371 ಜೆ ಕಲಂ ರೂವಾರಿ ಎಐಸಿಸಿ ಅಧ್ಯಕ್ಷರು ಡಾ. ಮಲ್ಲಿಕಾರ್ಜುನ್ ಖರ್ಗೆಯವರ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ

ಶಹಪೂರು : ಡಿ.10 ರಂದು ಕಲಬುರ್ಗಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆಯವರ ಅಭಿನಂದನಾ ಸಮಾರಂಭವು  ಎನ್ ಬಿ ಮೈದಾನದಲ್ಲಿ ನಡೆಯಲಿದ್ದು,ಕಾರ್ಯಕ್ರಮಕ್ಕೆ ಸಾವಿರಾರು ಜನರು ಪಾಲ್ಗೊಳ್ಳುವರು ಎಂದು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಇಂದು ಭೀ ಗುಡಿಯ ಬಲಭೀಮೇಶ್ವರ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಡಾ.ಮಲ್ಲಿಕಾರ್ಜುನ ಖರ್ಗೆ ರವರು ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಮೂಲತಃ ನಮ್ಮ ಯಾದಗಿರಿ ಜಿಲ್ಲೆಯವರು. 50 ವರ್ಷಗಳ ತಮ್ಮ ರಾಜಕೀಯ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 371 ಜೆ ಕಲಂನಿಂದ ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ.ಇದರಿಂದ ಇಲ್ಲಿನ ಜನರಿಗೆ ವೈದ್ಯರು ಇಂಜಿನಿಯರ್ಗಳು ನಮ್ಮ ಭಾಗದವರಿಗೆ ದಕ್ಕುವಂತಹದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ರಾಜ್ಯ ಸರ್ಕಾರ ಹಗರಣಗಳು,ಭ್ರಷ್ಟಾಚಾರ, ಬೆಲೆಏರಿಕೆಗಳೇ ರಾಜ್ಯ ಸರ್ಕಾರದ ಸಾಧನೆಗಳಾಗಿವೆ,ಸಿದ್ದರಾಮಯ್ಯನವರು ಜಾರಿಗೆ ತಂದಂತಹ ಅನ್ನಭಾಗ್ಯ ಶೂ ಭಾಗ್ಯ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ವಿತರಣೆ ಮಾಡುವಂತಹ ಜನಪರ ಯೋಜನೆಗಳನ್ನು ಕೈಬಿಟ್ಟರು.ಇಂತಹ ಸರಕಾರ ನಮಗೆ ಬೇಡ.2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ.ಜನಪರ ಕೆಲಸಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಉಸ್ತುವಾರಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಅರುಣ್ ಕುಮಾರ್ ಹರಳಿ ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜಪ್ಪಗೌಡ ದಶ೯ನಾಪುರ ಕೆಪಿಸಿಸಿರಾಜ್ಯ ಪ್ರಧಾನ ಕಾರ್ಯದರ್ಶಿ ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ಚಂದ್ರಶೇಖರ ಆರ್ಬೋಳ, ಅಯ್ಯಣ್ಣ ಕನ್ಯಾಕೋಳೂರು, ನೀಲಕಂಠ ಬಡಿಗೇರ್ ಬಸವರಾಜ ಪಾಟೀಲ್ ಚಿಂಚೋಳಿ, ಇಬ್ರಾಹಿಂ ಶಿರವಾಳ ಶಿವಮಾಂತಪ್ಪ ಸಾಹು, ಕಾಂಗ್ರೆಸ್ ಪಕ್ಷದ ಮುಖಂಡರು ಕಾಯ೯ಕತ೯ರು ಅಭಿಮಾನಿಗಳು ನಗರಸಭೆಯ ಸದಸ್ಯರುಗಳು ಪುರಸಭೆಯ ಸದಸ್ಯರುಗಳು ಗ್ರಾಮ ಪಂಚಾಯತ್ ಸದಸ್ಯರುಗಳು ಮಾಜಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ ಪಂಚಾಯತ್ ಸದಸ್ಯರುಗಳು  ಹಾಗೂ ಕಾಂಗ್ರೆಸ್ ಪಕ್ಷದ ವಿವಿಧ  ಘಟಕದ ಅಧ್ಯಕ್ಷರು ಸದಸ್ಯರುಗಳು ಹಾಗೂ ಅಪಾರ ಜನಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು

About The Author