ ಪಾಟೀಲ್ ಹೇಳಿದರು.ಇಂದು ನಗರದ
ಭೀ,ಗುಡಿಯ‌ ಭುವನೇಶ್ವರಿ ಸಾಂಸ್ಕೃತಿಕ ಭವನದಲ್ಲಿ ಮಂಟಪದಲ್ಲಿ ನಡೆದ ತಾಲೂಕು ಗ್ರಾಮೀಣ ಮಂಡಲ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡುತ್ತಾ, ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಗಳಿಸಲಿದೆ ಎಂದರು.

ಪ್ರಧಾನಿಗಳ ಅಭಿವೃದ್ಧಿ, ವಿಶ್ವದಲ್ಲಿ ಭಾರತ ದೇಶಕ್ಕೆ ಅವರು ತಂದುಕೊಟ್ಟಂತಹ ಗೌರವ, 80 ವರ್ಷದಲ್ಲಿ ಆಗದ ಕಾರ್ಯ ನಮ್ಮ ಪಕ್ಷ ಮಾಡಿದೆ. ವಿಶ್ವದಲ್ಲಿಯೇ ಅತಿ ದೊಡ್ಡ ಪಕ್ಷ ನಮ್ಮದು. ಪಕ್ಷದ ಗೆಲುವಿಗಾಗಿ ಬೂತ್ ಮಟ್ಟದಿಂದ ಕಾರ್ಯ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಶರಣ ಭೂಪಾಲರೆಡ್ಡಿ ನಾಯ್ಕಲ್ ಮಾತನಾಡುತ್ತಾ, ಕಾರ್ಯಕರ್ತರು ಪಕ್ಷದ ಜೀವಾಳ. ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ಬರಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಎಂದು ಹೇಳಿದರು.

ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕಂದಕೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಕಾಮಾ, ವೆಂಕಟರೆಡ್ಡಿ ಅಬ್ಬೆತುಮಕೂರ,ಎಪಿಎಂಸಿ ಅಧ್ಯಕ್ಷರಾದ ಸೋಮನಗೌಡ,ಡಾ.ಮಲ್ಲನಗೌಡ ಉಕ್ಕಿನಾಳ,ಯಲ್ಲನಗೌಡ ವನದುರ್ಗ, ಯುವ ಪ್ರಧಾನ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕರಿಬಸವ ಬಿಳ್ಹಾರ ಸೇರಿದಂತೆ ಮಂಡಲದ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶರಣು ಮಂಡಗಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಪ್ರತಿ ತಿಂಗಳಿಗೊಮ್ಮೆ ತಾಲೂಕು ಗ್ರಾಮೀಣ ಮಂಡಲ ಕಾರ್ಯಕಾರಣಿ ಸಭೆ ನಡೆಯಲಿದ್ದು, ಪಕ್ಷ ಕೊಟ್ಟಿರುವ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ. ತಾಲೂಕಿನಲ್ಲಿ ಬರುವ 218 ಬೂತ್ ಗಳಲ್ಲಿ ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಮಾಡಲಾಗುತ್ತಿದ್ದು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸೇರಿದಂತೆ, ರಾಷ್ಟ್ರ ನಾಯಕರ ಹುಟ್ಟು ಹಬ್ಬದ ದಿನಾಚರಣೆಗಳು, ಕೆಂಭಾವಿ ಗೋಗಿ ಶಿರವಾಳ ಗ್ರಾಮಗಳಲ್ಲಿ ಪಕ್ಷದ ಬಲವರ್ಧನೆಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಪಕ್ಷದ ಬಲವರ್ಧನೆ ಮಾಡಲಾಗುತ್ತಿದೆ.

“ರಾಜುಗೌಡ ಉಕ್ಕಿನಾಳ ಅಧ್ಯಕ್ಷರು
ಬಿಜೆಪಿ ಗ್ರಾಮೀಣ ಮಂಡಲ ಶಹಾಪುರ.

About The Author