ನೈರ್ಮಲ್ಯ ಜಾಗೃತಿ ವಾಹನಕ್ಕೆ ಚಾಲನೆ : ಗ್ರಾಮೀಣ ಪ್ರದೇಶದಲ್ಲಿ ಶುಚಿತ್ವಕ್ಕೆ ಮಹತ್ವ ಕೊಡಬೇಕಿದೆ : ಸೋಮಶೇಖರ ಬಿರಾದರ

ಶಹಾಪೂರ : ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶುಚಿತ್ವಕ್ಕೆ ಮಹತ್ವ ಕೊಡಬೇಕಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರಾದರ ಕರೆ ನೀಡಿದರು.ಇಂದು ತಾಲೂಕು ಪಂಚಾಯಿತಿ ಆವರಣದಲ್ಲಿ ವರ್ಲ್ಡ್ ವಿಷನ್ ಸಂಸ್ಥೆ ಹಾಗೂ ಯೂನಿಸೆಫ್ ಸಂಸ್ಥೆ ಸಹಯೋಗದಲ್ಲಿ ತಾಲೂಕಿನ ಐದು ಗ್ರಾಮ  ಪಂಚಾಯತಗಳಾದ‌ ಹತ್ತಿಗುಡೂರ ಬೀರನೂರು ಕನ್ಯಾಕೊಳ್ಳೂರ ರಸ್ತಾಪೂರ ಹೋತಪೇಟಗಳಲ್ಲಿ  ನೈರ್ಮಲ್ಯ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ನೈರ್ಮಲ್ಯ ನೈರ್ಮಲ್ಯ ರಥ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ನೈರ್ಮಲ್ಯ ರಥದ ಮೂಲಕ ಗ್ರಾಮೀಣ ಜನತೆಗೆ ಜಾಗೃತಿ ಮೂಡಿಸುವ ಮುಖಾಂತರ ಶುಚಿತ್ವದ ಬಳಕೆ ಕೈ ತೊಳೆದುಕೊಳ್ಳುವುದು ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳುವುದು ಶೌಚಾಲಯದ ಬಳಕೆಯ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.ನೈರ್ಮಲ್ಯ ರಥ ವಾಹನವು ಐದು ಪಂಚಾಯಿತಿಗಳಲ್ಲಿ ದಿನವೊಂದಕ್ಕೆ ಒಂದು ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುವರು.ಈ ಸಂದರ್ಭದಲ್ಲಿ ಸ್ವಚ್ಚ ಭಾರತ ಅಭಿಯಾನದ ಜಿಲ್ಲಾ ಸಂಯೋಜಕರಾದ ಶಿವುಕುಮಾರ ವರ್ಲ್ಡ್ ಮಿಷನ್ ಸಂಸ್ಥೆಯ ಕಾರ್ಯಕರ್ತರು ಇದ್ದರು.

 

About The Author