ವಡಗೇರಾದಲ್ಲಿ ಸಹಬಾಳ್ವೆ ಸಮಾವೇಶ :ಟಿಪ್ಪು ಸುಲ್ತಾನ್ ಪ್ರಬುದ್ಧ ರಾಜನಾಗಿ ಆಡಳಿತ ನಡೆಸಿದ : ಜ್ಞಾನ ಪ್ರಕಾಶ ಶ್ರೀ

ವಡಗೇರಾ : ಟಿಪ್ಪು ಒಬ್ಬ ಮಹಾನ್ ದೇಶಭಕ್ತ. ಯಾರ ಗುಲಾಮ ನಾಗದೆ ದೇಶಕ್ಕಾಗಿ ಹೋರಾಡಿ, ಪ್ರಬುದ್ಧ ರಾಜನಾಗಿದ್ದ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಹಾ ಸಂಸ್ಥಾನ ಮಠದ ಪೂಜ್ಯಶ್ರೀ ಜ್ಞಾನ ಪ್ರಕಾಶ ಮಹಾಸ್ವಾಮಿಗಳು ಹೇಳಿದರು.ಹಜರತ್ ಟಿಪ್ಪು ಸುಲ್ತಾನ್ ಜಯಂತೋತ್ಸವದ ಅಂಗವಾಗಿ  ಸಮಿತಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಹಬಾಳ್ವೆ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.ವಡಗೇರಾದಲ್ಲಿ ಇಂತಹ ಕಾರ್ಯಕ್ರಮ ನೋಡಿ ತುಂಬ ಖುಷಿಯಾಗಿದೆ ಈ ರೀತಿಯ ಕಾರ್ಯಕ್ರಮಗಳು ಪ್ರತಿ ಜಿಲ್ಲೆ ಪ್ರತಿ ತಾಲೂಕು ಅಷ್ಟೆ ಅಲ್ಲ ಇಡಿ ದೇಶದಮೂಲೆ ಮೂಲೆಗಳಲ್ಲಿ ಆಗಬೇಕು ಎಂದರು.

ಚಿಂತಕರಾದ ಶ್ರೀ ಎ ಜೆ ಖಾನ್ ಅವರು ಮಾತನಾಡುತ್ತ ಸಂವಿಧಾನ ಮತ್ತು ಈ ಅಂಬೇಡ್ಕರ್ ಅವರ ಆಶಯಗಳು ಜೀವಂತವಾಗಿಡಲು ನಾವು ಗಟ್ಟಿಯಾಗಿ ದ್ವನಿಯೆತ್ತಬೇಕಿದೆ ಎಂದರು.ಪೂಜ್ಯಶ್ರೀ ಸಿದ್ಧಬಸವ ಕಬೀರ ಮಹಾಸ್ವಾಮಿಗಳು, ಶ್ರೀ ಮರುಳ ಶಂಕರ ದೇವರ ಗುರುಪೀಠ ಚಿಗರಹಳ್ಳಿ,ಪೂಜ್ಯಶ್ರೀ ಮರಿಸ್ವಾಮಿಗಳು ಶ್ರೀ ದುರ್ಗಾದೇವಿ ದೇವಸ್ಥಾನ, ಗೋನಾಲ ಸಾನ್ನಿಧ್ಯ ವಹಿಸಿದ್ದರು.ಬಾಷುಮಿಯಾ ವಡಗೇರಾ ಅವರು ಕಾರ್ಯಕ್ರಮದ ಅಧ್ಯಕ್ಷತ್ತೆ ವಹಿಸಿಕೊಂಡು ಪ್ರಸ್ತಾವಿಕವಾಗಿ ಮಾತನಾಡಿದರು.

ಮೊದಲಿಗೆ  ನಗರದ ಬೀದಿಗಳಲ್ಲಿ  ಬೈಕ್ ರ್ಯಾಲಿ ನಡೆಯಿತು. ಮಹಾತ್ಮಗಾಂಧೀಜಿ, ಡಾ.ಬಿ.ಆರ್.‌ಅಂಬೇಡ್ಕರ್, ಟಿಪ್ಪು ಸುಲ್ತಾನ್,ಸ್ವಾಮಿ ವಿವೇಕಾನಂದರು, ನಾರಾಯಣ ಗುರುಗಳು, ಕನಕದಾಸ ಅವರ ಸ್ತಬ್ದ ಚಿತ್ರಗಳು ಬಹುತ್ವ ಭಾರತವನ್ನು ಪ್ರತಿಬಿಂಬಿಸುತ್ತಿದ್ದವು. ಹನುಮೇಗೌಡ ಬಿರನಕಲ್, ಶ್ರೀ ನಿಖಿಲ ಶಂಕರ ಸೇರಿದಂತೆ ಇತರ ಮುಖಂಡರು ಭಾಗಿಯಾಗಿದ್ದರು.

 

About The Author