ಸ್ವಚ್ಛ ಶನಿವಾರ :  ಶಿರವಾಳ ಗ್ರಾಮದಲ್ಲಿ ಸ್ವಚ್ಛತೆ ಕಾರ್ಯಕ್ರಮ

ಶಹಾಪುರ : ತಾಲೂಕಿನ ಶಿರವಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳ ಮೊದಲನೇ ಶನಿವಾರದಂದು ಸರಕಾರದ ವತಿಯಿಂದ ಸ್ವಚ್ಛ ಶನಿವಾರ ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ ಬಿರಾದರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು,ಅಂಗನವಾಡಿ ಕೇಂದ್ರದ ಸುತ್ತಲಿನ ಮುಂದಿನ ಪ್ರದೇಶದವನ್ನು  ಸ್ವಚ್ಛಗೊಳಿಸಲಾಯಿತುಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿವಾರ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿದಿ, ಸಿಬ್ಬಂದಿ , ಗ್ರಾಮಸ್ಥರು, ಪ್ರಮುಖರು, ಯುವಕರು ಸೇರಿಕೊಂಡಿ ಸ್ವಚ್ಛತೆ ಮಾಡಿಬೇಕು ಎಂದು ಕರೆ ನೀಡಿದರು.

ಸ್ವಚ್ಛ ಭಾರತ್ ಜಿಲ್ಲಾ ಸಂಯೋಜಕರಾದ ಶಿವಕುಮಾರ ಮಾತನಾಡಿ ಸ್ವಚ್ಛ ಶನಿವಾರದ ಉದ್ದೇಶ, ಸ್ವಚ್ಛತೆಗೆ ಸಂಬಂದಪಟ್ಟ ಚಟುವಟಿಕೆಗಳನ್ನು ಸಮುದಾಯದ ನೇತೃತ್ದಲ್ಲಿ ಮಾಡಿಕೊಂಡು ಸಾರ್ವಜನಿಕರು ಸ್ವಚ್ಛತೆಯ ಅಭ್ಯಾಸಗಳನ್ನು ರೂಡಿಸಿಕೊಂಡಾಗ ಸ್ವಚ್ಛ ಗ್ರಾಮ ಆಗಲು ಸಾದ್ಯ. ಪ್ರತಿ ಕುಟುಂಬದಿಂದ ಶೌಚಾಲಯ ಬಳಕೆ ಮಾಡಿಕೊಳ್ಳಬೇಕು ಹಾಗೂ ಪ್ರತಿ ಮನೆಯಿಂದ ಕಸವನ್ನು ಸ್ವಚ್ಛವಾಹಿನಿಗೆ ಕೊಡಬೇಕು ಎಂದು ತಿಳಿಸಿದರು. ಶ್ರಮದಾನದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರತಿಜ್ಞೆ ವಿಧಿ ಭೋದಿಸಲಾಯಿತು.ಈ ಸಂದರ್ಭದಲ್ಲಿ  ಸುವರ್ಣಾ ಗ್ರಾಮ ಪಂಚಾಯತ ಅಧ್ಯಕ್ಷರು, ಪಂಚಾಯತ ಅಭಿವೃದ್ಧಿ ಅಧಿಕಾರಿ,ಗ್ರಾಪಂ.ಸದಸ್ಯರು ಎಸ್.ಡಿ.ಎಮ್ ಸಿ ಸದಸ್ಯರು, ಆಶಾ- ಅಂಗನವಾಡಿ ಕಾರ್ಯಕರ್ತೆಯರು, ಪಾಲ್ಗೊಂಡಿದ್ದರು..

 

Leave a Reply

Your email address will not be published. Required fields are marked *