ರಾಜ್ಯ ವಿಧಾನಸಭಾ ಚುನಾವಣಾ ಅಖಾಡ : ಡಾ.ಚಂದ್ರಶೇಖರ ಸುಬೇದಾರರಿಗೆ ಸಿಗುತ್ತಾ ಬಿಜೆಪಿ ಟಿಕೆಟ್ ?

ಬಸವರಾಜ ಕರೇಗಾರ
basavarajkaregar@gmail.com
*********
ಶಹಾಪೂರ : 2023ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷಗಳಲ್ಲಿ ಚುನಾವಣೆ ಕಾವು ಹೆಚ್ಚುತ್ತಿರುವ ಹಿನ್ನೆಲೆ, ಶಹಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವುದು ಇನ್ನೂ ನಿಗೂಢವಾಗಿ ಉಳಿದಿದೆ. ಮಾಜಿ ಶಾಸಕರಾದ ಗುರು ಪಾಟೀಲ್ ಶಿರವಾಳ, ಖ್ಯಾತ ವೈದ್ಯರಾದ ಹಿರಿಯ  ಬಿಜೆಪಿ ಮುಖಂಡರಾದ ಚಂದ್ರಶೇಖರ ಸುಬೇದಾರ, ಅಮೀನ್ ರೆಡ್ಡಿ ಯಾಳಗಿ ಈ ಮೂರು ಜನರಲ್ಲಿ ಬಿಜೆಪಿ ಟಿಕೆಟ್ ಗಾಗಿ ಪೈಪೋಟಿ ನಡೆದಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.
**
ಬಿಜೆಪಿ ಪಕ್ಷದಲ್ಲಿ ಹಿರಿಯ ನಾಯಕರಾದ ತಾಲೂಕಿನ ಖ್ಯಾತ ವೈದ್ಯರಾದ ಡಾ.ಚಂದ್ರಶೇಖರ ಸುಬೇದಾರ ಪಕ್ಷದ ಹಿರಿಯ ರಾಜಕಾರಣಿಯಾಗಿದ್ದು, ವೈದ್ಯ ವೃತ್ತಿಯ ಜೊತೆಗೆ ಅನೇಕ ಸಮಾಜ ಸೇವೆಯಲ್ಲಿ ಹಲವು ವರ್ಷಗಳಿಂದ ತಮ್ಮನ್ನು ತಾವೆ ತೊಡಗಿಸಿಕೊಂಡಿದ್ದಾರೆ.ತಾಲೂಕಿನಲ್ಲಿ ಸರ್ವರಿಗೂ ಚಿರಪರಿಚಿತರು. ಹೀಗಾಗಿ ಪಕ್ಷದ ಹೈಕಮಾಂಡ್ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಬಹುದು ?.
**
ಕೆಜೆಪಿ ಪಕ್ಷದಿಂದ ಶಾಸಕರಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಮಾಜಿ ಶಾಸಕರಾದ ಗುರು ಪಾಟೀಲ್, ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಬಂದ ಅಮೀನ್ ರೆಡ್ಡಿ ಯಾಳಗಿ ಟಿಕೆಟ್ ಆಕಾಂಕ್ಷಿಯಾಗಿದ್ದು ಈ ಮೂರು ಜನರ ನಡುವೆ ಟಿಕೆಟ್ ಗಾಗಿ ತೀವ್ರ ಪೈಪೋಟಿ ಇದೆ.
**
ಗ್ರಾಮೀಣ ಪ್ರದೇಶದಲ್ಲಿ ವೈದ್ಯಕಿಯ ಸೇವೆ ಸಲ್ಲಿಸುತ್ತಾ ಆರೋಗ್ಯ ಚಕ್ರ ವಾಹನದ ಮೂಲಕ ಪ್ರತಿ ಗ್ರಾಮದಲ್ಲೂ ಬಡ ರೋಗಿಗಳ ವಿಚಾರಣೆ ಮಾಡಿ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡುತ್ತಾ ಬಂದಿರುವ ಡಾ.ಚಂದ್ರಶೇಖರ ಸುಬೇದಾರ ಕಾರ್ಯ ಅಪಾರ.ಇದೊಂದು ಜನಸೇವೆ. ಕ್ಷೇತ್ರದಾದ್ಯಂತ ಚಿರಪರಿಚಿತರಾದ ಚಂದ್ರಶೇಖರ ಸುಬೇದಾರರ ಮಗನಾದ ಕರಣ ಸುಬೇದಾರ ಬಿಜೆಪಿ ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
**
 ಕರಣ ಸುಬೇದಾರ ಕಳೆದ ಗಣೇಶ ಉತ್ಸವದಲ್ಲಿ ಅಪಾರ ಜನಸ್ತೋಮ ಸೇರಿದ್ದರು. ಪಕ್ಷ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಬಹುದು ಎನ್ನುವ ನಿರೀಕ್ಷೆಯಲ್ಲಿದ್ದು, ಖಂಡಿತ ಗೆಲ್ಲುತ್ತೇವೆ ಎನ್ನುವ ಬಲವಾದ ನಂಬಿಕೆ ಇದೆ ಎನ್ನುತ್ತಾರೆ.ಆದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುತ್ತಾರೆ ಕಿರಣ್. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆ ಕಾದು ನೋಡಬೇಕಿದೆ.
**
ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಶಹಾಪುರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ಇದೆ ನಿಜ. ಕ್ಷೇತ್ರದಾದ್ಯಂತ ಮತದಾರರನ್ನು ಭೇಟಿಯಾಗಿದ್ದು, ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡುವ ಭರವಸೆ ಇದೆ. ಟಿಕೆಟ್ ಕೊಟ್ಟರೆ ಗೆಲುವಿಗಾಗಿ ಶ್ರಮಿಸುತ್ತೇವೆ. ಹೈಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರು ಅದಕ್ಕೆ ಬದ್ಧವಾಗಿದ್ದೇನೆ “
ಡಾ.ಚಂದ್ರಶೇಖರ ಸುಬೇದಾರ
 ಬಿಜೆಪಿ ಹಿರಿಯ ಮುಖಂಡರು
 ಶಹಪುರ ಮತಕ್ಷೇತ್ರ

About The Author