ಪುಟ್ ಪಾತ್  ಅತಿಕ್ರಮಣ : ಪಾದಚಾರಿ ಮಾರ್ಗ ಬಂದ್ : ರಸ್ತೆಯ ಮೇಲೆ ಓಡಾಡುತ್ತಿರುವ ಪಾದಚಾರಿಗಳು

ಬಸವರಾಜ ಕರೇಗಾರ
basavarajkaregar@gmail.com

***

ವಡಗೇರಾ : ವಡಗೇರಾ ಮತ್ತು ಶಹಾಪುರ ಸೇರಿದಂತೆ ಹಲವು ನಗರಗಳಲ್ಲಿನ ಪುಟ್ಪಾತ್ಗಳನ್ನು ಬೀದಿ ಬದಿ ವ್ಯಾಪಾರಿಗಳು ಅತಿಕ್ರಮಣ ಮಾಡಿಕೊಂಡಿದ್ದು, ಪಾದಾಚಾರಿಗಳು ಓಡಾಡದಂತೆ ರಸ್ತೆಯ ಮೇಲೆ ಓಡಾಡುವ ಸ್ಥಿತಿ ಉಂಟಾಗಿದೆ.ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದ ಶಹಪುರದಲ್ಲಿ ಬಟ್ಟೆ ಅಂಗಡಿ,ಚಹಾ ಅಂಗಡಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳು ಪುಟ್ ಪಾತ್ ಅತಿಕ್ರಮಣ ಮಾಡಿಕೊಂಡಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ಕಷ್ಟವಾಗಿದೆ.ಪಾದಚಾರಿಗಳು ರಸ್ತೆಯ ಮೇಲೆ ಓಡಾಡುತ್ತಿರುವುದರಿಂದ ನಗರದಲ್ಲಿ ಅಪಘಾತಗಳು ಪಾದಚಾರಿಗಳ ಮೇಲೆ ಆಗುತ್ತಿವೆ.ಇದಕ್ಕೆಲ್ಲ ಪಾದಾಚಾರಿಗಳ ಮಾರ್ಗವನ್ನು ಡಬ್ಬ ಅಂಗಡಿಗಳು ಅತಿಕ್ರಮಿಸುವುದೇ ಕಾರಣ !

“ಪಾದಚಾರಿ ಮಾರ್ಗದಲ್ಲಿ ಸಂಚಾರ ಮಾಡಲಾಗದ ಕಾರಣ ನಡುರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸುತ್ತಿರುವ ವ್ಯಕ್ತಿ”

***

ಸ್ಥಳೀಯ ಸಂಸ್ಥೆಗಳು ಪಾದಾಚಾರಿಮಾರ್ಗ ಅತಿಕ್ರಮಿಸಿಕೊಂಡವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಇದಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಡಗೇರಾ ಇನ್ನು ಗ್ರಾಮ ಪಂಚಾಯಿತಿಯಾಗಿದ್ದು ಇಲ್ಲಿ ಮಾರ್ಗವನ್ನು ಗುರುತಿಸಿಲ್ಲ.ಹೆಸರಿಗೆ ಮಾತ್ರ ತಾಲೂಕು ಕೇಂದ್ರವಾಗಿದೆಯೇ ಹೊರತು ತಾಲೂಕಿಗೆ ಸಂಬಂಧಿಸಿದ ಮಾರ್ಗಸೂಚಿಗಳು ಇನ್ನೂ ಜಾರಿಗೆ ಬರದೇ ಇರುವುದು ಕಾಕತಾಳಿಯವಾಗಿದೆ.

***

ಶಹಾಪುರ ನಗರದಲ್ಲಿ ನಗರಸಭೆ, ಹಳೆಬಸ್ ನಿಲ್ದಾಣ,ರೈತರ ಕೀಟನಾಶಕ ಅಂಗಡಿಗಳು,ಕಿರಾಣಿ ಅಂಗಡಿಗಳು, ಚಿನ್ನದ ಅಂಗಡಿಗಳು,ಬಟ್ಟೆ ಅಂಗಡಿಗಳು ಬಸವೇಶ್ವರ ವೃತ್ತದ ಕೇಂದ್ರದ ಸುತ್ತ ಇರುವುದರಿಂದ ಇದೇ ಸ್ಥಳಕ್ಕೆ ಎಲ್ಲಾ ಜನರು ಆಗಮಿಸುತ್ತಿದ್ದು ಈ ಸ್ಥಳ ಜನದಟ್ಟಣೆಯಿಂದ ಕೂಡಿರುತ್ತದೆ.ಬಸವೇಶ್ವರ ವೃತ್ತದಿಂದ ಚರ ಬಸವೇಶ್ವರ ಕಮಾನಿನವರೆಗೂ ಎರಡು ಬದಿಯಲ್ಲಿ ಪಾದಾಚಾರಿಗಳ ರಸ್ತೆಯನ್ನು ಸಂಪೂರ್ಣವಾಗಿ ವ್ಯಾಪಾರಸ್ಥರು  ಆಕ್ರಮಿಸಿಕೊಂಡಿದ್ದಾರೆ.

***

ತ್ರೀ ಚಕ್ರವಾಹನ, ದ್ವಿಚಕ್ರ ವಾಹನ, ಆಟೋಗಳು, ಟಂ ಟಂ ಗಾಡಿಗಳು ನಗರದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು,ಇದರಿಂದ ಸಾರ್ವಜನಿಕರು ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ.ಇದರ ಬಗ್ಗೆ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಂಡು ಕೆಲವು ವಾಹನಗಳಿಗೆ ನಿಗದಿಯಾದ ಸ್ಥಳವನ್ನು ಗುರುತಿಸಬೇಕಾಗಿದೆ.

***

“ಡಬ್ಬ ಅಂಗಡಿಗಳು ಶಹಾಪೂರ ನಗರದ ಪಾದಚಾರಿಗಳ ಮಾರ್ಗದ ಮೇಲೆ ಅತಿಕ್ರಮಣ ಮಾಡಿಕೊಂಡಿರುವ”

***

   ನಗರದಲ್ಲಿ ಪಾದಚಾರಿಗಳು ಓಡಾಡುವುದಕ್ಕೆ ಮಾರ್ಗವಿದ್ದರೂ ಚಹಾ ಮತ್ತು ಇತರ ಅಂಗಡಿಗಳು ಅನಧಿಕೃತವಾಗಿ ನಿರ್ಮಾಣಗೊಂಡ ತಾತ್ಕಾಲಿಕ ಅಂಗಡಿಗಳು ಅತಿಕ್ರಮಿಸಿದ್ದು ಪಾದಾಚಾರಿಗಳು ಓಡಾಡದ ಹಾಗೆ ಆಗಿದೆ.ರಸ್ತೆಯ ಮೇಲೆ ಓಡಾಡವುದರಿಂದ ಯಾವುದಾದರೂ ವಾಹನಗಳಿಂದ ಅಪಘಾತವಾಗುವ ಸಂಭವವಿದ್ದು, ಜೀವ ಕೈಯಲ್ಲಿಟ್ಟುಕೊಂಡು ಓಡಾಡಬೇಕಿದೆ.

 

ಬಸವರಾಜ
ಶಹಾಪುರ ನಿವಾಸಿ

***

ನಾನು ಮತ್ತು ನಗರಸಭೆ ಅಧಿಕಾರಿಗಳು ಪಾದಚಾರಿಮಾರ್ಗಗಳನ್ನು ಖುದ್ದಾಗಿ ವೀಕ್ಷಿಸಿದ್ದು, ಪಾದಚಾರಿ ಮಾರ್ಗದಲ್ಲಿರುವ ತಾತ್ಕಾಲಿಕ  ಅಂಗಡಿಗಳನ್ನು ತೆರವುಗೊಳಿಸಲು ಹೇಳಿದ್ದೇವೆ. ಆದಷ್ಟು ಬೇಗ ನಮ್ಮ ಕಡೆಯಿಂದ ನೋಟಿಸ್ ಜಾರಿ ಮಾಡಿ ಪಾದಾಚಾರಿಗಳಿಗೆ ಓಡಾಡಲು ಅನುಕೂಲ ಮಾಡಿಕೊಡಲಾಗುವುದು.

ರಮೇಶ ಬಡಿಗೇರ
ಪೌರಾಯುಕ್ತರು ಶಹಾಪುರ.

 

About The Author